ಸುರತ್ಕಲ್: ವಿವಿಧ ದೈವಸ್ಥಾನಗಳ ಕಳ್ಳತನದ ಆರೋಪಿಯ ಬಂಧನ

Spread the love

ಸುರತ್ಕಲ್: ವಿವಿಧ ದೈವಸ್ಥಾನಗಳ ಕಳ್ಳತನದ ಆರೋಪಿಯ ಬಂಧನ

ಮಂಗಳೂರು: ಸುರತ್ಕಲ್ ಪೋಲಿಸ್ ಠಾಣಾ ಸರಹದ್ದಿನ ಕುಳಾಯಿ ಗ್ರಾಮದ ನಂದನಜಲು ಶ್ರೀ ರವಿ ಶೆಟ್ಟಿ ರವರ ಮನೆಯ ದೈವಸ್ನಾನ, ಇಡ್ಯಾ ಗ್ರಾಮದ ಗುಡ್ಡಕೊಪ್ಪಳ ಶ್ರೀ ರಾಮಾಂಜನೇಯ ಭಜನಾ ಮಂದಿರ, ಇಡ್ಯಾ ಗ್ರಾಮದ ಗುಡೆಕೊಪ್ಪಳ ಜಾರು ಮನೆ ದೈವಸ್ಥಾನದ ಮತ್ತು ಚಿತ್ತಾಪುರ ಗ್ರಾಮದ ಶ್ರೀ ಸತೀಶ್ ಸುವರ್ಣ ರವರ ಕುಟುಂಬದ ದೈವಸ್ಥಾನಗಳಲ್ಲಿ ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಇಂದ್ರಾಳಿ ದುರ್ಗಾನಗರ ನಿವಾಸಿ ರಾಜೇಶ್ ನಾಯ್ @ ರಾಜು ಪಾಮಡಿ (42) ಎಂದು ಗುರುತಿಸಲಾಗಿದೆ.

ಬಂಧಿತನಿಂದ ಸುರತ್ಕಲ್ ಪೋಲಿಸರು ಸುಮಾರು 47 ಗ್ರಾಮ್ ತೂಕದ ಚಿನ್ನದ ಹಾಗೂ ಸುಮಾರು 16 ಕೆಜಿ ತೂಕದ ಬೆಳ್ಳಿಯ ವಿವಿಧ ನಮೂನೆಯ ವಸ್ತುಗಳೊಂದಿಗೆ ಅಂದಾಜು ಸುಮಾರು ರೂ 13,52,000/- ಸ್ವಾಧೀನಪಡಿಸಿರುತ್ತಾರೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಐ.ಪಿ.ಎಸ್ ರವರ ನಿರ್ದೇಶನದಂತೆ ಉಪ ಪೊಲೀಸ್ ಆಯುಕ್ತರಾದ ಹರಿ ರಾಮ್ ಶಂಕರ್ ಐ.ಪಿ.ಎಸ್ (ಕಾ&ಸು) ಮತ್ತು ಪೊಲೀಸ್ ಉಪ ಆಯುಕ್ತರಾದ ವಿನಯ್ ಗಾವಂಕರ್ (ಅಪರಾಧ & ಸಂಚಾರ) ಸಹಾಯಕ ಪೊಲೀಸ್ ಆಯುಕ್ತರಾದ ಬೆಳ್ಯಪ್ಪ ರವರ ಮಾರ್ಗದಶ್ರನದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಚಂದ್ರಪ್ಪ ಕೆ, ಸುರತ್ಕಲ್ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಚಂದ್ರಶೇಖರಯ್ಯ (ಅಪರಾಧ ವಿಭಾಗ) ಮತ್ತು ಸಿಬ್ಬಂದಿಗಳಾದ ಅಣ್ಣಪ್ಪ , ಪೀಟರ್ ಡಿ ಸೋಜಾ, ಕೆ. ಮಂಜುನಾಥ, ಯರಬಾಳು ಬಸವರಾಜ, ಮನು, ಕಾರ್ಯಚರಣೆಯಲ್ಲಿ ಭಾಗವಹಿಸಿರುತ್ತಾರೆ.


Spread the love