ಸುರತ್ಕಲ್ ವೃತ್ತಕ್ಕೆ ಕೋಟಿ ಚೆನ್ನಯ್ಯ, ಶ್ರೀನಿವಾಸ ಮಲ್ಯ ಅಥವಾ ಎಂ.ಲೋಕಯ್ಯ ಶೆಟ್ಟಿ ನಾಮಕರಣ  ಮಾಡಬೇಕೆಂದು ಆಗ್ರಹಿಸಿ ಮನವಿ

Spread the love

ಸುರತ್ಕಲ್ ವೃತ್ತಕ್ಕೆ ಕೋಟಿ ಚೆನ್ನಯ್ಯ, ಶ್ರೀನಿವಾಸ ಮಲ್ಯ ಅಥವಾ ಎಂ.ಲೋಕಯ್ಯ ಶೆಟ್ಟಿ ನಾಮಕರಣ  ಮಾಡಬೇಕೆಂದು ಆಗ್ರಹಿಸಿ ಮನವಿ

ಸುರತ್ಕಲ್ ವೃತ್ತಕ್ಕೆ ವಿವಾದಿತ ವ್ಯಕ್ತಿಗಳ ಬದಲಾಗಿ ಕೋಟಿ ಚೆನ್ನಯ್ಯ, ಶ್ರೀನಿವಾಸ ಮಲ್ಯ ಅಥವಾ ಎಂ.ಲೋಕಯ್ಯ ಶೆಟ್ಟಿ ಅವರ ಪೈಕಿ ಒಬ್ಬರ ಹೆಸರನ್ನು ಆಯ್ಕೆ ಮಾಡಿ ನಾಮಕರಣ ಮಾಡಬೇಕೆಂದು ಆಗ್ರಹಿಸಿ ಮುಸ್ಲಿಮ್ ಐಕ್ಯತಾ ವೇದಿಕೆ ಸುರತ್ಕಲ್ ವಲಯ ನಿಯೋಗ ಗುರುವಾರ ಮ.ನ.ಪಾ ಆಯುಕ್ತರು ಹಾಗೂ ಮೇಯರ್ ಭೇಟಿ ಮಾಡಿ ಮನವಿ ಸಲ್ಲಿಸಿತು.

ನಿಯೋಗದಲ್ಲಿ ಮುಸ್ಲಿಮ್ ಐಕ್ಯತಾ ವೇದಿಕೆ ಅಧ್ಯಕ್ಷ ಅಶ್ರಫ್ ಬದ್ರಿಯಾ, ಉಪಾಧ್ಯಕ್ಷ ಅಬ್ದುಲ್ ಜಲೀಲ್ ಅದ್ದು, ಕಾರ್ಯದರ್ಶಿ ಕೆ.ಶರೀಫ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮ.ನ.ಪಾ ವಿಪಕ್ಷ ನಾಯಕ ನವೀನ್ ಡಿಸೋಜಾ, ಕಾರ್ಪೊರೇಟರ್ ಅಬ್ದುಲ್ ರವೂಫ್ ಉಪಸ್ಥಿತರಿದ್ದರು.


Spread the love