ಸುರತ್ಕಲ್: ಶಾಪಿಂಗ್ ಮಾಡಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಬಾಲಕಿ ನಾಪತ್ತೆ

Spread the love

ಸುರತ್ಕಲ್: ಶಾಪಿಂಗ್ ಮಾಡಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಬಾಲಕಿ ನಾಪತ್ತೆ

ಸುರತ್ಕಲ್: ಶಾಪಿಂಗ್ ಮಾಡಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಬಾಲಕಿ ನಾಪತ್ತೆಯಾಗಿರುವ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರತ್ಕಲ್ ಮುಕ್ಕ ಸಮೀಪದ ಮಿತ್ರಪಟ್ನ ಮಾತೃಛಾಯಾ ನಿವಾಸಿ ಸಂತೋಷ ಮತ್ತು ರೇಖಾ ದಂಪತಿಯ ಪುತ್ರಿ ಸ್ಪೂರ್ತಿ (17) ನಾಪತ್ತೆಯಾದ ಬಾಲಕಿ.

ಜೂ. 8ರಂದು ಬೆಳಿಗ್ಗೆ 8.30 ರ ಸುಮಾರಿಗೆ ಶಾಪಿಂಗ್ ಗೆ ಹೋಗುವುದಾಗಿ ಹೇಳಿ ಮುಕ್ಕ ಮಿತ್ರಪಟ್ನ ಮನೆಯಿಂದ ತೆರಳಿದ್ದ ಸ್ಪೂರ್ತಿ ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಗಾಬರಿಗೊಂಡ ಮನೆಯವರು ಸಂಬಂಧಿಕರು, ಸ್ನೇಹಿತರನ್ನು ವಿಚಾರಿಸಿದ್ದು, ಎಲ್ಲೂ ಆಕೆ ಪತ್ತೆಯಾಗಿಲ್ಲ. ಬಳಿಕ ಆಕೆಯ ತಾಯಿ ರೇಖಾ ಅವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಕುರಿತು ದೂರು ನೀಡಿದ್ದಾರೆ.

ಸ್ಪೂರ್ತಿ ರವರ ಚಹರೆ ಈ ಕೆಳಗಿನಂತಿದೆ.
1] ಪೂರ್ತಿ ಹೆಸರು: ಸ್ಪೂರ್ತಿ ಪ್ರಾಯ 17 ವರ್ಷ
2] ಎತ್ತರ: 5 ಅಡಿ
3] ಕಪ್ಪು ಕೂದಲು, ಎಣ್ಣೆ ಕಪ್ಪು ಮೇಬಣ್ಣ, ಸಾಧಾರಣ ಶರೀರ.
4] ಕನ್ನಡ, ತುಳು ಭಾಷೆ ಮಾತನಾಡುತ್ತಾರೆ.
5] ಧರಿಸಿದ ಬಟ್ಟೆ: ಬಿಳಿ ಬಣ್ಣದ ಟೀಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಬಲಕುತ್ತಿಗೆಯಲ್ಲಿ ಬಿಳಿ ಬಣ್ಣದ ಮಚ್ಚೆ 3 ಇಂಚಿನಲ್ಲಿದೆ ಕುತ್ತಿಗೆಯಲ್ಲಿ ಎದ್ದು ಕಾಣುತ್ತಿದೆ. ಕುತ್ತಿಗೆಯಲ್ಲಿ ಚಿನ್ನದ ಸರ ಹಾಗೂ ಸಣ್ಣ ತಾಯತ ಇದೆ.

ಈ ಮೇಲ್ಕಂಡ ಕಾಣೆಯಾದ ಸ್ಪೂರ್ತಿ ಇವರು ಪತ್ತೆಯಾದಲ್ಲಿ ಸುರತ್ಕಲ್ ಪೊಲೀಸ್ ಠಾಣಾ ದೂರವಾಣಿ ಸಂಖ್ಯೆ 0824-2220540, 9480805360, 9480802345 ನೇದಕ್ಕೆ ಅಥವಾ ಮಂಗಳೂರು ನಗರ ಕಂಟ್ರೋಲ್ ರೂಮ್ 0824-2220800 ಕ್ಕೆ ಕರೆ ಮಾಡಿ ಮಾಹಿತಿಯನ್ನು ನೀಡುವಂತೆ ಕೋರಬೇಕಾಗಿ ವಿನಂತಿ.


Spread the love