
Spread the love
ಸುರತ್ಕಲ್ ಹಲ್ಲೆ ಪ್ರಕರಣ – ಮತ್ತೋರ್ವ ಆರೋಪಿ ಬಂಧನ
ಮಂಗಳೂರು: ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸುರತ್ಕಲ್ ಪೊಲೀಸರು ಇನ್ನೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಇಡ್ಯಾ ನಿವಾಸಿ ಚೆನ್ನಪ್ಪ @ ಮುತ್ತು (18 ) ಎಂದು ಗುರುತಿಸಲಾಗಿದೆ.
ಜುಲೈ 16ರಂದು ಸಂಜೆ 04.30 ಗಂಟೆಗೆ ರೋಜರ್ ಡಿ ಕೋಸ್ಟಾ ರವರು ಪರಿಚಯದ ಜಾರ್ಕಂಡ್ ವಾಸಿ ಶಾಹಿಲ್ ಎಂಬುವವರೊಂದಿಗೆ ಮಳೆ ಬಂದ ಕಾರಣ ಜನತಾ ಕಾಲನಿಗೆ ಹೋಗುವ ರಸ್ತೆ ಬದಿಯಲ್ಲಿರುವ ಪಾಳು ಬಿದ್ದ ಮನೆಯ ಬಳಿ ನಿಂತುಕೊಂಡಿದ್ದ ಸಮಯ ಆರೋಪಿಗಳಾದ ಪ್ರಶಾಂತ್ ಭಂಡಾರಿ ಹಾಗೂ ಆತನ ಸಹಚರರು ಹಲ್ಲೆ ಮಾಡಿರುವುದಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಶಾಂತ್ ಭಂಡಾರಿ ಹಾಗೂ ಬಸವರಾಜ್ ನನ್ನು ಜುಲೈ 17 ರಂದು ದಸ್ತಗಿರಿ ಮಾಡಿದ್ದು ನ್ಯಾಯಾಲಯವು ಆರೋಪಿತರಿಗೆ ನ್ಯಾಯಂಗ ಬಂಧನ ವಿಧಿಸಿದೆ.
Spread the love