ಸುರತ್ಕಲ್ : 26 ವರ್ಷದ ವಿವಾಹಿತ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

Spread the love

ಸುರತ್ಕಲ್ : 26 ವರ್ಷದ ವಿವಾಹಿತ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಮಂಗಳೂರು: ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ನವ ವಿವಾಹಿತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಮಂಗಳೂರು ಬಾಳ ನಿವಾಸಿ ದಿವ್ಯ (26) ಎಂದು ಗುರುತಿಸಲಾಗಿದೆ.

ದಿವ್ಯ ಅವರು ಹರೀಶ್ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದು ಜನವರಿ 21 ರಂದು ನೆರೆಮನೆಯ ಕಾರ್ಯಕ್ರಮವೊಂದಕ್ಕೆ ಗಂಡ ಹೆಂಡತಿ ಇಬ್ಬರು ತೆರಳೀ್ದ್ದು ದಿವ್ಯಶ್ರೀ ಊಟ ಮುಗಿಸಿ ಮನೆಗೆ ಹೋಗಲು ಪತಿಯನ್ನು ಒತ್ತಾಯಿಸಿದ್ದು, ಅದಕ್ಕೆ ಪತಿ ಒಪ್ಪದೇ ಇದ್ದಾಗ ಆಕೆ ಒಬ್ಬಳೇ ಮನಗೆ ಬಂದಿದ್ದು, ಭಾನುವಾರ ಮಧ್ಯಾಹ್ನ ಇದೇ ವಿಚಾರದಲ್ಲಿ ಅಸಮಾಧಾನದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Please enter your comment!
Please enter your name here