ಸುರೇಂದ್ರ ಭಂಡಾರಿ ಕೊಲೆ ಪ್ರಕರಣ; ಇನ್ನಿಬ್ಬರು ಆರೋಪಿಗಳ ಬಂಧನ

Spread the love

ಸುರೇಂದ್ರ ಭಂಡಾರಿ ಕೊಲೆ ಪ್ರಕರಣ; ಇನ್ನಿಬ್ಬರು ಆರೋಪಿಗಳ ಬಂಧನ

ಮಂಗಳೂರು: ಸುರೇಂದ್ರ ಭಂಡಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಬೆಳ್ತಂಗಡಿ ತಾಲ್ಲೂಕಿನ,ಲಾಯಿಲ ಗ್ರಾಮದ ಪ್ರತೀಕ್(27) ಮತ್ತು ಬೊಂದೇಲ್ ನ ಕೊಂಚಾಡಿ ನಿವಾಸಿ ಜಯೇಶ್@ಸಚ್ಚು(28) ಎಂದು ಗುರುತಿಸಲಾಗಿದೆ.

ಬಂಟ್ವಾಳದ ಭಂಡಾರಿ ಬೆಟ್ಟುವಿನ, ವಸ್ತಿ ಅಪಾರ್ಟ್ ಮೆಂಟ್ ನ ಸುರೇಂದ್ರ ಭಂಡಾರಿ ಗೆ ಸಂಬಂಧಿಸಿದ ಪ್ಲಾಟ್ ನಲ್ಲಿ ಸುರೇಂದ್ರ ಭಂಡಾರಿ ಯವರನ್ನು ದುಷ್ಕರ್ಮಿಗಳು, ಕೊಚ್ಚಿ ಕೊಲೆ ನಡೆಸಿದ ಪ್ರಕರಣ ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಾಗಿ ತನಿಖೆಯಲ್ಲಿರುತ್ತದೆ.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳು ಸೇರಿದಂತೆ 9 ಆರೋಪಿಗಳ ಬಂಧನವಾಗಿ ಅವರುಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಮುಂದುವರೆದ ತನಿಖೆಯಲ್ಲಿ ಹೊರಬಂದ ಮಾಹಿತಿಯಂತೆ ಕೊಲೆ ಮಾಡಿದ ಪ್ರಮುಖ ಆರೋಪಿಗಳಾದ ಸತೀಶ್ ಮತ್ತು ಗಿರೀಶ್ ನಿಗೆ ತಲೆಮರೆಸಿಕೊಳ್ಳಲು ಆಶ್ರಯ,ವಾಹನ ಮತ್ತು ಹಣದ ವ್ಯವಸ್ಥೆ ಮಾಡಿದ್ದ ಹಾಗೂ ಇದಕ್ಕಾಗಿ 2,50,000 ರೂಪಾಯಿ ಹಣ ಪಡೆದಿದ್ದ ಬೆಳ್ತಂಗಡಿ ತಾಲ್ಲೂಕಿನ,ಲಾಯಿಲ ಗ್ರಾಮದ ಪ್ರತೀಕ್(27) ಮತ್ತು ಇದೇ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಾಯ ಹಾಗೂ ಪ್ರಮುಖ ಆರೋಪಿ ಶರಣ್ ಆಕಾಶಭವನ ನ ನಿರ್ದೇಶನದಂತೆ ಸುಫಾರಿ ಹಣವನ್ನುಆರೋಪಿ ಪ್ರದೀಪ್ @ಪಪ್ಪು ವಿನಿಂದ ಪಡೆದು ಹತ್ಯೆಗೆ ಸಹಕರಿಸಿದ್ದ ಮಂಗಳೂರು ತಾಲ್ಲೂಕಿನ ಬೊಂದೇಲ್ ನ ಕೊಂಚಾಡಿ ನಿವಾಸಿ ಜಯೇಶ್@ಸಚ್ಚು(28) ಎಂಬುವರನ್ನು ತನಿಖಾಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.


Spread the love