ಸುರೇಂದ್ರ ಭಂಡಾರಿ ಕೊಲೆ ಪ್ರಕರಣ – ಇಬ್ಬರು ಆರೋಪಿಗಳ ಬಂಧನ

Spread the love

ಸುರೇಂದ್ರ ಭಂಡಾರಿ ಕೊಲೆ ಪ್ರಕರಣ – ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ಬಂಟ್ವಾಳದ ಭಂಡಾರಿ ಬೆಟ್ಟುವಿನ ವಸ್ತಿ ಅಪಾರ್ಟ್ ಮೆಂಟ್ ನಲ್ಲಿ ನಡೆದ ಸುರೇಂದ್ರ ಭಂಡಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ

ಬಂಧಿತರನ್ನು ಬಂಟ್ವಾಳ ಅಮ್ಟಾಡಿ ನಿವಾಸಿ ಸತೀಶ್ ಕುಲಾಲ್ (39) ಮತ್ತು ಗಿರೀಶ್ (28) ಎಂದು ಗುರುತಿಸಲಾಗಿದೆ

ಆರೋಪಿಗಳು ಸೋಮವಾರ ಸಂಜೆ ಬಂಟ್ವಾಳದಲ್ಲಿ ತಲೆ ಮರೆಸಿಕೊಂಡು ಓಡಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧಾರದಲ್ಲಿ ಆರೋಪಿಗಳನ್ನು ಬಂಟ್ವಾಳ ವೃತ್ತ ನಿರೀಕ್ಷಕರು ಮತ್ತು ಬಂಟ್ವಾಳ ಪಿ ಎಸ್ ಐ ಬಂಧಿಸಿದ್ದಾರೆ.
ಆರೋಪಿಗಳ ವಿಚಾರಣೆಯಿಂದ ಹಲವು ಮಹತ್ವದ ಮಾಹಿತಿ ಹೊರಬಂದಿದ್ದು, ಕೂಲಂಕುಶ ತನಿಖೆ ಮುಂದುವರೆದಿದೆ.


Spread the love