Home Mangalorean News Kannada News ಸುಲಿಗೆ ಪ್ರಕರಣದ ಆರೋಪಿಗಳಿಬ್ಬರನ್ನು ಪತ್ತೆ ಹಚ್ಚಿದ ಬಂಟ್ವಾಳ ನಗರ ಪೊಲೀಸರು

ಸುಲಿಗೆ ಪ್ರಕರಣದ ಆರೋಪಿಗಳಿಬ್ಬರನ್ನು ಪತ್ತೆ ಹಚ್ಚಿದ ಬಂಟ್ವಾಳ ನಗರ ಪೊಲೀಸರು

Spread the love

ಸುಲಿಗೆ ಪ್ರಕರಣದ ಆರೋಪಿಗಳಿಬ್ಬರನ್ನು ಪತ್ತೆ ಹಚ್ಚಿದ ಬಂಟ್ವಾಳ ನಗರ ಪೊಲೀಸರು

ಮಂಗಳೂರು: ವ್ಯಕ್ತಿಯೊಬ್ಬರನ್ನು ಸುಲಿಗೆ ಮಾಡಿದ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಪುದು ನಿವಾಸಿ ಸಿರಾಜ್ @ ಮಹಮ್ಮದ್ ಇಸ್ಮಾಯಿಲ್ (19), ಶಾಕೀರ್ (18) ಎಂದು ಗುರುತಿಸಲಾಗಿದೆ

2018ರ ಅಕ್ಟೋಬರ್ 7ರಂದು ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಂಟ್ವಾಳ ನೆರೆ ಪರಿಹಾರ ರಸ್ತೆಯಲ್ಲಿ ನಿಂತಿದ್ದ ಪ್ರವೀಣ್ ಎಂಬುವವರಿಗೆ ರಿಡ್ಜ್ ಕಾರಿನಲ್ಲಿ ಬಂದ ಆರೋಪಿಗಳು ಹಲ್ಲೆ ನಡೆಸಿ, ಮೊಬೈಲ್ ಸುಲಿಗೆ ನಡೆದಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸುಲಿಗೆ ಗೈದ ಪ್ರಕರಣವನ್ನು ಬಂಟ್ವಾಳ ನಗರ ಪೊಲೀಸರು ಪತ್ತೆ ಹಚ್ಚಿದ್ದು, ಇಬ್ಬರು ಆರೋಪಿಗಳನ್ನು ಬಂದಿಸಿ, ಅವರಿಂದ ಸುಲಿಗೆ ಗೈದ 25,000/- ರೂ ಮೌಲ್ಯದ ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ ರಿಡ್ಜ್ ಕಾರನ್ನು ವಶಪಡಿಸಿಕೊಂಡಿದ್ದು,

ಲಕ್ಷ್ಮಿ ಪ್ರಸಾದ್ ಪೊಲೀಸ್ ಅಧೀಕ್ಷಕರು ದ.ಕ ಜಿಲ್ಲೆ, ಮಂಗಳೂರು ರವರ ಮಾರ್ಗದರ್ಶನದಂತೆ, ಸೈದುಲ್ ಅದಾವತ್, ಸಹಾಯಕ ಪೊಲೀಸ್ ಅಧೀಕ್ಷಕರು, ಬಂಟ್ವಾಳ ಉಪವಿಭಾಗರವರ ನಿರ್ದೇಶನದಂತೆ, ಬಂಟ್ವಾಳ ವೃತ್ತ ಪೊಲೀಸ್ ನಿರೀಕ್ಷಕರಾದ ಟಿ.ಡಿ. ನಾಗರಾಜ್ ರವರ ನೇತೃತ್ವದಲ್ಲಿ, ಹಾಗೂ ಬಂಟ್ವಾಳ ನಗರ ಪೊಲೀಸ್ ಉಪ ನಿರೀಕ್ಷಕರಾದ ಚಂದ್ರಶೇಖರ್ , ಹರೀಶ್ ಎಂ.ಆರ್ ಮತ್ತು ಸಿಬ್ಬಂದಿಗಳಾದ ಎ.ಎಸ್.ಐ ಸಂಜೀವ್, ಗಿರೀಶ್, ವಿವೇಕ, ಕುಮಾರ್, ನಜೀರ್, ಮಲ್ಲಿಕ್ , ರಾಘವೇಂದ್ರ ಹಾಗೂ ಕಂಪ್ಯೂಟರ್ ವಿಭಾಗದ ಸಂಪತ್ , ಹಾಗೂ ದಿವಾಕರ್ ರವರು ಈ ಪ್ರಕರಣವನ್ನು ಭೇದಿಸಲು ಯಶಸ್ವಿಯಾಗಿರುತ್ತಾರೆ.


Spread the love

Exit mobile version