ಸುಳ್ಯ: ಗುಂಡು ಹಾರಿಸಿಕೊಂಡ ಆತ್ಮಹತ್ಯೆಗೆ ಯತ್ನ

Spread the love

ಸುಳ್ಯ: ಗುಂಡು ಹಾರಿಸಿಕೊಂಡ ಆತ್ಮಹತ್ಯೆಗೆ ಯತ್ನ
 

ಸುಳ್ಯ: ವ್ಯಕ್ತಿಯೋರ್ವರು ಮನೆಯಲ್ಲಿ ಪಿಸ್ತೂಲಿನಿಂದ ತಲೆಗೆ ಗುಂಡು ಹಾರಿಸಿಕೊಂಡ ಪರಿಣಾಮ ಗಂಭಿರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸುಳ್ಯದಲ್ಲಿ ಸೋಮವಾರ (ಅ.24 ರಂದು) ಸಂಭವಿಸಿದೆ.

ಸುಳ್ಯ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶಾಂತಿ ಪ್ರಭು ಎಂಬವರ ಪತಿ ಸುಳ್ಯದ ಜಟ್ಟಿಪಳ್ಳ ನಿವಾಸಿ ಕೇಶವ ಪ್ರಭು ಎಂಬವರು ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿ ಎಂದು ತಿಳಿದುಬಂದಿದೆ.

ಇಂದು ಅವರ ಮನೆಯೊಳಗೆ ಈ ಘಟನೆ ನಡೆದಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಳ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.


Spread the love