
Spread the love
ಸುಳ್ಳು ವದಂತಿಯನ್ನು ನಂಬಬೇಡಿ: ಆರ್.ಚೇತನ್
ಮೈಸೂರು: ಮಕ್ಕಳ ಕಳ್ಳತನದ ಸುಳ್ಳು ವದಂತಿ ಹರಡಲಾಗಿದೆ. ಇದನ್ನು ಯಾರೂ ನಂಬಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದರು.
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಸಾರ್ವಜನಿಕರು ಇಬ್ಬರು ವ್ಯಕ್ತಿಗಳ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರು ಮಕ್ಕಳ ಕಳ್ಳರಲ್ಲ. ಮಂಡ್ಯ ಮತ್ತು ಕೋಲಾರ ಮೂಲದವರಾದ ಆ ವ್ಯಕ್ತಿಗಳು ಕಸ ಸಂಗ್ರಹಿಸುವವರು ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಮಕ್ಕಳ ಕಳ್ಳರ ತಂಡ ಬಂದಿರುವುದು ಸುಳ್ಳು. ಅನುಮಾನ ಬಂದರೆ 112ಗೆ ಕರೆ ಮಾಡಿ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಹಲ್ಲೆ ಮಾಡಬಾರದು. ಕಳೆದ ವರ್ಷದಿಂದ ಜಿಲ್ಲೆಯಲ್ಲಿ ಮಕ್ಕಳ ಕಳ್ಳತನವಾಗಿಲ್ಲ. 18 ವರ್ಷದೊಳಗಿನವರು ಕಾಣೆಯಾದರೆ ಅಪಹರಣವೆಂದು ಪ್ರಕರಣ ದಾಖಲಿಸಲಾಗುತ್ತಿದೆ. ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲಿ ಮಕ್ಕಳ ಕಳ್ಳತನದ ವರದಿಯಾಗಿಲ್ಲ ಎಂದು ತಿಳಿಸಿದರು.
Spread the love