ಸುವರ್ಣ ತ್ರಿಭುಜದಲ್ಲಿ ಪ್ರಾಣ ಕಳೆದುಕೊಂಡ ಮೋಗವೀರ ಕುಟುಂಬಕ್ಕೆ ಉದ್ಯೋಗ ನೀಡಲು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಒತ್ತಾಯ

Spread the love

ಸುವರ್ಣ ತ್ರಿಭುಜದಲ್ಲಿ ಪ್ರಾಣ ಕಳೆದುಕೊಂಡ ಮೋಗವೀರ ಕುಟುಂಬಕ್ಕೆ ಉದ್ಯೋಗ ನೀಡಲು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಒತ್ತಾಯ

ಉಡುಪಿ: ಸುವರ್ಣ ತ್ರಿಭುಜದಲ್ಲಿ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಪ್ರಾಣ ಕಳೆದುಕೊಂಡ ಮೋಗವೀರ ಕುಟುಂಬಕ್ಕೆ ಉದ್ಯೋಗ ನೀಡಲು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಒತ್ತಾಯ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರಿಗೆ ಮನವಿ ಸಲ್ಲಿಸಿದೆ.

ಮಂಗಳವಾರ ಮೀನುಗಾರರ ಸಮಸ್ಯೆ ಆಲಿಸಲು ಉಡುಪಿ ಜಿಲ್ಲೆಗೆ ಆಗಮಿಸಿದ ಮಾಜಿ ಸಚಿವ,ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿಕೆ ಶಿವಕುಮಾರ್ ಆಗಮಿಸಿದ ವೇಳೆ ನೂರಾರು ಮೀನುಗಾರರು ಡಿಕೆ ಶಿವಕುಮಾರ್ ಮುಂದೆ ತಮ್ಮ ಅಳಲನ್ನು ತೊಡಿಕೊಮಡು ಬೇಡಿಕೆಯನ್ನು ಇಟ್ಟರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ದೀಪಕ್ ಕೋಟ್ಯಾನ್ ನೇತೃತ್ವದಲ್ಲಿ ಕರಾವಳಿಗರಿಗೆ ಮರೆಯಲಾದ ಸುವರ್ಣ ತ್ರಿಭುಜ ಬೋಟ್ ದುರಂತದ ಕುರಿತು ಮನವಿ ಸಲ್ಲಿಸಲಾಯಿತು.

2018 ರ ಡಿಸೆಂಬರ್‌ 15ರಂದು “ಸುವರ್ಣ ತ್ರಿಭುಜ” ಬೋಟ್  ನಾಪತ್ತೆಯಾಗಿದ್ದು  ಚುನಾವಣಾ ದುರುದ್ದೇಶದಿಂದ ನೌಕಾಸೇನೆ ಡಿಕ್ಕಿ ಹೊಡೆದ ವಿಚಾರ ಮುಚ್ಚಿಟ್ಟು ಬಡ ಮೀನುಗಾರ ಕುಟುಂಬದೊಂದಿಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಅನ್ಯಾಯ ಮಾಡಿತ್ತು.

ಘಟನೆಯಿಂದ ಮೋಗವೀರರು ಮೃತರಾಗಿದ ಕುಟುಂಬಗಳಿಗೆ ಸರಕಾರ ಕೇವಲ 10 ಲಕ್ಷ ರೂಪಾಯಿ ಪರಿಹಾರ ನೀಡಿ ಕೈತೊಳೆದುಕೊಂಡಿದೆ. ಆದರೆ ಜೀವನಕ್ಕೆ ಆಧರವಾಗಿದ್ದ ಮನೆಯ ಸದಸ್ಯರನ್ನು ಕಳೆದುಕೊಂಡ ಕುಟುಂಬ ಸಂಕಷ್ಟದಲ್ಲಿ ಬಳಲುತ್ತಿದ್ದೆ. ಆದ್ದರಿಂದ ಕೇಂದ್ರ ಸರಕಾರ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಸರಕಾರಿ ಉದ್ಯೋಗ ನೀಡಬೇಕೆಂದು ಈ ಮೂಲಕ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಒತ್ತಾಯಿಸಿದೆ.


Spread the love