ಸುಶೀಲ್ ನೊರೊನ್ಹಾ ಮನೆಗೆ ಬಿ ಎಂ ಫಾರೂಕ್ ಭೇಟಿ, ಕುಟುಂಬದವರಿಗೆ ಸಾಂತ್ವಾನ

Spread the love

ಸುಶೀಲ್ ನೊರೊನ್ಹಾ ಮನೆಗೆ ಬಿ ಎಂ ಫಾರೂಕ್ ಭೇಟಿ, ಕುಟುಂಬದವರಿಗೆ ಸಾಂತ್ವಾನ

ಮಂಗಳೂರು: ಅಗಲಿದ ಜೆಡಿಎಸ್ ನಾಯಕ ಸುಶೀಲ್ ನೊರೊನ್ಹಾ ಮನೆಗೆ ಭೇಟಿ ನೀಡಿದ ಕರ್ನಾಟಕ ಸರಕಾರದ ಭರವಸೆಯ ಸಮಿತಿಯ ಅಧ್ಯಕ್ಷರು, ಹಾಗೂ ಜೆಡಿಎಸ್ ವಿಧಾನ ಪರಿಷತ್ ಸದಸ್ಯರಾದ ಬಿ ಎಂ ಫಾರೂಕ್ ಭೇಟಿ ನೀಡಿ ಅವರ ಪತ್ನಿ ಮತ್ತು ಮಗನನ್ನು ಸಂತೈಸಿದರು.

ಜೆಡಿಎಸ್ ನಾಯಕ ಸುಶೀಲ್ ನೊರೊನ್ಹಾ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ,ಒಬ್ಬ ಧೀಮಂತ ನಾಯಕ, ಸಮಾಜ ಸೇವಕ ಜೆಡಿಎಸ್ ಮುಖಂಡನನ್ನು ನಾವು ಕಳೆದುಕೊಂಡಿದ್ದೇವೆ,ಇದು ಪಕ್ಷಕ್ಕೆ ಮತ್ತು ಸಮಾಜಕ್ಕೆ ಭರಿಸಲಾರದ ನಷ್ಟವಾಗಿದೆ. ನಿಮ್ಮ ದುಃಖದಲ್ಲಿ ನಾನು ಕೂಡ ಸಹಭಾಗಿಯಾಗಿದ್ದೇನೆ ಎಂದರು

ಭೇಟಿ ನೀಡಿದ ಸಂದರ್ಭದಲ್ಲಿ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷರಾದ ವಸಂತ ಪೂಜಾರಿ, ಮುನೀರ್ ಮುಕ್ಕಾಚೇರಿ, ಫೈಜಲ್ ರೆಹಮಾನ್, ಫ್ರಾನ್ಸಿಸ್ ಫೆರ್ನಾಂಡಿಸ್, ಖಾದರ್ ,ಮುಕುಬಲ್ ಉಪಸ್ಥಿತರಿದ್ದರು


Spread the love

Leave a Reply

Please enter your comment!
Please enter your name here