ಸುಹಾನ್ ಆಳ್ವ ರಿಗೆ  ಅತ್ಯುತ್ತಮ ರಾಜ್ಯ ಎನ್‌ಎಸ್‌ಯುಐ ಪದಾಧಿಕಾರಿ ಪ್ರಶಸ್ತಿ 

Spread the love

ಸುಹಾನ್ ಆಳ್ವ ರಿಗೆ  ಅತ್ಯುತ್ತಮ ರಾಜ್ಯ ಎನ್‌ಎಸ್‌ಯುಐ ಪದಾಧಿಕಾರಿ ಪ್ರಶಸ್ತಿ 

ಎನ್‌.ಎಸ್‌.ಯು.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹಾನ್ ಆಳ್ವ ಅವರಿಗೆ “ಅತ್ಯುತ್ತಮ ರಾಜ್ಯ ಪದಾಧಿಕಾರಿ ಪ್ರಶಸ್ತಿ”ಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಎನ್‌ಎಸ್‌ಯುಐ ಕರ್ನಾಟಕ ರಾಜ್ಯ ಕಾರ್ಯಕಾರಿಣಿಯ ಸಭೆಯಲ್ಲಿ ಪ್ರದಾನ ಮಾಡಿದರು.

ಸುಹಾನ್ ಆಳ್ವ ಅವರು ಆಯೋಜಿಸಿರುವ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳ ವರದಿಯನ್ನು ಪರಿಗಣಿಸಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಈ ಸಂದರ್ಭ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಎನ್‌.ಎಸ್‌.ಯು.ಐ ಉಸ್ತುವಾರಿ ಇನಾಯತ್ ಅಲಿ, ಎನ್‌.ಎಸ್‌.ಯು.ಐ ಕರ್ನಾಟಕ ಅಧ್ಯಕ್ಷ ಕೀರ್ತಿ ಗಣೇಶ್ , ಎನ್‌.ಎಸ್‌.ಯು.ಐ ಕರ್ನಾಟಕ ಉಸ್ತುವಾರಿ ಎರಿಕ್ ಸ್ಟೀಫನ್ ಉಪಸ್ಥಿತರಿದ್ದರು.


Spread the love