ಸುಹೈಲ್ ಕಂದಕ್ ರವರನ್ನು ಬಂಧಿಸುವ ಮೂಲಕ ಕಾಂಗ್ರೆಸ್ ಪಕ್ಷದಿಂದ ಸಾಮಾಜಿಕ ಸೇವೆ ಮಾಡುವವರನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ — ಶೌವಾದ್ ಗೂನಡ್ಕ

Spread the love

ಸುಹೈಲ್ ಕಂದಕ್ ರವರನ್ನು ಬಂಧಿಸುವ ಮೂಲಕ ಕಾಂಗ್ರೆಸ್ ಪಕ್ಷದಿಂದ ಸಾಮಾಜಿಕ ಸೇವೆ ಮಾಡುವವರನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ — ಶೌವಾದ್ ಗೂನಡ್ಕ

ಕೋವಿಡ್ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ರವರನ್ನು ವಿನಾಕಾರಣ ಬಂಧಿಸುವ ಮೂಲಕ ಕಾಂಗ್ರೆಸ್ ಪಕ್ಷದಿಂದ ಸಾಮಾಜಿಕ ಸೇವೆಯನ್ನು ಮಾಡುತ್ತಿರುವವರನ್ನು ಹತ್ತಿಕ್ಕುವ ಕೆಲಸಕ್ಕೆ ಕೆಲವರು ಮುಂದಾಗಿದ್ದಾರೆ, ಇದು ಸರಿಯಲ್ಲ ಖಾಸಗಿ ಆಸ್ಪತ್ರೆಗಳ ಬಿಲ್ಲಿಂಗ್ ದಂಧೆಯ ಬಗ್ಗೆ ಧ್ವನಿಯೆತ್ತಿದ್ದ ಸುಹೈಲ್ ಕಂದಕ್ ರವರ ಮುಂದುವರೆದ ಹೋರಾಟವನ್ನು ಇಲ್ಲವಾಗಿಸುವ ಪ್ರಯತ್ನ ಇದಾಗಿದ್ದು ಸುಹೈಲ್ ರವರೊಂದಿಗೆ ಕಾಂಗ್ರೆಸ್ ಪಕ್ಷದ ಸರ್ವ ಕಾರ್ಯಕರ್ತರು ಜತೆಗಿದ್ದಾರೆಂದು ಕೆ.ಪಿ.ಸಿ.ಸಿ.ಮಾಧ್ಯಮ ವಕ್ತಾರರಾದ ಶೌವಾದ್ ಗೂನಡ್ಕರವರು ತಿಳಿಸಿದ್ದಾರೆ.

ಹಲವು ದಿನಗಳಿಂದ ಮಂಗಳೂರಿನ ಆಸ್ಪತ್ರೆಗಳಲ್ಲಿ ತೊಂದರೆಗೀಡಾಗುವ ರೋಗಿಗಳಿಗೆ ಆಪತ್ಬಾಂಧವನಾಗಿರುವ ಸುಹೈಲ್ ಕಂದಕ್ ರವರು ರಾತ್ರಿ ಹಗಲೆನ್ನದ ತಮ್ಮ ಕಾರ್ಯವೈಖರಿಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು ಅವರ ಬಂಧನವನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ಖಂಡಿಸುತ್ತದೆಂದು ಶೌವಾದ್ ಗೂನಡ್ಕರವರು ಹೇಳಿದ್ದಾರೆ.


Spread the love