
Spread the love
ಸೆಪ್ಟಂಬರ್ 27ರಂದು ಬಿ ಸಿ ರೋಡಲ್ಲಿ ನಡೆಯಲಿರುವ ಪ್ರತಿಭಟನೆಗೆ ಎಐಟಿಯುಸಿ ಪೂರ್ಣ ಬೆಂಬಲ
ದೇಶದ ಎಲ್ಲಾ ರೈತ ಸಂಘಟನೆಗಳು ಕೃಷಿ ಮಸೂದೆಗಳ ವಾಪಸಾತಿ ಮುಂತಾದ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 27-09-2021ರಂದು ಭಾರತ ಬಂದ್ಗೆ ಕರೆ ಕೊಟ್ಟಿವೆ. ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ) ಈ ಬಂದ್ಗೆ ತನ್ನ ಪೂರ್ಣ ಬೆಂಬಲ ಘೋಷಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ರೈತ ಹಾಗೂ ಕಾರ್ಮಿಕ ಸಂಘಟನೆಗಳು ಒಂದಾಗಿ ರೈತರ ಹಾಗೂ ಕಾರ್ಮಿಕರ ಬೇಡಿಕೆಗಳನ್ನು ಈಡೇರುವಂತೆ ಒತ್ತಾಯಿಸಲು 27-09-2021ರಂದು ಬೆಳಿಗ್ಗೆ ಬಿ ಸಿ ರೋಡ್ ಹೆದ್ದಾರಿ ಜಂಕ್ಷನ್ನಲ್ಲಿ ಬೃಹತ್ ಪ್ರತಿಭಟನಾ ಸಭೆ ಮತ್ತು ಹೆದ್ದಾರಿ ಬಂದ್ ಕಾರ್ಯಕ್ರಮ ನಡೆಸಲು ಉದ್ಧೇಶಿಸಿವೆ.
Spread the love