ಸೆ. 2 ಪ್ರಧಾನಿ ಮೋದಿ ಮಂಗಳೂರು ಭೇಟಿ – ವಾಹನ ಪಾರ್ಕಿಂಗ್ ಕುರಿತು ಮಾಹಿತಿ

Spread the love

ಸೆ. 2 ಪ್ರಧಾನಿ ಮೋದಿ ಮಂಗಳೂರು ಭೇಟಿ – ವಾಹನ ಪಾರ್ಕಿಂಗ್ ಕುರಿತು ಮಾಹಿತಿ

ಮಂಗಳೂರು: ಸೆಪ್ಟೆಂಬರ್ 2 ರಂದು ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಭೇಟಿ ನೀಡಲಿದ್ದು ಈ ಸಮಯದಲ್ಲಿ ಸಾರ್ವಜನಿಕರಿಗೆ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಸಾಮಾನ್ಯ ಸೂಚನೆಗಳನ್ನು ಪೊಲೀಸ್ ಇಲಾಖೆ ನೀಡಿದ್ದು ಇದರ ವಿವರ ಇಂತಿದೆ

*  ಪ್ರಧಾನ ಮಂತ್ರಿಯವರು ಎಸ್ ಪಿ ಜಿ ಭದ್ರತೆಯನ್ನು ಹೊಂದಿದವರಾಗಿದ್ದು, ಅವರು ಭಾಗವಹಿಸುವ ಕಾರ್ಯಕ್ರಮದ ಸ್ಥಳವಾದ ಬಂಗ್ರ ಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನಕ್ಕೆ ಆಗಮಿಸುವ ಸಮಯದಲ್ಲಿ ಹಾಗೂ ಅವರು ಸಂಚರಿಸುವ ರಸ್ತೆಯಾದ ಕೂಳೂರು ಜಂಗ್ಲನ್ ನಿಂದ ಕೊಟ್ಟಾರ ಚೌಕಿ ಜಂಕ್ಷನ್ ವರೆಗಿನ ರಸ್ತೆಯಲ್ಲಿ ದಿನಾಂಕ 02-09-2022 ರಂದು ಬೆಳಗ್ಗೆ 06:00 ಗಂಟೆಯಿಂದ ಸಾಮಾನ್ಯ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದಿಲ್ಲ.

* ಕೆ.ಪಿ.ಟಿ, ಕಡೆಯಿಂದ ಸಾರ್ವಜನಿಕ ಸಮಾವೇಶಕ್ಕೆ ಆಗಮಿಸುವ, ಲಘುವಾಹನ ಮತ್ತು ದ್ವಿಚಕ್ರ ವಾಹನದಾರರು ವಾಹನ ಪಾರ್ಕಿಂಗ್ ಗಾಗಿ ಬಂದ್ರ ಕೂಳೂರಿನ ಗೋಲ್ಡ್‌ ಫಿಂಚ್ ಸಿಟಿ ಮೈದಾನದ ಪೂರ್ವಕ್ಕೆ ಇರುವ ಬಯಲು ಪಾರ್ಕಿಂಗ್ ಸ್ಥಳಕ್ಕೆ ಕೊಟ್ಟಾರ ಚೌಕಿಯಿಂದ ಮಾಲೇಮಾರ್ ಮುಖಾಂತರ ಹಾಗೂ ಅಮೆಝಾನ್ ಗೋಡೌನ್ ಪಕ್ಕದಲ್ಲಿನ ಮಾರ್ಗದ ಮುಖಾಂತರ ಹಾಗೂ ಕೂಳೂರು ಹಾಗೂ ಕಾವೂರು ಜಂಕ್ಷನ್ ಕಡೆಯಿಂದ ಆಗಮಿಸುವ ಲಘು ವಾಹನಗಳು ಉರುಂಡಾಡಿ ರಸ್ತೆ ಹಾಗೂ ಕೂಳೂರಿನ ಟಾಟಾ ಶೋ ರೂಮ್ ಮುಂದೆ ಇರುವ ಹೂಳೂರು ಕಾವೂರು ರಸ್ತೆ ಮುಖಾಂತರ ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಅವಕಾಶವಿರುತ್ತದೆ.

* ಉಡುಪಿ ಕಡೆಯಿಂದ ಬರುವ ಘನ ವಾಹನಗಳು, ಗೂಡ್ಸ್ ವಾಹನಗಳು ಪಡುಬಿದ್ರಿ ಜಂಕ್ಷನ್ ನಿಂದ ಕಾರ್ಕಳ-ಬೆಳಣ್ ಮಾರ್ಗವಾಗಿ ಮೂಡಬಿದ್ರೆ, ಕಿನ್ನಿಗೋಳಿ ಮೂಲಕ ಮಂಗಳೂರು, ಬಂಟ್ವಾಳ, ಮಲ್ಕಾರ್, ಮುಡಿವು, ತೊಕ್ಕೊಟ್ಟು, ಪುತ್ತೂರು, ಬೆಂಗಳೂರು, ಮೈಸೂರು ಕಡೆಗೆ ಸಂಚರಿಸುವುದು.

> ಇನ್ನಿತರ ಲಘು ವಾಹನಗಳು ಹಾಗೂ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು ಮುಲ್ಕಿಯಿಂದ ಕಿನ್ನಿಗೋಳಿ ವಿಜಯ ಸನ್ನಿಧಿ ಮೂರು ಕಾವೇರಿ- ಕಟೀಲು ಬಜ್ಜೆ- ಕೈಕಂಬ- ಗುರುಪುರ ಮಾರ್ಗವಾಗಿ ಮಂಗಳೂರು ಕಡೆಗೂ, ಬಂಟ್ವಾಳ ಕಡೆಗೆ ಹೋಗುವ ವಾಹನಗಳು ಮೂಡಬಿದ್ರಿ ಮಾರ್ಗವಾಗಿ ಮಂಗಳೂರು ಕಡೆಗೆ ಸಾಗುವುದು

ಸುರತ್ಕಲ್ ನಿಂದ ಮಂಗಳೂರು ಕಡೆಗೆ ಬರುವ ವಾಹನಗಳು ಕಾನ ರಸ್ತೆ- ಜೋಕಟ್ಟೆ-ಪೊರ್ಕೋಡಿ- ಬಜೆ ಕೈಕಂಬ-ಗುರುಪುರ ಮಾರ್ಗವಾಗಿ ಮಂಗಳೂರು ಕಡೆಗೂ ಬಂಟ್ವಾಳ ಕಡೆಗೆ ಹೋಗುವ ವಾಹನಗಳು ಮೂಡಬಿದ್ರೆ ಮಾರ್ಗವಾಗಿ ಮಂಗಳೂರು ಕಡೆಗೆ ಸಾಗುವುದು.

> ತಲಪಾಡಿ, ಉಳ್ಳಾಲ ಕಡೆಯಿಂದ ಬಿ ಸಿ ರೋಡ್, ಪುತ್ತೂರು, ಬೆಳ್ತಂಗಡಿ, ಸುಳ್ಯ, ಬೆಂಗಳೂರು, ಮೈಸೂರು ಕಡೆಗೆ ಹೋಗುವ ವಾಹನಗಳು, ಕ.ಸಿ.ರೋಡ್ ಹಾಗೂ ತೊಕ್ಕೊಟ್ಟು ಮುಡಿಪು ಮಾರ್ಗವಾಗಿ ಬಿ.ಸಿ ರೋಡ್ ಕಡೆಗೆ ಸಂಚರಿಸುವುದು ಹಾಗೂ ಉಡುಪಿ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟು ನಂತೂರು- ವಾಮಂಜೂರು- ಗುರುಪುರ, ಕೈಕಂಬ ಬಟ್ಟೆ – ಕಟೀಲ್‌- ಕಿನ್ನಿಗೋಳಿ- ಮುಲ್ಕಿ ಮಾರ್ಗವಾಗಿ ಉಡುಪಿ ಕಡೆಗೆ ಮುಂದುವರಿಯುವುದು,

• ಬಂಗ ಕೂಳೂರು ಸಾರ್ವಜನಿಕ ಸಮಾವೇಶ ಸ್ಥಳದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರ ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನಮಂತ್ರಿಯವರು ಎಸ್ ಪಿಜಿ ಭದ್ರತೆ ಹೊಂದಿರುವುದರಿಂದ ಕೆ.ಪಿ.ಟಿ ಜಂಕ್ಷನ್ ನಿಂದ ಎನ್.ಎ.ಪಿ.ಎ. ಜಂಕ್ಷನ್ ವರೆಗಿನ ರಾ.ಹ. 66 ರಲ್ಲಿ ವಾಹನ ಸಂಚಾರಕ್ಕೆ ದಿನಾಂಕ : 02-09-2022 ರಂದು ಮುಂಜಾನೆ 06.00 ಗಂಟೆಯಿಂದ ಕಾರ್ಯಕ್ರಮ ಮುಕ್ತಾಯದ ತನಕ ಅವಕಾಶವಿರುವುದಿಲ್ಲ.

> ಉಡುಪಿ, ಮುಲ್ಕಿ, ಸುರತ್ಕಲ್‌ ಹಾಗೂ ಬಟ್ಟೆ ಕಡೆಗಳಿಂದ ಸಮಾವೇಶಕ್ಕೆ ಆಗಮಿಸುವ ಕಾರ್ಯಕರ್ತರ ಬಸ್ಸುಗಳಿಗೆ ತಣ್ಣೀರುಭಾವಿ ರಸ್ತೆಯಲ್ಲಿ ಪಾರ್ಕಿಂಗ್ ಸ್ಥಳವನ್ನು ಗುರುತಿಸಲಾಗಿರುತ್ತದೆ. ದ್ವಿಚಕ್ರ ವಾಹನ, ಕಾರು ಹಾಗೂ ಇತರ ಲಘು ವಾಹನಗಳಿಗೆ ಎನ್ ಎಂ ಪಿ ಟಿ ಮೈದಾನ ಹಾಗೂ ಎಂ ಎಸ್ ಇಝಡ್ ರಸ್ತೆಯಲ್ಲಿ ಲಘು ವಾಹನ ಪಾರ್ಕಿಂಗ್ ಗೆ ಸ್ಥಳವನ್ನು ಗುರುತಿಸಲಾಗಿರುತ್ತದೆ.

> ಮೂಡಬಿದ್ರೆ, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ, ಕೇರಳ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಕಡೆಗಳಿಂದ ಬರುವ ಬಸ್ಸುಗಳಿಗೆ ಕೆ.ಪಿ.ಟಿ ಮೈದಾನ, ಪ್ಯಾಸನಗರ ಮೈದಾನ, ಪದವು ಮೈದಾನ, ಕರಾವಳಿ ಉತ್ಸವ ಮೈದಾನ, ಲೇಡಿಹಿಲ್ ಚರ್ಚ್ ಮೈದಾನ, ಉರ್ವಾ ಮಾರ್ಕೆಟ್ ಮೈದಾನ, ಉರ್ವಾ ಸ್ಟೋರ್ ಮಾರ್ಕೆಟ್, ಶುಂಟಿಕಾನ ಜಂಕ್ಷನ್ ನಿಂದ ಕಾವೂರು ಕಡೆಗೆ ಹೋಗುವ ರಸ್ತೆಯಲ್ಲಿ ಪಾರ್ಕಿಂಗ್ ಸ್ಥಳವನ್ನು ಗುರುತಿಸಲಾಗಿರುತ್ತದೆ. ಹಾಗೂ ಕಾರು ಹಾಗೂ ಇನ್ನಿತರ ಲಘು ವಾಹನಗಳಿಗೆ ಎ ಜೆ ಆಸ್ಪತ್ರೆ, ಲೇಡಿಹಿಲ್ ಚರ್ಚ್ ಗೌಂಡ್, ಕರಾವಳಿ ಗೌಂಡ್ ಗಳಲ್ಲಿ ಪಾರ್ಕಿಂಗ್ ಗೆ ಸ್ಥಳವನ್ನು ಗುರುತಿಸಲಾಗಿರುತ್ತದೆ.

* ಉಡುಪಿ, ಮುಲ್ಕಿ, ಸುರತ್ಕಲ್‌ ಹಾಗೂ ಬಟ್ಟೆ ಕಡೆಗಳಿಂದ ಕಾರ್ಯಕ್ರಮದ ಸ್ಥಳಕ್ಕೆ ಫಲಾನುಭವಿಗಳನ್ನು ಮತ್ತು ಜನರನ್ನು ಕರೆದುಕೊಂಡು ಬರುವ ಬಸ್ಸುಗಳು ಕೂಳೂರು ಜಂಕ್ಷನ್ ನಲ್ಲಿ ಜನರನ್ನು ಇಳಿಸಿ ನಂತರ ತಣ್ಣೀರುಬಾವಿ ರಸ್ತೆ ಕಡೆಗೆ ಚಲಿಸುವುದು ಮತ್ತು ಪಾರ್ಕಿಂಗ್ ಗೆ ನಿಗದಿಪಡಿಸಲಾದ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದು.

* ಮಂಗಳೂರು ನಗರ, ಮೂಡಬಿದ್ರೆ, ಬಂಟ್ವಾಳ, ಪುತ್ತೂರು, ಸುಳ್ಯ, ಮಡಿಕೇರಿ, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ, ಕೇರಳ ಕಡೆಗಳಿಂದ ಕಾರ್ಯಕ್ರಮದ ಸ್ಥಳಕ್ಕೆ ಜನರನ್ನು ಕರೆದುಕೊಂಡು ಬರುವ ವಾಹನಗಳು ಕೊಟ್ಟಾರ ಚೌಕಿ ಜಂಕ್ಷನ್‌ ಬಳಿಯಲ್ಲಿ ಫಲಾನುಭವಿಗಳನ್ನು ಮತ್ತು ಜನರನ್ನು ಇಳಿಸಿ ನಂತರ ವಾಪಾಸು ಪಾರ್ಕಿಂಗ್ ಗೆ ನಿಗದಿಪಡಿಸಲಾದ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದು.

ದಿನಾಂಕ: 02-09-2022 ರಂದು ಬೆಳಿಗ್ಗೆ 06-00 ಗಂಟೆಯಿಂದ ಮಾನ್ಯ ಪ್ರಧಾನ ಮಂತ್ರಿಯವರ ಬಂಗ ಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿನ ಕಾರ್ಯಕ್ರಮ ಸ್ಥಳದಿಂದ ಮಂಗಳೂರು ಹೆಲಿಪ್ಯಾಡ್‌ಗ ನಿರ್ಗಮಿಸುವ ವರೆಗೆ ಮೇಲ್ಕಂಡ ಎಲ್ಲಾ ವಾಹನ ಸಂಚಾರ ಬದಲಾವಣೆಯು ಜ್ಯಾರಿಯಲ್ಲಿರುತ್ತದೆ.

• ವಿವಿಐಪಿ ಪಾಸುಗಳನ್ನು ಹೊಂದಿರುವವರ ವಾಹನಗಳಿಗೆ ಬಂಗ್ರಹೂಳೂರು ಡೆಲ್ಲಾ ಗೌಂಡ್ ಬಳಿಯಲ್ಲಿ ಪಾರ್ಕಿಂಗ್ ಗೆ ಸ್ಥಳ ನಿಗದಿಪಡಿಸಲಾಗಿರುತ್ತದೆ.

> ವಿಐಪಿ ಪಾಸುಗಳನ್ನು ಹೊಂದಿರುವ ವಾಹನಗಳಿಗೆ ರೆನಾಲ್ಡ್‌ ಶೋ ರೂಮ್ ಎದುರುಗಡೆಯ ವಿ ಆರ್ ಎಲ್. ಗೋಡೌನ್ ಬಳಿಯ `ಸೋಮಯಾಜಿ ಗೌಂಡ್ ಹಾಗೂ ಎ ಜೆ ಶೆಟ್ಟಿ ಇಂಜಿನಿಯರಿಂಗ್ ಕಾಲೇಜು, ಬಂಗ್ರಹೂಳೂರು ಇಲ್ಲಿ ಪಾರ್ಕಿಂಗ್ ಗೆ ಸ್ಥಳ ನಿಗದಿಪಡಿಸಲಾಗಿರುತ್ತದೆ.

* ಎ.ಐ.ಪಿ. ಮತ್ತು ವಿವಿಐಪಿ ಪಾಸ್ ಹೊಂದಿದ ವಾಹನಗಳ ಚಾಲಕರು ಸದ್ರಿ ವಿ.ಐ.ಪಿ. ಮತ್ತು ವಿವಿಐಪಿ ವ್ಯಕ್ತಿಗಳನ್ನು ಕಾರ್ಯಕ್ರಮ ನಡೆಯುವ ಬಂಗ್ರಹೂಳೂರು ಗೋಲ್ಡ್ ಪಿಂಚ್ ಮೈದಾನದ ಗೇಟ್ ಬಳಿ ಇಳಿಸಿದ ಬಳಿಕ, ತಮಗೆ ನಿಗದಿಪಡಿಸಿದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು ಮತ್ತು ಕಾರ್ಯಕ್ರಮ ಮುಗಿದ ಬಳಿಕ ಪುನಃ ಸ್ಥಳಕ್ಕೆ ಬಂದು ವ್ಯಕ್ತಿಗಳನ್ನು ಕರೆದೊಯ್ಯಬಹುದು.

> ಕಾರ್ಯಕ್ರಮಕ್ಕೆ ಬಂದ ಸಾರ್ವಜನಿಕರು ಮತ್ತು ಫಲಾನುಭವಿಗಳು, ಕಾರ್ಯಕ್ರಮ ಮುಗಿದ ಬಳಿಕ ನಿಗದಿತ ಪಾರ್ಕಿಂಗ್ ಸ್ಥಳಕ್ಕೆ ತೆರಳಿ, ಅಲ್ಲಿಂದ ವಾಹನಗಳಲ್ಲಿ ಆಗಮಿಸಿದ ರಸ್ತೆಗಳಲ್ಲಿಯೇ ವಾಪಾಸು ತೆರಳುವುದು.

>   ಪ್ರಧಾನ ಮಂತ್ರಿಯವರ ವಾಹನ ಮತ್ತು ಬೆಂಗಾವಲು ವಾಹನಗಳು ಸಂಚರಿಸುವ ಸಮಯ ಈ ಮೇಲ್ಕಂಡಂತೆ ನೀಡಿದ ಎಲ್ಲಾ ಸೂಚನೆಗಳನ್ನು ಪಾಲಿಸುವಂತೆ ಕೋರಲಾಗಿದೆ.

* ಮಾನ್ಯ ಪ್ರಧಾನ ಮಂತ್ರಿಯವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಯಾವುದೇ ಸಾರ್ವಜನಿಕರು, ಯಾವುದೇ ರೀತಿಯ ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳು, ಆಯುಧಗಳು, ದಹನ ಶೀಲ ವಸ್ತುಗಳು, ಕಪ್ಪು ಬಾವುಟ, ಬ್ಯಾನರ್ ಗಳು ಮತ್ತು ಆಕ್ಷೇಪಾರ್ಹ ವಸ್ತುಗಳನ್ನು ಕಾರ್ಯಕ್ರಮ ಸ್ಥಳಕ್ಕೆ ತರುವುದನ್ನು ನಿರ್ಬಂಧಿಸಲಾಗಿದೆ.

>  ಪ್ರಧಾನ ಮಂತ್ರಿಯವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್, ವೈಯ್ಯಕ್ತಿಕ ಸೊತ್ತುಗಳನ್ನು ಕಾರ್ಯಕ್ರಮ ನಡೆಯುವ ಸ್ಥಳದ ಪ್ರವೇಶ ದ್ವಾರದಲ್ಲಿ ತಪಾಸಣೆ ಸಮಯ ಪರಿಶೀಲನೆಗೆ ಅವಕಾಶ ಮಾಡಿಕೊಟ್ಟು ಸಹಕರಿಸಲು ಕೋರಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರು ತಮಗೆ ನಿಗದಿಪಡಿಸಿದ ಪ್ರವೇಶ ದ್ವಾರಗಳ ಮುಖಾಂತರವೇ ಪ್ರವೇಶಿಸಲು ಕೋರಲಾಗಿದೆ. ಸಾರ್ವಜನಿಕರಿಗೆ ಕೂಳೂರಿನ ರೆನಾಲ್ಡ್‌ ಶೋ ರೂಮ್ ಕಡೆಯಿಂದ ಮತ್ತು ಕೂಳೂರು ಕಾವೂರು ರಸ್ತೆಯ ಪೃಥ್ವಿ ಲೇ ಔಟ್ ಕಡೆಯಿಂದ ಹಾಗೂ ಕೊಟ್ಟಾರ ಚೌಕಿ ಮಾಲಾಡಿ ಕೋರ್ಟ್‌ ರಸ್ತೆ ಮಾರ್ಗವಾಗಿ ಕಾರ್ಯಕ್ರಮದ ಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಅಲ್ಲಿ ಅಳವಡಿಸಲಾದ ಪ್ರವೇಶ ದ್ವಾರಗಳ ಮೂಲಕ ತೆರಳುವಂತೆ ಕೋರಲಾಗಿದೆ.

 ಪ್ರಧಾನ ಮಂತ್ರಿಯವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎ.ಎ.ಐ.ಪಿ./ಎ.ಐ.ಪಿ. ಮಾಧ್ಯಮದ ವ್ಯಕ್ತಿಗಳು, ಛಾಯಾಗ್ರಾಹಕರು, ಇತರ ಇಲಾಖೆಯ ಅಧಿಕಾರಿ/ ಸಿಬ್ಬಂದಿಗಳು, ಫಲಾನುಭವಿಗಳು, ವಾಹನ ಚಾಲಕರು, ಸ್ಥಳದಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಹಾಗೂ ಇನ್ನಿತರ ವ್ಯಕ್ತಿಗಳು ಕಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ವಿತರಿಸಲಾದ ಪಾಸ್ ಗಳನ್ನು ಹೊಂದಿರತಕ್ಕದ್ದು.

ವಾಹನ ನಿಲುಗಡ ಮತ್ತು ವಾಹನ ಸಂಚಾರ ನಿಷೇಧದ ವಿವರಗಳು

1) ಮಾನ್ಯ ಪ್ರಧಾನ ಮಂತ್ರಿಯವರು ಮಂಗಳೂರು ವಿಮಾನ ನಿಲ್ದಾಣದಿಂದ ಕೆಂಜಾರು – ಮರವೂರು – ಮರಕಡ – ಕಾವೂರು – ಬೊಂದೇಲ್ – ಪದವಿನಂಗಡಿ – ಯೆಯ್ಯಾಡಿ – ರಾಷ್ಟ್ರೀಯ ಹೆದ್ದಾರಿ 66ರ ಕೆ.ಪಿ.ಟಿ, ಜಂತನ ನಿಂದ – ಕೊಟ್ಟಾರ ಚೌಕಿ- ಕೂಳೂರು – ಎನ್.ಎಂ.ಪಿ.ಎ. ವರೆಗೆ ಹಾದು ಹೋಗುವ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ದಿನಾಂಕ 02-09-2022 ರಂದು ಬೆಳಗ್ಗೆ 06:00 ಗಂಟೆಯಿಂದ ಸಂಜೆ 6:00 ಯ ತವಕ ನಿಷೇಧಿಸಿದೆ.

2) ಗೋಲ್ಡ್ ಪಿಂಚ್ ಮೈದಾನದ ಮತ್ತು ಸುತ್ತಲಿನ 500 ಮೀಟರ್ ವ್ಯಾಪ್ತಿಯ ರಸ್ತೆಗಳಲ್ಲಿ ದಿನಾಂಕ : 02-09-2022 ರಂದು ಮುಂಜಾನೆ 06.00 ಗಂಟೆಯಿಂದ ಸಂಜೆ 6.00 ಯ ತನಕ ಎಲ್ಲಾ ತರಹದ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ.

3) ಮಂಗಳೂರು ವಿಮಾನ ನಿಲ್ದಾಣದಿಂದ ಕಂಬಾರು – ಮರವೂರು ಮರಕಡ – ಕಾವೂರು – ಬೊಂದೇಲ್ ಪದವಿನಂಗಡಿ – ಯೆಯ್ಯಾಡಿ – ರಾಷ್ಟ್ರೀಯ ಹೆದ್ದಾರಿ 66 ರ ಕೆ.ಪಿ.ಟಿ. ಜಂಕ್ಷನ್ ನಿಂದ – ಕೊಟ್ಟಾರ ಚೌಕಿ- ಕೂಳೂರು – ಎನ್.ಎಂ.ಪಿ.ಎ. ವರೆಗೆ ಎಲ್ಲಾ ಸರಕು ವಾಹನ ಘನ ವಾಹನ, ಪ್ರವಾಸಿ ವಾಹನ ಮತ್ತು ಇತರ ಸಾರ್ವಜನಿಕ ವಾಹನಗಳ ಸಂಚಾರವನ್ನು ದಿನಾಂಕ : 02-09-2022 ರಂದು ಮುಂಜಾನೆ 05.00 ಗಂಟೆಯಿಂದ ಸಂಜೆ 6-00 ಯ ತನಕ ನಿಷೇಧಿಸಿದೆ.

4) ಬಂಗ್ರ ಕೂಳೂರು ಗೋಲ್ಡ್‌ ಪಿಂಚ್ ಸಿಟಿ ಮೈದಾನದ ಸಾರ್ವಜನಿಕ ಸಮಾವೇಶಕ್ಕೆ ಆಗಮಿಸುವ ಅತೀ ಗಣ್ಯ ವ್ಯಕ್ತಿಗಳು, ಗಣ್ಯ ವ್ಯಕ್ತಿಗಳು ಮತ್ತು ಸಾರ್ವಜನಿಕರು ಉಪಯೋಗಿಸುವ ವಾಹನಗಳನ್ನು ನಿಗದಿತ ಪಾರ್ಕಿಂಗ್ ಸ್ಥಳಗಳಿಗೆ ಸಂಚರಿಸಲು ಮತ್ತು ತುರ್ತು ಸೇವೆಯ ವಾಹನಗಳು ಮೇಲ್ಕಂಡ ನಿಷೇಧಿತ ರಸ್ತೆಗಳಲ್ಲಿ ಸಂಚರಿಸಲು ಅನುಮತಿಸಲಾಗಿದೆ.


Spread the love