Home Mangalorean News Kannada News ಸೆ. 23: ಉಡುಪಿ ಬ್ಲಾಕ್ ವತಿಯಿಂದ “ ಮನೆ-ಮನೆಗೆ ಕಾಂಗ್ರೆಸ್”

ಸೆ. 23: ಉಡುಪಿ ಬ್ಲಾಕ್ ವತಿಯಿಂದ “ ಮನೆ-ಮನೆಗೆ ಕಾಂಗ್ರೆಸ್”

Spread the love

ಸೆ. 23: ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ “ ಮನೆ-ಮನೆಗೆ ಕಾಂಗ್ರೆಸ್”

ಉಡುಪಿ: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 2013ರಲ್ಲಿ ಅಧಿಕಾರಕ್ಕೆ ಬಂದ ನಂತರ ಬಡವರ ಶೋಷಿತರ, ಅವಕಾಶ ವಂಚಿತರ, ಮಹಿಳೆಯರ ಹಾಗೂ ರೈತರ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದು ಇದೊಂದು ಜನಪರವಾದ ಸರ್ಕಾರ ಎಂಬುದನ್ನು ಸಾಬೀತುಪಡಿಸಿದೆ.

ನಮ್ಮ ಸರ್ಕಾರದ ಸಾಧನೆಗಳನ್ನು ಪ್ರತಿ ಮತದಾರನಿಗೆ ತಲುಪಿಸುವ ಹೊಣೆಗಾರಿಕೆ ಮತ್ತು ಜವಾಬ್ದಾರಿ ನಮ್ಮೆಲ್ಲರದು.  ಈ ನಿಟ್ಟಿನಲ್ಲಿ ಪ್ರತಿ ಮನೆಯನ್ನು ತಲುಪುವ “ ಮನೆ-ಮನೆಗೆ ಕಾಂಗ್ರೆಸ್” ಎಂಬ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ  ಸಪ್ಟೆಂಬರ್ 23 ಶನಿವಾರ ಏಕಕಾಲದಲ್ಲಿ ಚಾಲನೆ ನೀಡಲಾಗುತ್ತದೆ. ಆ ಪ್ರಯುಕ್ತ  ಅಂದು ಬೆಳಿಗ್ಗೆ 8.30ಕ್ಕೆ ಸರಿಯಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಲೇಬರ್ ಕಾಲನಿ ಕನ್ನರ್ಪಾಡಿಯಲ್ಲಿ “ ಮನೆ-ಮನೆಗೆ ಕಾಂಗ್ರೆಸ್” ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ರವರು ಉದ್ಘಾಟನೆ ಮಾಡಲಿದ್ದಾರೆ. ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ  ಸತೀಶ್ ಅಮೀನ್ ಪಡುಕರೆ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version