ಸೆ.26-ಅ.5: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಅದ್ಧೂರಿಯ ದಸರಾ ಉತ್ಸವ 2022 – ನಾಡೋಜ ಡಾ|ಜಿ ಶಂಕರ್

Spread the love

ಸೆ.26-ಅ.5: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಅದ್ಧೂರಿಯ ದಸರಾ ಉತ್ಸವ 2022 – ನಾಡೋಜ ಡಾ|ಜಿ ಶಂಕರ್

‘ಕರ್ನಾಟಕದ ಕೊಲ್ಲಾಪುರ” ಎಂದು ಲೋಕ ಪ್ರಸಿದ್ಧಿಗೊಂಡಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸಹೃದಯಿ ಭಕ್ತರ ಸಹಯೋಗದೊಂದಿಗೆ ನವರಾತ್ರಿ ಉತ್ಸವವನ್ನು ಈ ಬಾರಿ ‘ಉಚ್ಚಿಲ ದಸರಾ ಉತ್ಸವ-2022’ ಎಂದು ಆಚರಿಸಲು ದಕ್ಷ, ಮೊಗವೀರ ಮಹಾಜನ ಸಂಘ ನಿರ್ಧರಿಸಿದೆ ಎಂದು ನಾಡೋಜ ಡಾ|ಜಿ ಶಂಕರ್ ಹೇಳಿದರು.

ಅವರು ಬುಧವಾರ ದೇವಳದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದೇವಸ್ಥಾನದ ಪಕ್ಕದಲ್ಲಿ ನೂತನವಾಗಿ ನಿರ್ಮಾಣವಾದ ಸುಸಜ್ಜಿತ ಶ್ರೀಮತಿ ಶಾಲಿನಿ ಡಾ| ನಾಡೋಜ ಜಿ. ಶಂಕ‌ರ್ ತೆರೆದ ಸಭಾಂಗಣ”ದಲ್ಲಿ ನವದುರ್ಗೆಯರ ಮತ್ತು ಶ್ರೀ ಶಾರದ ಮಾತೆಯ ವಿಗ್ರಹಗಳ ಪ್ರತಿಷ್ಠಾಪನೆಯೊಂದಿಗೆ ಸಪ್ಟೆಂಬರ್ 26ರಿಂದ ಅಕ್ಟೋಬರ್ 5 ರ ವರೆಗೆ ದಸರಾ ಉತ್ಸವವು ಸಂಪನ್ನಗೊಳ್ಳಲಿರುವುದು ಎಂದರು.

ನೂತನ ಸಭಾಂಗಣದ ಲೋಕಾರ್ಪಣೆ
ದಿನಾಂಕ:26-09-2022ರ ಬೆಳಿಗ್ಗೆ 9.05ಕ್ಕೆ ಸರಿಯಾಗಿ ನೂತನವಾಗಿ ಸುಮಾರು ರೂ.1 ಕೋಟಿ 70 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ “ಶ್ರೀಮತಿ ಶಾಲಿನಿ ಡಾ|ಜಿ ಶಂಕರ್ ತೆರೆದ ಸಭಾಂಗಣ ಲೋಕರ್ಪಣಾ ಕಾರ್ಯಕ್ರಮ ನಡೆಯಲಿದ್ದು, ಸಮಾಜ ಬಾಂಧವರ ಉಪಸ್ಥಿಯಲ್ಲಿ ನಾಡೋಜ ಡಾ. ಜಿ. ಶಂಕರ್ ರವರು ಸದ್ರಿ ಸಭಾಂಗಣವನ್ನು ಉದ್ಘಾಟಿಸಲಿದ್ದಾರೆ.

ನವದುರ್ಗೆಯರು ಮತ್ತು ಶಾರದಾ ದೇವಿಯ ಪ್ರತಿಷ್ಠಾಪನೆ: ತಾ-26-09-2022ರ ಬೆಳಿಗ್ಗೆ 9.30ಕ್ಕೆ ಸರಿಯಾಗಿ ನವದುರ್ಗೆಯರು ಮತ್ತು ಶಾರದಾ ದೇವಿಯರ ಪ್ರತಿಷ್ಠಾಪನಾ ಕಾರ್ಯಕ್ರಮ ನೂತನ ಸಭಾಂಗಣದಲ್ಲಿ ನೆರವೇರಲಿದೆ.

ಧಾರ್ಮಿಕ ಕಾರ್ಯಕ್ರಮಗಳು

  • ಚಂಡಿಕಾ ಹೋಮ : ಪ್ರತೀದಿನ ಬೆಳಿಗ್ಗೆ 900ರಿಂದ ಮದ್ಯಾಹ್ನ 12.00 ಗಂಟೆಯವರೆಗೆ ನಡೆಯಲ್ಲಿದೆ ಅನ್ನಸಂತರ್ಪಣೆ : ಪ್ರತೀದಿನ ಮದ್ಯಾಹ್ನ 12.30 ರಿಂದ 300ರ ವರೆಗೆ ನಡೆಯಲಿದೆ.
  • ಸಂಜೆಯ ಪ್ರಸಾದ ವಿತರಣೆ : ಪ್ರತಿದಿನ ಸಂಜೆ ಗಂಟೆ 6.00ರಿಂದ ಆಗಮಿಸುವ ಎಲ್ಲಾ ಭತ್ತರಿಗೆ ಪ್ರಸಾದ ವಿತರಿಸಲಾಗುವುದು.
  • ಭಜನಾ ಕಾರ್ಯಕ್ರಮ : ವಿವಿಧ ಭಜನಾ ಮಂಡಳಿಗಳಿಂದ ಪ್ರತೀದಿನ ಬೆಳಿಗ್ಗೆ ಗಂಟೆ 10.00 ರಿಂದ ಸಂಜೆ 4.00 ಗಂಟೆಯವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ.
  • ಕಲ್ಪೋಕ್ತ ಪೂಜೆ: ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪ್ರತೀ ದಿನ ಸಂಜೆ ಗಂಟೆ 7.30 ರಿಂದ 9.00ರ ವರೆಗೆ ಕಲ್ಪೋಕ್ತ ಪೂಜೆ ನಡೆಯಲಿದೆ
  • ತ್ರಿಕಾಲ ಪೂಜೆ ನವದುರ್ಗೆಯರು ಮತ್ತು ಶ್ರೀ ಶಾರದಾದೇವಿಯ ರಿಗೆ ತ್ರಿಕಾಲ ಪೂಜೆ ನಡೆಸಲಿದೆ.
  • ಸಾಂಸ್ಕೃತಿಕ ಕಾರ್ಯಕ್ರಮ : ಸಪ್ಟೆಂಬರ್ 26 ರಿಂದ ಅಕ್ಟೋಬರ್ 4 ರ ವರೆಗೆ ಪ್ರತಿ ದಿನ ಸಂಜೆ 6 ರಿಂದ 8 ರವರೆಗೆ ನೃತ್ಯಭಾರತಿ ಕದ್ರಿ ಮಂಗಳೂರು ಇವರಿಂದ ಶಾಸ್ತ್ರೀಯ ಸಂಗೀತ ಮತ್ತು ಜನಪದ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದರು.
  • ಶತವೀಣಾವಲ್ಲರಿ: ಸಪ್ಟೆಂಬರ್ 30 ಲಲಿತ ಪಂಚಮಿಯಂದು ಸಂಜೆ ಗಂಟೆ 400 ರಿಂದ 5.00ರವರೆಗೆ ವಿ. ಪವನ ಬಿ, ಆಚಾರ್, ಮಣಿಪಾಲ: ಬಳಗದವರಿಂದ ‘ಶತವೀಣಾವಲ್ಲರಿ’ ಏಕಕಾಲದಲ್ಲಿ ನೂರ ಒಂದು ವೀಣೆಗಳ ವಾದನ ಕಾರ್ಯಕ್ರಮ ನಡೆಯಲಿದೆ.
  • ವಿದ್ಯುದ್ದೀಪಾಲಂಕಾರದ ಉದ್ಘಾಟನೆ: ದೇವಸ್ಥಾನದ ಪರಿಸರ ಮತ್ತು ಹೆಜಮಾಡಿಯಿಂದ ಕಾಪು ದೀಪಸ್ಥಂಭದವರೆಗೆ ಮಾಡಲಾದ ಭವ್ಯವಾದ ವಿದ್ಯುದ್ದೀಪಾಲಂಕಾರದ ಉದ್ಘಾಟನೆಯು ದಿನಾಂಕ: 24.09.2022ರ ರಾತ್ರಿ ಗಂಟೆ 7.00ಕ್ಕೆ ದೇವಸ್ಥಾನದಲ್ಲಿ ನಡೆಯಲಿದೆ.
  • ಶೋಭಾ ಯಾತ್ರೆ ಸಾಗುವ ಮಾರ್ಗ: `ರಾಷ್ಟ್ರೀಯ ಹೆದ್ದಾರಿ-66ರ ಮೂಲಕ ಶೋಭಾಯಾತ್ರೆಯು ಈ ಕ್ಷೇತ್ರ ಉಚ್ಚಿಲದಿಂದ ಹೊರಟು ಎರ್ಮಾಳ್ – ಪಡುಬಿದ್ರಿ – ಹೆಜಮಾಡಿ ಟೋಲ್ ಗೇಟ್ ವರೆಗೆ ಸಾಗಿ ಅಲ್ಲಿಂದ ವಾಪಾಸು ಪುನಃ ರಾಷ್ಟ್ರೀಯ ಹೆದ್ದಾರಿ-66 ರ ಮೂಲಕ ಸಾಗಿ ಪಡುಬಿದ್ರಿ ಎರ್ಮಾಳ್-ಉಚ್ಚಿಲ-ಮೂಳೂರು- ಕೊಪ್ಪಲಂಗಡಿಯಿಂದ ಕಾಪು ದೀಪಸ್ತಂಭದ ಬಳಿ ಸಮುದ್ರದಲ್ಲಿ ವಿಸರ್ಜನೆಗೊಳ್ಳಲಿದೆ.
  • ಭವ್ಯ ಶೋಭಾಯಾತ್ರೆ ವಿಶೇಷತೆಗಳು: ದಿನಾಂಕ 05-11-2022 ಬುಧವಾರ ವಿಜಯದಶಮಿಯಂದು ಅಪರಾಹ್ನ ಗಂಟೆಗೆ 3.00ಕ್ಕೆ ಸರಿಯಾಗಿ ಭವ್ಯವಾದ ವಿಸರ್ಜನಾ ಶೋಭಾಯಾತ್ರೆ ಆರಂಭವಾಗುವುದು. ಹುಲಿವೇಷಗಳ ಅಬ್ಬರ, ವಿವಿಧ ವೇಷ ಭೂಷಣಗಳ ಸಡಗರ ಶೋಭಾಯಾತ್ರೆಗೆ ಹೆಚ್ಚಿನ ಮೆರುಗು ನೀಡಲಿದೆ ಎಂದರು.

ಶೋಭಾಯಾತ್ರೆಯಲ್ಲಿ ದಶ ವಿಗ್ರಹಗಳನ್ನೊಳಗೊಂಡ 10 ವಿಶೇಷ ಟ್ಯಾಬ್ಲೊಗಳೊಂದಿಗೆ ವಿವಿಧ ಭಜನಾ ತಂಡಗಳು, ವಿವಿಧ ವೇಷ ಭೂಷಣಗಳು, ಹುಲಿವೇಷಗಳ ಟ್ಯಾಬ್ಲೋ ಸೇರಿದಂತೆ ಒಟ್ಟು 100ಕ್ಕೂ ಅಧಿಕ ಟ್ಯಾಬ್ಲೋಗಳನ್ನೊಳಗೊಂಡ ಶೋಭಾಯಾತ್ರೆ ಕರಾವಳಿ ಇತಿಹಾಸದಲ್ಲಿಯೇ ಒಂದು ಸ್ಥರಣೀಯ ಕಾರ್ಯಕ್ರಮವಾಗಲಿದೆ.

ಸಂಗೀತ ರಸಮಂಜರಿ ಮತ್ತು ಮನೋರಂಜನಾ ಕಾರ್ಯಕ್ರಮ: ಶೋಭಯಾತ್ರೆ ಸಾಗುವ ಮಾರ್ಗದಲ್ಲಿ ಪಡುಬಿದ್ರಿ – ಉಚ್ಚಿಲ ಕೊಪ್ಪಲಂಗಡಿ, ಕ್ರಾಸ್- ಕಾಪು ಬೀಚ್‌ನಲ್ಲಿ ಸಂಗೀತ ರಸಮಂಜರಿ ಮತ್ತು ಮನೋರಂಜನೆ ಕಾರ್ಯಕ್ರಮ ನಡೆಯಲಿದೆ ಎಂದರು.

ಬೃಹತ್ ಗಂಗಾರತಿ – ಕಾಶಿಯಲ್ಲಿ ಗಂಗಾನದಿ ತಪದಲ್ಲಿ ನಡೆಯುವ ಬೃಹತ್‌ ಗಂಗಾರತಿಯ ರೀತಿಯಲ್ಲಿ ಬೃಹತ್‌ ಗಂಗಾರತಿಯ ಮೂಲಕ ಮಹಾ ಮಂಗಳಾರತಿ ನಡೆಯಲಿರುವುದು.

ಸಾಮೂಹಿಕ ಮಹಾ ಮಂಗಳಾರತಿ: ವಿಗ್ರಹಗಳ ವಿಸರ್ಜನಾ ಪೂರ್ವದಲ್ಲಿ ಸಾವಿರ ಮಹಿಳೆಯರಿಂದ ಕಾಪು ಸಮುದ್ರ ತೀರದಲ್ಲಿ ಸಾಮೂಹಿಕ ಮಹಾ ಮಂಗಳಾರತಿ ನೆರವೇರಲಿದೆ ಎಂದರು.

ಶೋಭಾಯಾತ್ರೆ ಸಾಗುವ ಮಾರ್ಗದ ಎಲ್ಲ ಅಂಗಡಿಗಳು, ಮಳಿಗೆಗಳು ಮತ್ತು ಮನೆಯವರು ತಮ್ಮ ತಮ್ಮ ಕಟ್ಟಡಕ್ಕೆ ವಿದ್ಯುತ್‌ ದೀಪಾಲಂಕಾರ ಮಾಡಿ ಉಚ್ಚಿಲ ದಸರಾವನ್ನು ಯಶಸ್ವಿಗೊಳಿಸಲು ಸಹಕಾರ ನೀಡಬೇಕು ಮತ್ತು ಎಲ್ಲಾ ಭಕ್ತರು 10 ದಿನಗಳ ಕಾಲ ನಡೆಯುವ ಈ ಉಚ್ಚಿಲ ದಸರಾ ಉತ್ಸವದಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರಾರಾಗಬೇಕು ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ದಕ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಉಚ್ಚಿಲದ ಅಧ್ಯಕ್ಷರಾದ ವಾಸುದೇವ ಸಾಲ್ಯಾನ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here