ಸೆ. 30: ಕುಂದಾಪುರದಲ್ಲಿ ಹುಲಿವೇಷ ನೃತ್ಯ ಪ್ರದರ್ಶನ
ಕುಂದಾಪುರ: ನಾಡಿನಾದ್ಯಂತ ಕುಂದಾಪ್ರ ಹುಲಿ ಎಂದೇ ಖ್ಯಾತಿ ಪಡೆದಿರುವ ನವರಾತ್ರಿ ಸಂದರ್ಭದಲ್ಲದಷ್ಟೆ ವೇಷ ತೊಟ್ಟು ನರ್ತಿಸುವ ಇಲ್ಲಿನ ಪಾರಂಪರಿಕ ಹುಲಿವೇಷದಾರಿಗಳ ನೃತ್ಯವು ಸೆಪ್ಟೆಂಬರ್ 30 ರಂದು ಸಂಜೆ 6.00ಕ್ಕೆ ಕುಂದಾಪುರ ಶಾಸ್ತ್ರಿ ವೃತ್ತದ ಸಮೀಪ ನಡೆಯಲಿದೆ.
ವಿಶೇಷವಾದ ವಿದ್ಯುತ ದೀಪಾಲಂಕೃತ ಭವ್ಯವಾದ ವೇದಿಕೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಊರಿನ ಬಂಧುಗಳು ಆಸ್ಥೆ ವಹಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಮ್ಮೂರಿನ ಪಾರಂಪರಿಕ ಹುಲಿವೇಷ ಕಲೆಯನ್ನು, ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಈ ಕಾರ್ಯಕ್ರಮದ ಆಯೋಜನೆಯ ಜವಾಬ್ದಾರಿ ಹೊತ್ತಿರುವ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಮನವಿ ಮಾಡಿದೆ.