ಸೆ. 9 : ಮಂಗಳೂರು ಧರ್ಮಪ್ರಾಂತ್ಯದಿಂದ ಬಿಷಪ್‌ ಬಾಸಿಲ್ ಅವರ ಸಂಸ್ಮರಣೆ

Spread the love

ಸೆ. 9 : ಮಂಗಳೂರು ಧರ್ಮಪ್ರಾಂತ್ಯದಿಂದ ಬಿಷಪ್‌ ಬಾಸಿಲ್ ಅವರ ಸಂಸ್ಮರಣೆ

ಮಂಗಳೂರು: ಬಿಷಪ್ ಬಾಸಿಲ್ ಸಾಲ್ವದೊರ್ ಡಿಸೋಜಾ ರವರು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಸುಧೀರ್ಘ 31 ವರುಷಗಳ ಸೇವೆ ನೀಡಿದ್ದರು. ಅವರು ದಿನಾಂಕ 5.9.1996 ರಂದು ದೈವಾಧೀನರಾದರು. ಅವರಿಗೆ ರೊಜಾರಿಯೋ ಮಹಾದೇವಾಲಯದಲ್ಲಿ (ಕಥೆದ್ರಲ್‍) ದಿನಾಂಕ 9.9.1996 ರಂದು ಅಂತಿಮ ಸಂಸ್ಕಾರ ನೀಡಲಾಯ್ತು.

ಈ ವರ್ಷ ಅವರು ಸ್ವರ್ಗಸ್ಥರಾಗಿ 25 ವರ್ಷಗಳು ಪೂರ್ತಿಯಾಗುತ್ತವೆ. ಈ ಸಂದರ್ಭದಲ್ಲಿ ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಬಿಷಪ್ ಪೀಟರ್ ಪಾವ್ಲ್ ಸಲ್ದಾನ್ಹಾ ರವರು ದಿನಾಂಕ 9.9.2021 ರಂದು ಬೆಳಿಗ್ಗೆ 9.30 ಗಂಟೆಗೆ ರೊಜಾರಿಯೋ ಮಹಾದೇವಾಲಯದಲ್ಲಿ ಸ್ಮರಣಾ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ.

ಬಲಿಪೂಜೆಯ ನಂತರ 10.30 ಗಂಟೆಗೆ, ರೊಸಾರಿಯೊ ಚರ್ಚ್ ಮಿನಿ ಹಾಲಿನಲ್ಲಿ ಬಿಷಪ್‌ ಬಾಸಿಲ್ ಅವರ ಬದುಕು ಮತ್ತು ಸಾದನೆಗಳ ಕುರಿತು ಅವರ 50 ಸಂಗಡಿಗರು ಮತ್ತು ಅಭಿಮಾನಿಗಳು ಬರೆದ ಲೇಖನ ಸಂಗ್ರಹವನ್ನು ಬಿಡುಗಡೆ ಮಾಡಲಾಗುವುದು ಹಾಗೂ ಅವರ ಕುರಿತು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುವುದು

ಬಿಷಪ್‌ ಬಾಸಿಲ್ ಸಾಲ್ವಾದೋರ್‌ ಡಿಸೋಜಾರವರು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ 1965 ರಿಂದ 1996 ರ ತನಕ ಸಮರ್ಥ ನಾಯಕತ್ವ ನೀಡಿದ್ದರು. ಆ ಕಾಲದಲ್ಲಿ ಇಂದಿನ ಉಡುಪಿ, ದಕ್ಷಿಣಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಹಬ್ಬಿದ್ದ ಮಂಗಳೂರು ಧರ್ಮಪ್ರಾಂತ್ಯವು ಅವರ ಸಮರ್ಥ ನಾಯಕತ್ವದಲ್ಲಿ ವಿಸ್ತೃತ ಪ್ರಗತಿಯನ್ನು ಸಾದಿಸಿತು. ಹಲವಾರು ಹೊಸ ಧರ್ಮಕೇಂದ್ರಗಳು, ಶಿಕ್ಷಣ ಸಂಸ್ಥೆಗಳು, ಸಮಾಜಸೇವಾ ಸಂಸ್ಥೆಗಳು, ವೈದ್ಯಕೀಯ ಸೇವಾಸಂಸ್ಥೆಗಳು ಇವರ ನಾಯಕತ್ವದಲ್ಲಿ ಆರಂಭಿಸಲ್ಪಟ್ಟವು.

ಇವರು ಕೆನರಾ ಅಭಿವೃದ್ಧಿ ಮತ್ತುಶಾಂತಿಸಂಸ್ಥೆಯನ್ನುಆರಂಭಿಸಿದರು. ದ್ವಿತೀಯ ವ್ಯಾಟಿಕನ್‌ ಮಹಾಸಭೆಯ ಫಲವಾಗಿ ಧಾರ್ಮಿಕ ಆಚರಣೆಗಳಲ್ಲಿ ಕೊಂಕಣಿ ಭಾಷೆಯ ಬಳಕೆ ಆರಂಭವಾದ ಕಾರಣ ಹೊಸ ಒಡಂಬಡಿಕೆ, ಪೂಜಾಗ್ರಂಥ ಹಾಗೂ ವಾಚನಾ ಗ್ರಂಥಗಳನ್ನು ಕೊಂಕಣಿಗೆ ಭಾಷಾಂತರಿಸುವಲ್ಲಿ ಅವರ ಮಹತ್ವದ ಕೊಡುಗೆಯಿದೆ. ಭಾರತದಲ್ಲಿಯೇ ಪ್ರಥಮತಃ ಧರ್ಮಸಭೆಯ ಆಡಳಿತದಲ್ಲಿ ಪ್ರಾತಿನಿಧಿಕ ಸಂಸ್ಥೆಗಳನ್ನು ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.


Spread the love