ಸೇತುವೆಗೆ ಬೈಕ್ ಡಿಕ್ಕಿ: ಸಾವು

Spread the love

ಸೇತುವೆಗೆ ಬೈಕ್ ಡಿಕ್ಕಿ: ಸಾವು

ನಂಜನಗೂಡು: ಸೇತುವೆಯ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ತಗಡೂರು ಗ್ರಾಮದ ಬಳಿ ನಡೆದಿದೆ.

ಯಳಂದೂರು ತಾಲೂಕಿನ ಕೃಷ್ಣಾಪುರ ಗ್ರಾಮದ ನಿವಾಸಿ ನಾಗರಾಜು ಮೃತ ದುರ್ದೈವಿ.

ಬುಧವಾರ ಸಂಜೆ ನಾಗರಾಜು ಯಳಂದೂರಿನಿಂದ ತಗಡೂರು ಮಾರ್ಗವಾಗಿ ನಂಜನಗೂಡಿಗೆ ಟಿವಿಎಸ್ ಎಕ್ಸೆಲ್ ಸೂಪರ್ ಬೈಕ್ ನಲ್ಲಿ ತೆರಳುವ ವೇಳೆ ಅಪಘಾತ ಸಂಭವಿಸಿದೆ. ತಗಡೂರು ಗ್ರಾಮದ ರಾಮಚಂದ್ರ ರಾವ್ ನಾಲೆ ಸೇತುವೆಯ ಡಿವೈಡರ್ ಗೆ ನಾಗರಾಜು ಡಿಕ್ಕಿ ಹೊಡೆದು ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ .

ಮೃತ ವ್ಯಕ್ತಿಯು ಕುಡಿದು ಬೈಕ್ ಚಾಲನೆ ಮಾಡಿಕೊಂಡು ವೇಗವಾಗಿ ಬಂದು ಸೇತುವೆ ಡಿವೈಡರ್ ಗೆ ಡಿಕ್ಕಿ ಹೊಡೆದಿರ ಬಹುದು ಎಂದು ಶಂಕಿಸಲಾಗಿದೆ. ಮೃತ ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 


Spread the love