
ಸೈಂಟ್ ಆ್ಯಂಟನೀಸ್ ಹೋಲಿಕ್ರಾಸ್ ಪ್ರಾರ್ಥನಾ ಮಂದಿರ ಧ್ವಂಸ – ಸೂಕ್ತ ನ್ಯಾಯಕ್ಕಾಗಿ ಮನವಿ
ಮಂಗಳೂರು: ಕಾವೂರು ಉರುಂದಾಡಿಗುಡ್ಡೆಯಲ್ಲಿ ಸೈಂಟ್ ಆ್ಯಂಟನೀಸ್ ಹೋಲಿಕ್ರಾಸ್ ಬಿಲ್ಡಿಂಗ್ ಕಮಿಟಿಯ ಉಸ್ತುವಾರಿಯಲ್ಲಿರುವ ಪ್ರಾರ್ಥನಾ ಮಂದಿರವನ್ನು ಅಕ್ರಮವಾಗಿ ಕೆಡವಿ, ಯೇಸುಕ್ರಿಸ್ತರ ಪ್ರತಿಮೆ. ಶಿಲುಬೆ, ಮಾತೆ ಮರಿಯಮ್ಮನವರ ಪ್ರತಿಮೆಗಳನ್ನು, ಪೂಜ ಪರಿಕರಗಳನ್ನು, ಪ್ರಾರ್ಥನಾ ಮಂದಿರಕ್ಕೆ ಹಾಗೂ ಜಮೀನಿಗೆ ಸಂಬಧಪಟ್ಟಂತಹ ದಾಖಲೆಗಳನ್ನು ನಾಶಪಡಿಸಿದ್ದು, ಕ್ರೈಸ್ತ ಧರ್ಮವನ್ನು ಹೀಯಾಳಿಸಿ ಕ್ರೈಸ್ತರ ನಂಬಿಕೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಧರ್ಮ ಧರ್ಮಗಳ ಮಧ್ಯೆ ವೈರತ್ವವನ್ನು ಹುಟ್ಟುಹಾಕುವ ಹೀನಕೃತ್ಯವನ್ನು ಮಾಡಿದ್ದು, ದ್ವೇಷಭಾವನೆಯನ್ನು ಉಂಟುಮಾಡುವ ಕೃತ್ಯ ಇತ್ಯಾದಿಗಳನ್ನು ಮಾಡಿದ ವಿಚಾರವಾಗಿ ಆರೋಪಿತರ ವಿರುದ್ಧ ಪ್ರಥಮ ವರ್ತಮಾನ ವರದಿ ದಾಖಲಿಸಿ, ತನಿಖೆ ನಡಿಸಿ, ನ್ಯಾಯ ಒದಗಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಪೋಲಿಸ್ ಕಮಿಷನರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಥೋಲಿಕ್ ಸಭೆಯ ಕೇಂದ್ರದ ಅಧ್ಯಕ್ಷರಾದ ಸ್ಪ್ಯಾನಿ ಲೋಬೊ, ಪ್ರಧಾನ ಕಾವ್ಯದರ್ಶಿಯಾದ ಅಲ್ಲೋನ್ಸ್ ಫೆರ್ನಾಂಡಿಸ್, ಉಪಾಧ್ಯಕ್ಷರಾದ ಸ್ಟೀವನ್ ರೋಡ್ರಿಗಸ್, ಎಪಿಸ್ಕೋಪಲ್ ವಲಯದ ಅಧ್ಯಕ್ಷರಾದ ನೋರಿನ್ ಪಿಂಟೊ, ಕೂಳೂರು ಘಟಕದ ಅಧ್ಯಕ್ಷರಾದ ಕ್ಷೇವರ್ ಡಿಸೋಜ ಹಾಗೂ ಇತರ ವಲಯದ ಪದಾಧಿಕಾರಿಗಳು ಹಾಜರಿದ್ದರು.