ಸೋಮೇಶ್ವರ ಬೀಚ್ ನಲ್ಲಿ ಮುಳುಗಿ ವ್ಯಕ್ತಿ ಸಾವು

Spread the love

ಸೋಮೇಶ್ವರ ಬೀಚ್ ನಲ್ಲಿ ಮುಳುಗಿ ವ್ಯಕ್ತಿ ಸಾವು

ಮಂಗಳೂರು: ಉಳ್ಳಾಲದ ಸೋಮೇಶ್ವರ ಬೀಚ್ ನಲ್ಲಿ ನೀರಾಟವಾಡುತ್ತಿದ್ದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ರವಿವಾರ ಬೆಳಗ್ಗೆ ನಡೆದಿರುವುದಾಗಿ ವರದಿಯಾಗಿದೆ.

ಅಂಬಿಕಾರೋಡ್ ನಿವಾಸಿ ಪ್ರಶಾಂತ್ ಬೇಕಲ್(47) ಮೃತ ವ್ಯಕ್ತಿ.

ಮಂಗಳೂರಿನ ಎಸ್‌.ಡಿ.ಎಮ್ ಕಾಲೇಜಲ್ಲಿ ಬಸ್‌ ಚಾಲಕರಾಗಿದ್ದ ಅವರು, ರವಿವಾರ ಬೆಳಗ್ಗೆ ಪುತ್ರನಾದ ಚಿರಾಯು ಬೇಕಲ್‌, ಸಹೋದರ ವರದರಾಜ್ ಬೇಕಲ್ ಅವರ ಮಗ ವಂದನ್ ಬೇಕಲ್‌, ಮತ್ತು ಇತರರೊಂದಿಗೆ ಸೋಮೇಶ್ವರ ಬೀಚ್ ಗೆ ವಿಹಾರಕ್ಕೆ ತೆರಳಿದ್ದರು. ಪ್ರತೀ ರವಿವಾರವೂ ಪ್ರಶಾಂತ್ ಅವರು ಸಮುದ್ರ ತೀರಕ್ಕೆ ವಿಹಾರಕ್ಕೆ ತೆರಳುತ್ತಿದ್ದರು.

ಎಂದಿನಂತೆ ಇಂದು ಬೆಳಗ್ಗೆ ಪ್ರಶಾಂತ್ ಸಮುದ್ರದಲ್ಲಿ ನೀರಾಟವಾಡುತ್ತಿದ್ದಾಗ ನೀರುಪಾಲಾಗಿ ಮೃತಪಟ್ಟಿದ್ದಾರೆ. ಪ್ರಶಾಂತ್ ಅವರು ಸಮುದ್ರದಲ್ಲಿ ನೀರಾಟವಾಡುತ್ತಿದ್ದಾಗ ನೀರುಪಾಲಾಗಿದ್ದಾರೆ.ಪ್ರಶಾಂತ್ ಅವರ ಪುತ್ರ ಚಿರಾಯು ಈಜು ಪರಿಣಿತನಾಗಿದ್ದು ತಕ್ಷಣ ಹಗ್ಗದಿಂದ ತಂದೆಯನ್ನ ನೀರಿನಿಂದ ಮೇಲಕ್ಕೆತ್ತಿ ದಡಕ್ಕೆ ಹಾಕಿದ್ದು ಅದಾಗಲೇ ಪ್ರಶಾಂತ್ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಮೃತ ಪ್ರಶಾಂತ್ ಅವರ ಏಕೈಕ ಪುತ್ರ ಚಿರಾಯು ಇಂಜಿನಿಯರಿಂಗ್ ವ್ಯಾಸಂಗ ನಡೆಸುತ್ತಿದ್ದಾನೆ.ಮೃತರು ತಾಯಿ,ಪತ್ನಿ ,ಪುತ್ರ,ಇಬ್ಬರು ತಮ್ಮಂದಿರು,ಅಮ್ಮನನ್ನ ಅಗಲಿದ್ದಾರೆ.


Spread the love