ಸೋಲಿಗರ ಸಮಸ್ಯೆಗಳ ಪರಿಹಾರಕ್ಕೆ ಪಾದಯಾತ್ರೆ

Spread the love

ಸೋಲಿಗರ ಸಮಸ್ಯೆಗಳ ಪರಿಹಾರಕ್ಕೆ ಪಾದಯಾತ್ರೆ

ಯಳಂದೂರು: ಬುಡಕಟ್ಟು ಜನಾಂಗವಾದ ಸೋಲಿಗರು ಇಂದು ಕೂಡ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವರ ಬಗ್ಗೆ ಸರ್ಕಾರ ವಿಶೇಷ ಕಾಳಜಿ ವಹಿಸುವಂತೆ ಆಗ್ರಹಿಸಿ ಮುಂದಿನ ದಿನಗಳಲ್ಲಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್‌ಕುಮಾರ್‌ಶೆಟ್ಟಿ ತಿಳಿಸಿದರು.

ತಾಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಭೇಟಿ ನೀಡಿ ಸೋಲಿಗರ ಸಮಸ್ಯೆಗಳನ್ನು ಆಲಿಸಿ ಮಾತನಾಡಿ, ಈ ಸಮುದಾಯ ಅನಾದಿಕಾಲದಿಂದಲೂ ಕಾಡಿನಲ್ಲಿ ವಾಸವಾಗಿದೆ. ಇವರು ಕನ್ನಡ ಭಾಷೆ, ಸಂಸ್ಕೃತಿಯ ನಿಜವಾದ ಆರಾಧಕರು ಹಾಗೂ ಪ್ರತಿಪಾದಕರಾಗಿದ್ದಾರೆ. ಈ ಸಂಸ್ಕೃತಿಯ ನೈಜಭಾಗವಾಗಿದ್ದಾರೆ. ಆದರೆ ಇವರು ಇಂದಿಗೂ ಕೂಡ, ಆರ್ಥಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದಾರೆ. ಅಲ್ಲದೆ ಇವರಿಗೆ ಸಿಗುತ್ತಿರುವ ಮೂಲಸೌಲಭ್ಯಗಳೂ ಕೂಡ ಸರಿಯಾಗಿ ಲಭಿಸುತ್ತಿಲ್ಲ. ಈ ಬಗ್ಗೆ ಧ್ವನಿ ಎತ್ತಲು ಹೋರಾಟದ ಅವಶ್ಯಕತೆ ಇದ್ದು ಇದಕ್ಕಾಗಿ ಮುಂದಿನ ದಿನಗಳಲ್ಲಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಚಾಮರಾಜನಗರ ಜಿಲ್ಲೆ ಗಡಿ ಜಿಲ್ಲೆಯಾದರೂ ಇಲ್ಲಿ ಅತ್ಯಂತ ಹೆಚ್ಚು ಕನ್ನಡ ಭಾಷೆ ಮಾತನಾಡುವ ಜನರಿದ್ದಾರೆ. ಇಲ್ಲಿನ ಜಾನಪದ ವಿಶ್ವವಿಖ್ಯಾತವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನಮ್ಮ ಬಣವನ್ನು ಇನ್ನಷ್ಟು ಪ್ರಬಲವಾಗಿಸುವ ಮೂಲಕ ಇಲ್ಲಿ ನಾಡು, ನುಡಿ ಕಟ್ಟುವ ಕೆಲಸಗಳನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ವೃದ್ಧಿಸಲು ಯತ್ನಿಸಲಾಗುವುದು. ಈಗಾಗಲೇ ನಮ್ಮ ಸಂಘಟನೆ ಇಲ್ಲಿ ಕಾರ್ಯನಿರತವಾಗಿದ್ದು ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟ ಬಲವರ್ದನೆಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು. ಇದಕ್ಕೂ ಮುಂಚೆ ಪಟ್ಟಣದ ಎಸ್‌ಬಿಐ ಸರ್ಕಲ್‌ನಲ್ಲಿ ಇವರಿಗೆ ತಾಲೂಕು ಘಟಕದ ವತಿಯಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು.

ಕರವೇ ರಾಜ್ಯ ಉಪಾಧ್ಯಕ್ಷ ಮಂಜೇಶ್, ಶಿವರಾಜ್‌ಗೌಡ, ಕಾರ್ಯದರ್ಶಿ ಎಂ. ಲೊಕೇಶ್, ನಿಕಟ ಪೂರ್ವ ರಾಜ್ಯಾಧ್ಯಕ್ಷ ರಮೇಶ್, ಜಿಲ್ಲಾಧ್ಯಕ್ಷ ಆರ್. ಮೋಹನ್, ಉಪಾಧ್ಯಕ್ಷ ನಾಗೇಂದ್ರನಾಯಕ್, ಪ್ರಧಾನ ಕಾರ್ಯದರ್ಶಿ ರಿಯಾಜ್‌ಪಾಷ, ಉಮ್ಮತ್ತೂರು ಚಂದ್ರು ತಾಲೂಕು ಅಧ್ಯಕ್ಷ ವೈ.ಕೆ. ಮೋಳೆ ನಾಗರಾಜು, ಚಾಮಲಾಪುರ ವಿಜಯ್, ಜೆ. ಶ್ರೀನಿವಾಸ್, ಭೀಮಪ್ಪ, ವೈ.ವಿ. ಉಮಾಶಂಕರ್, ವೆಂಕಟೇಶ್, ಬೇದೇಗೌಡ, ರವಿಗೌಡಹಳ್ಳಿ, ಹರೀಶ್‌ಬಾಬು, ಸ್ವಾಮಿ, ಸೋಮಣ್ಣ, ರಂಗಸ್ವಾಮಿ ಸೇರಿದಂತೆ ಹಲವರು ಇದ್ದರು.


Spread the love

Leave a Reply

Please enter your comment!
Please enter your name here