
ಸೌಜನ್ಯ ಕೊಲೆ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ಮುಖಾಂತರ ನ್ಯಾಯಾಂಗ ತನಿಖೆಗೆ ವಹಿಸಲು ಆಗ್ರಹ
2012ರಲ್ಲಿ, ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಪಾಂಗಾಳದ ನಿವಾಸಿ, ಸೌಜನ್ಯ, ಎಂಬ ಹೆಣ್ಣುಮಗಳನ್ನು ಅಮಾನವೀಯವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಕಪ್ಪು ಚುಕ್ಕೆಯಾಗಿದೆ. ಈ ಪ್ರಕರಣವನ್ನು CBI ತನಿಖೆ ನಡೆಸಿದ ನಂತರವೂ ಸೌಜನ್ಯ ಕೊಲೆಗೆ ನ್ಯಾಯ ಸಿಗಲಿಲ್ಲ. ಹಾಗಾಗಿ ಈ ಪ್ರಕರಣವನ್ನು ಉಚ್ಚ ನ್ಯಾಯಾಲಯ ಅಥವಾ ಸರ್ವೋಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ಮುಖಾಂತರ ಮರುತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧನ ಮಾಡಿ, ಸೌಜನ್ಯ ಕೊಲೆ ರಹಸ್ಯವನ್ನು ಬೇಧಿಸಲು ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಆಗ್ರಹ ಸೌಜನ್ಯಳ ನ್ಯಾಯಕೋಸ್ಕರ ಪ್ರಾಮಾಣಿಕವಾಗಿ, ನ್ಯಾಯ ಸಮ್ಮತವಾಗಿ ಹೋರಾಟ ಮಾಡುವ ಸಂಘಟನೆಗಳಿಗೆ ವಿಶ್ವ ಹಿಂದೂ ಪರಿಷದ್ ಬೆಂಬಲ ನೀಡುತ್ತದೆ ವಿಶ್ವ ಹಿಂದೂ ಪರಿಷತ್ ಮುಖಂಡ ಎಂಬಿ ಪುರಾಣಿಕ್ ಹೇಳಿದರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆ ದೈವ ದೇವರ ಮೇಲೆ ಅಪಾರ ನಂಬಿಕೆ ಇರುವ ಜಾಗ, ಈ ತುಳುನಾಡಿನಲ್ಲಿ ಅನ್ಯಾಯವಾದಾಗ ದೈವ ದೇವರು ಎಂದಿಗೂ ನಮ್ಮ ಕೈಬಿಡುವುದಿಲ್ಲ, ಯಾವುದೇ ಅನ್ಯಾಯವಾದಾಗ ದೈವ ದೇವರ ಮೊರೆ ಹೋಗುವುದು ನಮ್ಮ ಹಿರಿಯರಿಂದ ಬಂದ ವಾಡಿಕೆ ಹಾಗಾಗಿ ಇಂತಹ ಪುಣ್ಯ ನಾಗಾರಾಧನೆ, ದೈವಾರಾಧನೆ ನಾಡಿನಲ್ಲಿ ಈ ಅನ್ಯಾಯದ ವಿರುದ್ಧ ಮುಗ್ಧ ಹೆಣ್ಣುಮಗಳು ಸೌಜನ್ಯ ಕೊಲೆ ಪುಕರಣ ಆದಷ್ಟು ಬೇಗ ಇತ್ಯರ್ಥವಾಗಿ ನೈಜ ಆರೋಪಿಗಳಿಗೆ ಶಿಕ್ಷೆಯಾಗುವಂತೆ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ದೇವಸ್ಥಾನ, ದೈವಸ್ಥಾನ ಹಾಗು ಮಠ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುವಂತೆ ವಿಶ್ವ ಹಿಂದೂ ಪರಿಷದ್ ಕರೆ ನೀಡುತ್ತದೆ.
ಧರ್ಮ ನೆಲೆಸಿರುವ ಸ್ಥಳವೇ ಧರ್ಮಸ್ಥಳವೆಂಬುದು ಭಕ್ತರ ನಂಬಿಕೆ, ಇಲ್ಲಿ ಸಾಕ್ಷಾತ್ ಪರಮೇಶ್ವರನೇ ನೆಲೆಸಿದ್ದಾನ ಎಂದು ಹೇಳುತ್ತಾರೆ. ಧರ್ಮಸ್ಥಳ ಎಂದರೆ ಧರ್ಮವು ನೆಲಸಿರುವ ಸ್ಥಳ ಎಂಬುದು ಭಕ್ತರ ನಂಬಿಕೆ ಹಾಗಾಗಿ ಲಕ್ಷಾಂತರ ಭಕ್ತರು ಈ ಇತಿಹಾಸ ಪ್ರಸಿದ್ಧ ದೇವಸ್ಥಾನಕ್ಕೆ ಬಂದು ಮಂಜುನಾಥ ಸ್ವಾಮಿಯ ಹಾಗೂ ಅಣ್ಣಪ್ಪ ಸ್ವಾಮಿಯ ದರ್ಶನ ಪಡೆಯುತ್ತಾರೆ. ಪುತಿನಿತ್ಯ ಸಾವಿರಾರು ಭಕ್ತರಿಗೆ ಅನ್ನ ದಾಸೋಹ ನಿರಂತರವಾಗಿ ನಡೆಯುತ್ತಾ ಬಂದಿದ. ಶ್ರೀಕ್ಷೇತ್ರದ ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆಗಳು ರಾಜ್ಯದ ಗ್ರಾಮ ಗ್ರಾಮಗಳಲ್ಲಿ ನಡೆಯುತ್ತಿದೆ.
ಇಂತಹ ಇತಿಹಾಸ ಪ್ರಸಿದ್ಧ ಕ್ಷೇತ್ರವನ್ನು ಸೌಜನ್ಯ ಕೊಲೆ ಪ್ರಕರಣ ಹೋರಾಟದ ಹೆಸರಿನಲ್ಲಿ ಅವಹೇಳನ ಮಾಡುವುದು, ಅಗೌರವ ತೋರುವುದು, ಶ್ರೀಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ವಿಶ್ವ ಹಿಂದೂ ಪರಿಷದ್ ಬಲವಾಗಿ ವಿರೋಧಿಸುತ್ತದೆ. ಮತ್ತು ಶ್ರೀಕ್ಷೇತ್ರಕ್ಕೆ ಅವಮಾನ ಮಾಡಿದಲ್ಲಿ ಇಂದಿಗೂ ಸಹಿಸುವುದಿಲ್ಲ. ಸೌಜನ್ಯ ಕೊಲೆ ಪುಕರಣ ಹೋರಾಟವನ್ನು ಮುಂದಿಟ್ಟುಕೊಂಡು ಕೆಲವು ಪುಗತಿಪರ ಬುದ್ಧಿಜೀವಿಗಳ ಸಂಘಟನೆಗಳು ಕ್ಷೇತ್ರದ ಬಗ್ಗೆ, ಅಪಪುಚಾರ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಈ ರೀತಿಯ ಅಪಪ್ರಚಾರ, ಅವಮಾನ ಮಾಡಿದಲ್ಲಿ ಅಂತಹ ಸಂಘಟನೆಗಳಿಗೆ ವಿಶ್ವ ಹಿಂದೂ ಪರಿಷದ್ ನೇರ ಹೋರಾಟದ ಎಚ್ಚರಿಕೆಯನ್ನು ನೀಡುತ್ತದೆ ಎಂದರು