
ಸೌಹಾರ್ದ ಸಮಾಜಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ – ನಿಕೇತ್ ರಾಜ್ ಮೌರ್ಯ
ಉಡುಪಿ: ಸಮಾಜದಲ್ಲಿ ಶಾಂತಿ ನೆಮ್ಮದಿ ಸೌಹಾರ್ದ ನೆಲೆಸಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಖು ಹಸಿವು ಬಡತನ ವಿರುದ್ದ ಸಂಘರ್ಷ ನಡೆಸುವ ಎಲ್ಲಾ ಧರ್ಮದವರು ಒಟ್ಟಿಗೆ ಬಾಳಬೇಕೆನ್ನುವ ಆಶಯ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದು ಕೆಪಿಸಿಸಿ ಪ್ಯಾನಲಿಸ್ಟ್ ನಿಕೇತ್ ರಾಜ್ ಮೌರ್ಯ ಹೇಳಿದರು
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಲ್ಮಾಡಿ ಚರ್ಚ್ ಬಳಿ ರವಿವಾರ ನಡೆದ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಪರವಾಗಿ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಮೀನುಗಾರರ ಹಿತ ಕಾಯಲು ಕಟಿಬದ್ದರಾದ ಸಮರ್ಥ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಇದಕ್ಕೂ ಮೊದಲು ಬೃಹತ್ ಬೈಕ್ ಜಾಥಾ ಕಡಲತೀರದ ಪಡುತೋನ್ಸೆಬೆಂಗ್ರೆಯಿಂದ ಆರಂಭವಾಗಿ ಹೂಡೆ, ಗುಜರ್ ಬೆಟ್ಟು, ತೊಟ್ಟಂ, ವಡಭಾಂಡೇಶ್ವರ, ಮಲ್ಪೆ ಮಾರ್ಗವಾಗಿ ಕಲ್ಮಾಡಿ ಚರ್ಚ್ ಬಳಿ ಸಮಾಪನಗೊಂಡಿತು.
ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಸಮಸ್ತ ಮೀನುಗಾರರ ಹಿತಚಿಂತನೆ, ವಿದ್ಯಾವಂತ ಯುವಕರಿಗೆ ಉದ್ಯೋಗಾವಕಾಶಕ್ಕೆ ಉದ್ದಿಮೆಗಳ ಸ್ಥಾಪನೆ ಹಾಗೂ ಇತರ ಅಭಿವೃದ್ದಿ ಕಾರ್ಯಗಳನ್ನು ಮಾಡಿ ಜನರ ಹಿತ ಕಾಪಾಡಲು ಬದ್ದ ಎಂದರು.
ಮುಖಂಡರಾದ ಎಂ ಎ ಗಪೂರ್, ಪ್ರತಾಪನ್, ಭರತ್ ಮುಂಡೋಡಿ, ಮಂಜುನಾಥ್ ಸುಣೇಗಾರ್, ಪ್ರಖ್ಯಾತ್ ಶೆಟ್ಟಿ, ವೆರೋನಿಕಾ ಕರ್ನೆಲಿಯೊ, ಸರಳಾ ಕಾಂಚನ್, ದಿವಾಕರ್ ಕುಂದರ್, ಗೀತಾ ವಾಗ್ಳೆ, ಸೌರಭ್ ಬಲ್ಲಾಳ್ ಉಪಸ್ಥಿತರಿದ್ದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಸ್ವಾಗತಿಸಿ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ ಹೇರೂರು ವಂದಿಸಿದರು.