
ಸೌಹಾರ್ದ ಸಮಾಜದ ನಿರ್ಮಾಣ ಅಲ್ಪಸಂಖ್ಯಾತ ಘಟಕದ ಸಂಕಲ್ಪವಾಗಲಿ- ರಮಾನಾಥ ರೈ
ಮಂಗಳೂರು: ಸಹಬಾಳ್ವೆ, ಸೌಹಾರ್ದತೆಯಂತಹ ಉದಾತ್ತ ಆದರ್ಶಗಳೊಂದಿಗೆ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕ ಕಾರ್ಯನಿರ್ವಹಿಸಬೇಕೆಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು. ದ.ಕ. ಜಿಲ್ಲಾ ಕಾಂಗ್ರೆಸ್ನ ಅಲ್ಪಸಂಖ್ಯಾತ ಘಟಕದ ಜಿಲ್ಲಾ ವ್ಯಾಪ್ತಿಯ 16 ಬ್ಲಾಕ್ಗಳ ನೂತನ ಅಧ್ಯಕ್ಷರುಗಳಿಗೆ ನೇಮಕಾತಿ ಆದೇಶವನ್ನು ನೀಡಿ ಅವರು ಮಾತನಾಡಿದರು.
ಪಕ್ಷ ಸಂಘಟನೆ, ಚುನಾವಣಾ ಕರ್ಯತಂತ್ರದ ಬಗ್ಗೆ ಶಾಸಕ ಯು.ಟಿ. ಖಾದರ್ ಮಾತನಾಡಿ ನೂತನ ಜಿಲ್ಲಾ ಪದಾಧಿಕಾರಿಗಳಿಗೆ ನೇಮಕಾತಿ ಆದೇಶವನ್ನು ನೀಡಿ ಅಭಿನಂದಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ. ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು.
ವೇದಿಕೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ, ಮಾಜಿ ಶಾಸಕರಾಧ ಜೆ.ಆರ್. ಲೋಬೋ, ಮೊಹಿಯುದ್ದೀನ್ ಬಾವಾ, ಕೆಪಿಸಿಸಿ ಮಾಜಿ ಪ್ರ. ಕಾರ್ಯದರ್ಶಿ ಜಿ.ಎ. ಬಾವಾ, ಪಕ್ಷದ ಮುಖಂಡರಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಸದಾಶಿವ ಉಳ್ಳಾಲ, ಶಶಿಧರ್ ಹೆಗ್ಡೆ, ಅಬ್ಬಾಸ್ ಅಲಿ, ಎನ್.ಎಸ್. ಕರೀಂ, ಪ್ರಕಾಶ್ ಸಾಲ್ಯಾನ್, ಅಬ್ದುಲ್ ಸಲೀಂ, ಸುಧೀರ್ ಕುಮಾರ್ ಶೆಟ್ಟಿ, ಅಬ್ದುಲ್ ರವೂಫ್, ಲಾರೆನ್ಸ್ ಡಿಸೋಜ, ನೂರುದ್ದೀನ್ ಸಾಲ್ಮರ, ಡೆನಿಸ್ ಡಿಸೋಜಾ, ಶರೀಫ್ ಕಡಬ, ತಾಜ್ ಮುಹಮ್ಮದ್, ಲತೀಫ್ ಕಂದಕ್, ಅಶ್ರಫ್ ಬಜಾಲ್, ನವೀನ್ ಡಿಸೋಜಾ, ಶಂಶುದ್ದೀನ್ ಹೆಚ್ಬಿಟಿ, ಶಬೀರ್ ಎಸ್. ಉಪಸ್ಥಿತರಿದ್ದರು.
ಹುಸೈನ್ ಬೋಳಾರ ಧನ್ಯವಾದ ಸಲ್ಲಿಸಿದರು.
eega thiliyitha soharda yarinda irabeku anta