ಸ್ತ್ರೀಪರ ಕಾನೂನುಗಳ ಅರಿವು ಬಹುಮುಖ್ಯ: ಶೋಭಾ ಬಿ.ಜಿ

Spread the love

ಸ್ತ್ರೀಪರ ಕಾನೂನುಗಳ ಅರಿವು ಬಹುಮುಖ್ಯ: ಶೋಭಾ ಬಿ.ಜಿ

ಮಂಗಳೂರು: ಮಹಿಳೆಯರಿಗೆ ಸ್ತ್ರೀಪರ ಕಾನೂನುಗಳ ಅರಿವು ಬಹುಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳಾದ ಶೋಭಾ ಬಿ.ಜಿ. ಅವರು ಹೇಳಿದರು.

ಅವರು ನಗರದ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಅ.31ರಂದು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಿವಿಧ ಇಲಾಖೆಗಳು ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ನೆನಪಿಗಾಗಿ ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನ ಮೂಲಕ ನಾಗರೀಕ ಸಬಲೀಕರಣ ಅಭಿಯಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಿಳೆಯರು ಮೇಲೆ ದೌರ್ಜನ್ಯ ನಡೆಯಬಾರದು, ಸ್ತ್ರೀಯರ ಮೇಲೆ ಆಸಿಡ್ ದಾಳಿ, ದೌರ್ಜನ್ಯ, ಮಾನಸಿಕ ಕಿರುಕುಳ ಹೀಗೆ ಪ್ರತಿಯೊಂದಕ್ಕೂ ಕಾನೂನು ಮತ್ತು ಪರಿಹಾರಗಳಿವೆ ಜೊತೆಗೆ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಉಚಿತವಾಗಿ ಕಾನೂನು ನೆರವು ದೊರೆಯುತ್ತದೆ. ಇವುಗಳನ್ನೂ ಪ್ರತಿಯೊಬ್ಬರೂ ಅರಿತುಕೊಂಡು ಸಮಾಜದಲ್ಲಿರುವ ಇನ್ನಷ್ಟು ಮಹಿಳೆಯರಿಗೆ, ಶೋಷಿತರಿಗೆ ಅದನ್ನು ತಲುಪಿಸಬೇಕು ಆಗ ಮಾತ್ರ ಮಹಿಳೆಯರು ಸಮಾಜದಲ್ಲಿ ಸ್ವತಂತ್ರ ಮತ್ತು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪಾಪಭೋವಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶೈಲಾ ಕೆ.ಕಾರಗಿ, ಸಂಪನ್ಮೂಲ ವ್ಯಕ್ತಿ ಶುಕರಾಜ್ ಎಸ್.ಕೊಟ್ಟಾರಿ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ.ಕೆ. ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವಿವಿಧ ಸಂಘ-ಸಂಸ್ಥೆಗಳ ಮಹಿಳಾ ಸದಸ್ಯರು ಭಾಗವಹಿಸಿದ್ದರು.


Spread the love