ಸ್ಥಳೀಯರಿಗೆ ಉದ್ಯೋಗ ನಮ್ಮ ಹಕ್ಕು – ಮನೆ ಮನೆ ಪ್ರತಿಭಟನೆಗೆ ದಕ ಜಿಲ್ಲಾ ಯುವ ಜೆಡಿಎಸ್ ಬೆಂಬಲ

Spread the love

ಸ್ಥಳೀಯರಿಗೆ ಉದ್ಯೋಗ ನಮ್ಮ ಹಕ್ಕು – ಮನೆ ಮನೆ ಪ್ರತಿಭಟನೆಗೆ ದಕ ಜಿಲ್ಲಾ ಯುವ ಜೆಡಿಎಸ್ ಬೆಂಬಲ

ಮಂಗಳೂರು: ಎಮ್.ಆರ್.ಪಿ.ಎಲ್ ಸೇರಿದಂತೆ ಕೆಲವೊಂದು ಕಂಪೆನಿಗಳಲ್ಲಿ ತುಳುನಾಡಿನ ಯುವಕರಿಗೆ ಉದ್ಯೋಗ ದೊರೆಯಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಆಯೋಜಿಸಿದ್ದ ಮನೆ ಮನೆ ಪ್ರತಿಭಟನೆಗೆ ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್ ಬೆಂಬಲ ವ್ಯಕ್ತಪಡಿಸಿದೆ.

ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ‍್ಣ ನೇತೃತ್ವದಲ್ಲಿ ಮನೆ ಮನೆ ಪ್ರತಿಭಟನಾ ಫಲಕವನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಲಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ಅಕ್ಷಿತ್ ಸುವರ್ಣ ಎಮ್.ಆರ್.ಪಿ.ಎಲ್ ಸೇರಿದಂತೆ ಕೆಲವೊಂದು ಕಂಪೆನಿಗಳಲ್ಲಿ ತುಳುನಾಡಿನ ಯುವಕರಿಗೆ ಪ್ರತಿಬಾರಿ ಅನ್ಯಾಯವಾಗುತ್ತಿದೆ. ಉತ್ತಮ ಶಿಕ್ಷಣವನ್ನು ಹೊಂದಿದ ತುಳುನಾಡಿನ ಯುವಕರಿಗೆ ಕೆಲಸದಲ್ಲಿ ಅವಕಾಶ ನೀಡದೆ ಬೇರೆ ರಾಜ್ಯದವರಿಗೆ ಮನ್ನಣೆ ನೀಡಲಾಗುತ್ತಿದೆ ಇದು ಖಂಡನೀಯ. ಈ ಬಗ್ಗೆ ಜಿಲ್ಲೆಯ ಸಂಸದರು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ತುಳುನಾಡಿನ ಯುವಕರಿಗೆ ಉದ್ಯೋಗದಲ್ಲಿ ಸೂಕ್ತ ಮನ್ನಣೆ ದೊರೆಯುವಂತಾಗಬೇಕು ಇಲ್ಲವಾದಲ್ಲಿ ಯುವ ಜೆಡಿಎಸ್ ಮುಂದಿನ ದಿನಗಳಲ್ಲಿ ಜನರನ್ನು ಸೇರಿಸಿ ಬೃಹತ್ ಪ್ರಮಾಣದ ಹೋರಾಟವನ್ನು ನಡೆಸಬೇಕಾಗುತ್ತದೆ. ತುಳುನಾಡಿನ ಯುವಕರ ಭವಿಷ್ಯದ ದೃಷ್ಟಿಯಿಂದ ಜಾತಿ ಮತ ಭೇದ ಬಿಟ್ಟು ಎಲ್ಲರೂ ಒಂದಾಗಬೇಕಾಗದ ಅಗತ್ಯವಿದ್ದು ಎಲ್ಲರೂ ಕೂಡ ಸಹಕಾರ ನೀಡವುಂತೆ ಅವರು ಮನವಿ ಮಾಡಿದರು.

ದ.ಕ. ಜಿಲ್ಲಾ ಯುವ ಜನತಾದಳ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪೈಝಲ್ ಮೋಹಮ್ಮದ್, ಯುವ ಜನತಾದಳದ ಮಂಗಳೂರು ಉತ್ತರ ಘಟಕಾಧ್ಯಕ್ಷ ರತೀಶ್ ಕರ್ಕೇರ ,ಪ್ರದೀಪ್, ರೊಹಿತ್, ಶ್ರೀನಾಥ್ ಪೂಜಾರಿ ರವರು ಪಾಲ್ಗೊಂಡಿದ್ದರು.


Spread the love