ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ

Spread the love

ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ

ಮಂಡ್ಯ: ಸ್ನೇಹಿತರ ನಡುವೆ ನಡೆದ ಮಾರಾಮಾರಿಯಲ್ಲಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಭಾರತೀನಗರದ ದೊಡ್ಡ ಅರಸಿನಕೆರೆ ಗ್ರಾಮದಲ್ಲಿ ನಡೆದಿದೆ.

ದೊಡ್ಡ ಅರಸಿನಕೆರೆ ಗ್ರಾಮದ ರಮೇಶ್ ಎಂಬುವವರ ಪುತ್ರ ಅರುಣ್(24) ಸಾವನ್ನಪ್ಪಿದ ದುರ್ದೈವಿ. ಈತನನ್ನು ಅದೇ ಗ್ರಾಮದ ದೇವರಾಜ್ ದೊಡ್ಡಯ್ಯ, ರಾಗೂಳಿ ಹಾಗೂ ಗಜ ಸೇರಿದಂತೆ ಏಳು ಮಂದಿ ಸೇರಿ ಮಾಡಿದ್ದಾರೆ ಎನ್ನಲಾಗಿದೆ.

ಭಾನುವಾರ ಸಂಜೆ 5ಗಂಟೆಯ ವೇಳೆಯಲ್ಲಿ ಅರುಣ್ ಮತ್ತು ದೇವರಾಜ್ ದೊಡ್ಡಯ್ಯ, ರಾಗೂಳಿ ಹಾಗೂ ಗಜ ಅವರ ನಡುವೆ ಗ್ರಾಮದಲ್ಲಿನ ಕೃಷಿಪತ್ತಿನ ಸಹಕಾರ ಸಂಘದ ಬಳಿ ಜಗಳ ಆರಂಭವಾಗಿದ್ದು, ಈ ಸಂದರ್ಭ ಅರುಣನ ಮೂಗಿನ ಮೇಲೆ ಬಲವಾಗಿ ಗುದ್ದಿದ್ದರಿಂದ ಮೂಗಿಗೆ ಗಾಯವಾಗಿ ರಕ್ತ ಸೋರಿದೆ. ಇದನ್ನು ಕಂಡ ಅರುಣನ ಸ್ನೇಹಿತ ಆತನನ್ನು ಕೆ.ಎಂ.ದೊಡ್ಡಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಭಾರತೀನಗರದ ದೇವರಹಳ್ಳಿ ರಸ್ತೆಯಲ್ಲಿ ಅಡ್ಡಗಟ್ಟಿದ ದೇವರಾಜ್ ದೊಡ್ಡಯ್ಯ, ರಾಗೂಳಿ, ಗಜ ಹಾಗೂ ಮಳವಳ್ಳಿಯವರೆನ್ನಲಾದ ಮೂರು ಮಂದಿ ಆರೋಪಿಗಳು ಅರುಣನ ತಲೆಗೆ ದೊಣ್ಣೆ ಮತ್ತು ಕಲ್ಲಿನಿಂದ ಹೊಡೆದು ಗಂಭೀರ ಗಾಯಗೊಳಿಸಿದ್ದಾರೆ.

ಕೂಡಲೇ ಗಾಯಗೊಂಡಿದ್ದ ಅರುಣ್ ನನ್ನು ಸ್ಥಳೀಯ ಜಿ.ಮಾದೇಗೌಡ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅರುಣ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಪಿ ಯತೀಶ್, ಎಎಸ್ಪಿ ವೇಣುಗೋಪಾಲ್ ಅವರು ಕೊಲೆ ನಡೆದ ಸ್ಥಳ, ಗ್ರಾಮದಲ್ಲಿ ಗಲಾಟೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಈ ಸಂಬಂಧ ಕೆ.ಎಂ.ದೊಡ್ಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ


Spread the love

Leave a Reply

Please enter your comment!
Please enter your name here