ಸ್ಮಾರ್ಟ್ ಸಿಟಿ ಮಾದರಿ ರಸ್ತೆ, ಗುಂಡಿ ಹುಡುಕುವ ಸ್ಪರ್ಧೆ-2022 ಫಲಿತಾಂಶ

Spread the love

ಸ್ಮಾರ್ಟ್ ಸಿಟಿ ಮಾದರಿ ರಸ್ತೆ, ಗುಂಡಿ ಹುಡುಕುವ ಸ್ಪರ್ಧೆ-2022 ಫಲಿತಾಂಶ

ಮಂಗಳೂರು:  ನಗರ ಪಾಲಿಕೆ ವ್ಯಾಪ್ತಿಯ “ಸ್ಮಾರ್ಟ್ ಸಿಟಿ ಮಾದರಿ ರಸ್ತೆ, ಗುಂಡಿ ಹುಡುಕುವ ಸ್ಪರ್ಧೆ-2022”, ಈ ಸ್ಪರ್ಧೆಯು ದಿನಾಂಕ 23/8/2022ರಿಂದ 29/8/2022ರವರೆಗೆ ನಗರದಲ್ಲಿರುವ ಅಪಾಯಕಾರಿ ಮತ್ತು ಮಾನವ ಜೀವಕ್ಕೆ ಅಪಾಯವನ್ನು ತರುವ ಗುಂಡಿಗಳನ್ನು ಗುರುತಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದರಲ್ಲಿ 1211 ಮಂದಿ ಭಾಗವಹಿಸಿದ್ದು, ಇಂದು ದಿನಾಂಕ 30/8/2022ರಂದು ಈ ಪೈಕಿ ಸುಮಾರು 30 ಗುಂಡಿಗಳನ್ನು ಆಯ್ದು, ತೀರ್ಪುದಾರರಾದ ಶ್ರೀ ಮಾರ್ಸೆಲ್ ಮೊಂತೆರೊ, ಶ್ರೀ ದೀಕ್ಷಿತ್ ಅತ್ತಾವರ, ಶ್ರೀ ಅಜೀಜ್ ಕುದ್ರೋಳಿ ಮತ್ತು ಶೀ ಮಹೇಶ್ ಕೋಡಿಕಲ್ ಇವರುಗಳು, ಸಂಚಾಲಕ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ತೀರ್ಪುದಾರರು ನೀಡಿದ ಫಲಿತಾಂಶದಂತೆ-
1) ಪ್ರಥಮ ಬಹುಮಾನ : ಕುಮಾರಿ ಆಯೋರಾ, – ಶಕ್ತಿ ನಗರ ಏರಿಯಾ
2) ದ್ವಿತೀಯ ಬಹುಮಾನ : ಶ್ರೇಯಾಸ್ ಕಾಮತ್ – ಮನ್ನಗುಡ್ಡ ಏರಿಯಾ
3) ತೃತೀಯ ಬಹುಮಾನ : ಕ್ಯಾರನ್ ಲೋಬೊ – ಮಹಾಕಾಳಿಪಡ್ಪು
ಇವರುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.


ಈ ಸ್ಪರ್ಧೆಯು ದ.ಕ ಜಿಲ್ಲಾ ಬಸ್ಸ್ ನೌಕರರ ಸಂಘದ ವತಿಯಿಂದ ಪ್ರಥಮ ಬಹುಮಾನ ರೂ.5000, ದ್ವಿತೀಯ ಬಹುಮಾನ ಕಾರು ಮತ್ತು ಟೆಂಪೆÇೀ ಚಾಲಕರ ಸಂಘದ ವತಿಯಿಂದ ರೂ.3,000/- ಮತ್ತು ದ್ವಿಚಕ್ರ ಸವಾರರ ಪರವಾಗಿ ತೃತೀಯ ಬಹುಮಾನ ರೂ.2,000/- ನ್ನು ನಗರ ಪಾಲಿಕೆಯ ಮುಂದೆ ಕಾರ್ಮಿಕ ಸಂಘಟನೆಗಳಾದ ಬಸ್ಸ್ ನೌಕರರ ಸಂಘ, ಗೂಡ್ಸ್/ಟೆಂಪೆÇೀ ಚಾಲಕರ ಸಂಘ, ರಿಕ್ಷಾ ಚಾಲಕರ ಸಂಘ ಇದರ ಪದಾಧಿಕಾರಿಗಳು ಸೇರಿ ಮಹಾನಗರ ಪಾಲಿಕೆಯ ಮುಂದೆ ಸಾರ್ವಜನಿಕವಾಗಿ ವಿತರಣೆ ಮಾಡಲಾಯಿತು. ಸಮಾರಂಭ ಉದ್ದೇಶಿಸಿ ಮಾತನಾಡಿದ ಶ್ರೀ ಐವನ್ ಡಿ ಸೋಜರವರು ನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ವತಿಯಿಂದ ಆಗುವ ಅಕ್ರಮಗಳ ಬಗ್ಗೆ ಮತ್ತು ಗುಂಡಿಗಳ ಬಗ್ಗೆ ಅಕ್ರಮಗಳ ಬಗ್ಗೆ ವಿವರಿಸಿದರು. ಬಿಜೆಪಿ ಸರಕಾರದ ಮತ್ತು ಕೇಂದ್ರ ಸರಕಾರದ ವೈಫಲ್ಯದ ಬಗ್ಗೆ ಅಕ್ರೋಶವನ್ನು ವ್ಯಕ್ತ ಪಡಿಸಿದರು. ಇದರಲ್ಲಿ ಅನೇಕ ಯುವಕ ಯುವತಿಯರು ಭಾಗವಹಿಸಿದರು.
ಮುಂದಿನ ದಿನಗಳಲ್ಲಿ ಈ ಗುಂಡಿಗಳನ್ನು ತುಂಬದೇ ಇದ್ದಲ್ಲಿ ನಗರ ಪಾಲಿಕೆ ಮೇಯರ್ ಮತ್ತು ಕಮಿಷನರ್ ಹಾಗೂ ಸ್ಮಾರ್ಟ್ ಸಿಟಿಯ ಮ್ಯಾನೆಜಿಂಗ್ ಡೈರೆಕ್ಟರ್ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುಧಾಗಿ ಶೀ ಐವನ್ ಡಿ ಸೋಜರವರು ಎಚ್ಚರಿಕೆಯನ್ನು ನೀಡಿದರು.
ಗುಂಡಿಗಳಿಂದ ರಸ್ತೆ ಅಪಘಾತದಿಂದ ಪ್ರಾಣ ಕಳೆದುಕೊಂಡವರು, ಗಾಯಗೊಂಡವರು ಹಾಗೂ ದೇಹ ನೂನ್ಯತೆ ಆಗಿರುವವರ ಬಗ್ಗೆ ಕೂಡಲೇ ಪರಿಹಾರ ಘೋಷಣೆ ಮಾಡಬೇಕು ಎಂದು ಹೇಳಿದರು. ಗುರಿಗಳನ್ನು ತುಂಬಲು ಒಂದು ತಂಡವನ್ನು ರಚನೆ ಮಾಡಬೇಕು, ಇದು ಎಲ್ಲಾ ನಗರ ಪಾಲಿಕೆಯಲ್ಲಿ ಇದೆ. ನಮ್ಮ ನಗರ ಪಾಲಿಕೆಯಲ್ಲಿ ಮಾತ್ರ ಇಲ್ಲ ಎಂದು ವಿಷಾಧಿಸಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್/ಕಾರ್ಪರೇಟರ್ ಶಶಿಧರ್ ಹೆಗ್ಡೆ, ಮಾಜಿ ಕಾರ್ಪರೇಟರ್ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲಿಯಾನ್, ಸಬಿತಾ ಮಿಸ್ಕಿತ್, ತೀರ್ಪುದಾರ ಮಹೇಶ್ ಕೋಡಿಕಲ್, ಮಾರ್ಸೆಲ್ ಮೊಂತೆರೊ, ಅಬ್ದುಲ್ ಅಜೀಜ್, ದೀಕ್ಷಿತ್ ಅತ್ತಾವರ, ಚಿತ್ತರಂಜನ್ ಶೆಟ್ಟಿ, ಕೃಷ್ಣ ಆಂಚನ್, ರಮಾನಂದ ಪೂಜಾರಿ, ಸಿದ್ದು ಪೂಜಾರಿ, ಗಣೇಶ್ ಎಕ್ಕೂರು, ಶಶಿ ಪೂಜಾರಿ ಬೋಲಾರ್, ಧನರಾಜ್, ಸತೀಶ್ ಪೆಂಗಲ್, ಜೇಮ್ಸ್ ಪ್ರವೀಣ್, ಮೀನಾ ಟೆಲ್ಲಿಸ್, ಅಶಿತ್ ಪಿರೇರಾ, ವಿಲ್ಪಿ ಫೆರ್ನಾಂಡಿಸ್, ನಜೀರ್ ಬಜಾಲ್, ಹಸನ್ ಪಳ್ನೀರ್, ಗಂಗಾದರ್ ಯೆಯ್ಯಾದಿ, ಸುರೇಶ್ ಮಲ್ಲಿಕಟ್ಟೆ, ನವೀನ್ ಕಂಕನಾಡಿ, ಪ್ರದೀಪ್ ಕರಾವಳಿ, ಸುಮಾರು 250ಕ್ಕೂ ಅಧಿಕ ಮಂದಿ ಉಪಸ್ಥಿತರಿದ್ದರು.
ಪ್ರಥಮ ಬಹುಮಾನವನ್ನು ವಿಜೇತರಾದ ಕುಮಾರಿ ಆಯೋರಾ ಶಕ್ತಿನಗರ ಇವರಿಗೆ ರೂ.5,000/-, ದ್ವಿತೀಯ ಬಹುಮಾನ ಶ್ರೇಯಾಸ್ ಕಾಮತ್ ಇವರಿಗೆ ರೂ.3,000/- ಹಾಗೂ ತೃತೀಯ ಬಹುಮಾನ ಕ್ಯಾರನ್ ಲೋಬೊ ಇವರಿಗೆ 2,000/-ದಂತೆ ಸಾರ್ವಜನಿಕರ ಸಮ್ಮುಖದಲ್ಲಿ ವಿತರಿಸಲಾಯಿತು.


Spread the love

Leave a Reply

Please enter your comment!
Please enter your name here