ಸ್ವಂತ ಬಲದಲ್ಲಿ ಬಿಜೆಪಿ ಅಧಿಕಾರಕ್ಕೆ : ನಳಿನ್ ಕುಮಾರ್ ಕಟೀಲ್

Spread the love

ಸ್ವಂತ ಬಲದಲ್ಲಿ ಬಿಜೆಪಿ ಅಧಿಕಾರಕ್ಕೆ : ನಳಿನ್ ಕುಮಾರ್ ಕಟೀಲ್

ಮೈಸೂರು: ಮುಂದಿನ ಚುನಾವಣೆಯಲ್ಲಿ ಯಾರೊಂದಿಗೂ ಒಳ ಒಪ್ಪಂದ, ಹೊಂದಾಣಿಕೆ ಮಾಡಿಕೊಳ್ಳದೆ ೧೫೦ ಸ್ಥಾನಗಳನ್ನು ಗೆದ್ದು ಸ್ವಂತ ಬಲದಿಂದ ಅಧಿಕಾರ ಹಿಡಿಯಲಿದ್ದು, ಅವ್ವ-ಮಗ, ಅಪ್ಪ ಮಗನ ಪಕ್ಷವನ್ನು ಜನರು ಸಮುದ್ರಕ್ಕೆ ಎಸೆಯಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ವಿದ್ಯಾರಣ್ಯಪುರಂ ಭೂತಾಳೆ ಆಟದ ಮೈದಾನದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬೂತ್ ಅಧ್ಯಕ್ಷರ ಮತ್ತು ಬಿಎಲ್‌ಎಗಳ ಸಭೆ, ಕಾರ್ಯಕರ್ತರ ಸಂಕಲ್ಪ ಸಭೆಯನ್ನು ಶಂಖ ಊದುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ನಡೆದ 21 ಕ್ಷೇತ್ರಗಳ ಉಪ ಚುನಾವಣೆಯಲ್ಲಿ 17ಸ್ಥಾನಗಳಲ್ಲಿ ಗೆದ್ದಿದ್ದೇವೆ. ಆಡಳಿತಪಕ್ಷದ ಸಚಿವರು, ಶಾಸಕರು ರಾಜೀನಾಮೆ ಕೊಟ್ಟು ವಿಪಕ್ಷಕ್ಕೆ ಸೇರಿಕೊಂಡು ಅಧಿಕಾರಕ್ಕೆ ಬರುವಂತೆ ಮಾಡಿದ್ದು ಇತಿಹಾಸವಾಗಿದೆ. ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಬಂದಾಗಿನಿಂದ ಸಿದ್ದರಾಮಯ್ಯ ವಿಲನ್‌ರಂತೆ ಕೆಲಸ ಮಾಡಿದ್ದರು. ಶಾಸಕರ ಸಮಸ್ಯೆಗಳಿಗೆ ಸ್ಪಂದಿಸದೆ ಕುಮಾರಸ್ವಾಮಿ ತಾಜ್ ಹೋಟೆಲ್‌ನಲ್ಲಿ ಕುಳಿತು ಆಡಳಿತ ಮಾಡಿದ ಫಲವಾಗಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಲು ಕಾರಣವಾಯಿತು ಎಂದು ತಿಳಿಸಿದರು.

ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್‌ಗೆ ಯಾವುದೇ ಪ್ರಯೋಜನವಾಗಲ್ಲ. ಪಂಚರತ್ನ ಯಾತ್ರೆಯಿಂದಲೂ ಜನರು ಮರುಳಾಗಲ್ಲ. ಬಿಜೆಪಿ ಪರವಾಗಿ ಅಲೆ ಎದ್ದಿದೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಕಾಂಗ್ರೆಸ್, ಜಾ.ದಳ ಸಮುದ್ರಕ್ಕೆ ಬೀಳಲಿದೆ. ಅವ್ವ-ಮಗ, ಅಪ್ಪ-ಮಗನ ಪಕ್ಷಕ್ಕೂ ಉಳಿಗಾಲವಿಲ್ಲ ಎಂದು ಭವಿ? ನುಡಿದರು.

ಸಿದ್ದರಾಮಯ್ಯರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದರು. ಬಾದಾಮಿಯಲ್ಲಿ ವಾಪಸ್ ಹೋಗಿ ಎನ್ನುತ್ತಿದ್ದಾರೆ. ಕೋಲಾರಕ್ಕೆ ಬಿಟ್ಟುಕೊಡುತ್ತಿಲ್ಲ. ಹಾಗಾಗಿ, ಯಾವ ಕ್ಷೇತ್ರವನ್ನಾದರೂ ಹುಡುಕಿಕೊಳ್ಳುವುದಕ್ಕಾಗಿ ಓಡೋಡಿ ಹೋಗುತ್ತಿದ್ದಾರೆ. ಮುಂದೆ ಸಿದ್ದರಾಮಯ್ಯ ಅವರ ನಾಟಕ ನಡೆಯಲ್ಲ. ಹಿಂದುಳಿದ ವರ್ಗಗಳ ಹೆಸರನ್ನೇಳುವ ಅವರು ಯಾವುದೇ ಕಾರ್ಯಕ್ರಮಗಳನ್ನು ಮಾಡಲಿಲ್ಲ. ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್ ಸೋಲಿಸಿದ್ದರಿಂದಾಗಿ ಈ ಬಾರಿ ತಮ್ಮನ್ನು ಎಲ್ಲಿ ಸೋಲಿಸಿ ಬಿಡುತ್ತಾರೆಂಬ ಭಯ ಆವರಿಸಿದೆ. ವಿಜಯ ಸಂಕಲ್ಪ ಯಾತ್ರೆಯಿಂದ ಸಿದ್ದರಾಮಯ್ಯರಿಗೆ ಭಯ ಕಾಡುತ್ತಿದೆಯೇ ಹೊರತು ನಮಗಲ್ಲ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೆ ಭ್ರಷ್ಟಚಾರದಲ್ಲಿ ತೊಡಗಿತ್ತು. ಶೇ.೪೦ರ? ಕಮಿ?ನ್ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರೇ ನಿಮ್ಮ ಅವಧಿಯಲ್ಲಿ ನಡೆದಿರುವ ಹಗರಣಗಳು ಒಂದೊಂದಾಗಿ ಹೊರ ಬರುತ್ತಿವೆ. ಅರ್ಕಾವತಿ ಬಡಾವಣೆಯ ಪ್ರಕರಣ ನಿಮಗೆ ಉರುಳಾಗಲಿದೆ ಎಂದರು.

ಹಿಂದೂಗಳ ಮಾರಣಹೋಮ ನಡೆಸಿದ ಟಿಪ್ಪು ಹೆಸರನ್ನು ಬದಲಿಸಿ ಒಡೆಯರ್ ಹೆಸರನ್ನು ನಾಮಕರಣ ಮಾಡಲಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ 24 ಮಂದಿ ಹಿಂದೂ ಕಾರ್ಯಕರ್ತರ ಹತ್ಯೆ ನಡೆದರೂ ಕಣ್ಣೀರು ಹಾಕಲಿಲ್ಲ. ಒಂದು ಪೈಸೆ ಪರಿಹಾರ ಕೊಡಲಿಲ್ಲ. ಪಿಎಫ್‌ಐ ನಿಷೇಧದ ಸವಾಲು ಹಾಕುವ ಸಿದ್ದರಾಮಯ್ಯ ಅವರೇ ನಿಮ್ಮ ಅವಧಿಯಲ್ಲಿ ಅವರನ್ನು ಬೆಳೆಸಿದ ಫಲವಾಗಿ ಇಂದು ಬೇರೂರಲು ಕಾರಣವಾಗಿದೆ. ನೀವೊಬ್ಬ ಖಳನಾಯಕ ಅಲ್ಲದೆ, ನರಹಂತಕರೂ ಆಗಿದ್ದೀರಾ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಅಧಿಕಾರಕ್ಕೋಸ್ಕರ ರಾಜಕಾರಣ ಮಾಡುವುದಿಲ್ಲ. ಸೈದ್ಧಾಂತಿಕ ವಿಚಾರಧಾರೆಯನ್ನು ಮುಂದಿಟ್ಟು ಕೆಲಸ ಮಾಡಲಿದೆ. ಪ್ರಧಾನಮಂತ್ರಿ ನರೇಂದ್ರಮೋದಿ, ಅಮಿತ್? ಅವರ ನಾಯಕತ್ವದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಕೃಷ್ಣರಾಜ ಕ್ಷೇತ್ರದಿಂದಲೇ ಗೆಲುವು ಆರಂಭವಾಗಲಿದೆ ಎಂದರು.ಮೇಯರ್ ಶಿವಕುಮಾರ್, ಮುಖಂಡ ರಾಜೇಂದ್ರ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಸೇರಿದಂತೆ ಹಲವರು ಇದ್ದರು.


Spread the love

Leave a Reply

Please enter your comment!
Please enter your name here