ಸ್ವಚ್ಛ ಭಾರತ ಅಭಿಯಾನ 2.0 ಉಳ್ಳಾಲದಲ್ಲಿ ಚಾಲನೆ

Spread the love

ಸ್ವಚ್ಛ ಭಾರತ ಅಭಿಯಾನ 2.0 ಉಳ್ಳಾಲದಲ್ಲಿ ಚಾಲನೆ

ಮಂಗಳೂರು:  ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಅ.2ರಂದು ಭಾನುವಾರ ಉಳ್ಳಾಲ ಸಮುದ್ರ ತೀರವನ್ನು ಕ್ಲೀನ್ ಮಾಡುವ ಕರ್ನಾಟಕ ಕರಾವಳಿಯಲ್ಲಿ ಸ್ವಚ್ಛ ಭಾರತ ವಿಶೇಷ ಅಭಿಯಾನ 2.0ಗೆ ಚಾಲನೆ ನೀಡಲಾಯಿತು.

ಉಳ್ಳಾಲ ನಗರಸಭೆ, ರಾಷ್ಟ್ರೀಯ ಸೇವಾ ಯೋಜನೆ, ಯೇನೆಪೋಯ ಹಾಗೂ ನಿಟ್ಟೆ ವಿಶವ್ವಿದ್ನಾಯನಿಲಯ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಮೃತ ಕಾಲಕ್ಕಾಗಿ ಸ್ವಚ್ಛ ಪರಿಸರ. ಸ್ವಚ್ಛ ಮನೆಯಂಗಳ, ಸ್ವಚ್ಛ ಮನಸ್ಸು ಎಂಬ ಘೋಷ ವಾಕ್ಯದೊಂದಿಗೆ ಭಾರತ ಸರಕಾರ ವಿಶೇಷ ಸಂಪೂರ್ಣ ಸ್ವಚ್ಛತಾ ಅಭಿಯಾನ 2.0ಕ್ಕೆ ಚಾಲನೆ ನೀಡಿದೆ. ಇಂದಿನ ಸ್ವಚ್ಛತಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಭಾಗವಹಿಸಿದ್ದರು. ಈ ಅಭಿಯಾನ ಒಂದು ತಿಂಗಳ ಕಾಲ ನಡೆಯಲಿದ್ದು. ಉಳ್ಳಾಲದಿಂದ ಆರಂಭವಾಗಿದೆ.

ಇಂಡಿಯನ್ ಕೋಸ್ಟ್ ಗಾರ್ಡ್ ಡಿಐಜಿ ವೆಂಕಟೇಶ್, ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಪೊಲೀಸ್ ಆಯುಕ್ತರಾದ ಗೀತಾ ಕುಲಕರ್ಣಿ ಯೇನೆಪೋಯ ಎನ್ ಎಸ್ ಎಸ್ ಪ್ರೋಗ್ರಾಂ ಕೋ ಆರ್ಡಿನೇಟರ್ ಡಾ.ಅಶ್ವಿನಿ ಶೆಟ್ಟಿ ,ಡೀನ್ ಡಾ. ಸುನೀತಾ ಸಲ್ಡಾನ,ಉಳ್ಳಾಲ ನಗರ ಸಭೆ ಪೌರಾಯುಕ್ತ ವಿದ್ಯಾ ಎಂ ಕಾಳೆ , ಆರೋಗ್ಯ ಅಧಿಕಾರಿ ರವಿ ಕೃಷ್ಣಾ, ನೆಹರೂ ಯುವ ಕೇಂದ್ರ ದಕ್ಷಿಣ ಕನ್ನಡ ಜಿಲ್ಲಾ ಯುವ ಅಧಿಕಾರಿ ರಘುವೀರ್ ಸೂಟರ್ ಪೇಟೆ, ಆಡಳಿತಾಧಿಕಾರಿ ಜಗದೀಶ್ ಕೆ., ನಿಟ್ಟೆ ವಿವಿ ಎನ್ ಎಸ್ ಎಸ್ ಪ್ರೋಗ್ರಾಂ ಕೋ ಆರ್ಡಿನೇಟರ್ ಡಾ.ಶಶಿಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಎಬಿ ಶೆಟ್ಟಿ, ಹಾಗೂ ಯೆನೆಪೋಯ ಎಲೈಡ್ ಸೈನ್ಸ್ ವಿದ್ಯಾರ್ಥಿಗಳು ಉಳ್ಳಾಲ ಬೀಚ್ ಸ್ವಚ್ಛತೆ ಆಂದೋಲನ ನಡೆಸಿದರು. ಉಳ್ಳಾಲದ ಆರೋಗ್ಯ ನಿರೀಕ್ಷಕ ರವಿ ಹಾಗೂ ಮುರಳಿಧರ ಅವರು ಕಾರ್ಯಕ್ರಮ ನಿರೂಪಿಸಿದರು.


Spread the love