ಸ್ವಾಗತ್ ಫ್ರೆಂಡ್ಸ್ ಮಾರ್ಕೋಡು ಕೋಟೇಶ್ವರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Spread the love

ಸ್ವಾಗತ್ ಫ್ರೆಂಡ್ಸ್ ಮಾರ್ಕೋಡು ಕೋಟೇಶ್ವರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಕುಂದಾಪುರ: ಕೋಟೇಶ್ವರ ಸಮೀಪದ ಮಾರ್ಕೋಡಿನಲ್ಲಿ ಸ್ವಾಗತ್ ಫ್ರೆಂಡ್ಸ್ (ರಿ) ಮಾರ್ಕೋಡು ವತಿಯಿಂದ ಸೋಮವಾರ 75ನೇ ಸ್ವಾತಂತ್ರ್ಯದ ಅಮೃತಮಹೋತ್ಸವವು ಸಂಭ್ರಮದಿಂದ ಜರುಗಿತು.

ನಿವೃತ್ತ ಮುಖ್ಯೋಪಾಧ್ಯಾಯ ಮೋಹನ್ ಶೆಟ್ಟಿ ಧ್ವಜಾರೋಹಣಗೈದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಗತ್ ಫ್ರೆಂಡ್ಸ್‍ನ ಅಧ್ಯಕ್ಷ ರಾಧಾಕೃಷ್ಣ ಆಚಾರ್ಯ ವಹಿಸಿಸಿದ್ದರು.

ಮುಖ್ಯ ಅತಿಥಿಗಳಾಗಿ ಗೌರವಾಧ್ಯಕ್ಷ ರಾಮು ಗೊಲ್ಲ, ಯಕ್ಷಿ ಹಾಗೂ ಕಲ್ಲುಕುಟ್ಟಿಗ ದೈವಸ್ಥಾನದ ಮೊಕ್ತೇಸರರಾದ ಗಾಯತ್ರಿ ಮತಿವಂತ ಕಾಮತ್, ನರಸಿಂಹ ಸೇರಿಗಾರ್ ಕಾಗೇರಿ, ಸಂಘದ ಉಪಾಧ್ಯಕ್ಷ, ಕಾರ್ಯದರ್ಶಿ, ಸರ್ವಸದಸ್ಯರು ಉಪಸ್ಥಿತರಿದ್ದರು.

ಸೋಮಶೇಖರ್ ದೇವಾಡಿಗ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.


Spread the love