Home Mangalorean News Kannada News ಹಂಗಾರಕಟ್ಟೆಯ ಚಕ್ರವರ್ತಿ ಬಾರ್ ನಲ್ಲಿ ಕಳ್ಳತನ; 1.50ಲಕ್ಷದ ಮದ್ಯ ಕಳವು

ಹಂಗಾರಕಟ್ಟೆಯ ಚಕ್ರವರ್ತಿ ಬಾರ್ ನಲ್ಲಿ ಕಳ್ಳತನ; 1.50ಲಕ್ಷದ ಮದ್ಯ ಕಳವು

Spread the love

ಹಂಗಾರಕಟ್ಟೆಯ ಚಕ್ರವರ್ತಿ ಬಾರ್ ನಲ್ಲಿ ಕಳ್ಳತನ; 1.50ಲಕ್ಷದ ಮದ್ಯ ಕಳವು

ಕೋಟ: ಮಾಬುಕಳ ಸಮೀಪ ಹಂಗಾರಕಟ್ಟೆಯ ಚಕ್ರವರ್ತಿ ಬಾರ್ ಗೆ ಕಳ್ಳರು ನುಗ್ಗಿ ಸುಮಾರು 1.50 ಲಕ್ಷ ಮೌಲ್ಯದ ಮದ್ಯವನ್ನು ಅಪಹರಿಸಿದ ಘಟನೆ ಎ.22ರಂದು ಸಂಭವಿಸಿದೆ.

ಬಾರ್ ನ ಹಿಂಬದಿಯ ಕಿಟಕಿ ಹಾಗೂ ಬಾರ್ ನ ಹಂಚಿನ ಮಾಡಿನ ಹಂಚು ತೆಗೆದು ಒಳನುಗ್ಗಿ 266.735 ಲೀಟರ್ ನಷ್ಟು ಮದ್ಯ ತುಂಬಿರುವ ಸುಮಾರು 31 ಬಾಕ್ಸ್ ಹಾಗೂ 44.250 ಲೀಟರ್ ಬಿಯರ್ ಇರುವ 3 ಬಾಕ್ಸ್ ಕಳುವಾಗಿದ್ದು ಅದರ ಮೌಲ್ಯ 1,50,000/  ರೂಪಾಯಿ ಆಗಿರುತ್ತದೆ.

ಏಪ್ರಿಲ್ 22 ರಂದು ರಾತ್ರಿ 8:00 ಗಂಟೆಯಿಂದ ಏಪ್ರಿಲ್ 23 ಮದ್ಯಾಹ್ನ 1:00 ಗಂಟೆ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಬಾರ್ ನ ಹಂಚನ್ನು ತೆಗೆದು ಬಾರ್ ನಲ್ಲಿದ್ದ ಮದ್ಯವನ್ನು ಕಳವು ಮಾಡಿಕೊಂಡು ಹೋಗಿರಬಹುದು ಎಂದು ಅಂದಾಜಿಸಲಾಗಿದೆ.

ಗುರುವಾರ ಅಪರಾಹ್ನ ಬಾರ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಭೋಜ ದೇವಾಡಿಗರವರ ಕರೆ ಮಾಡಿ ಬಾರ್ ನ ಹಿಂಬದಿಯ ಕಿಟಕಿ ಮುರಿದಿದ್ದು ಮೇಲಿನ ಹಂಚು ತೆಗೆದ ಸ್ಥಿತಿಯಲ್ಲಿ ಇರುವುದಾಗಿ ತಿಳಿಸಿದ ಮೇರೆಗೆ ಬಾರ್ ನ ಮಾಲೀಕರು ಸ್ಥಳಕ್ಕಾಗಮಿಸಿ ಕೋಟ ಪೊಲೀಸರು ಹಾಗೂ ಅಬಕಾರಿ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು ಅವರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

Exit mobile version