ಹಕ್ಲಾಡಿ ಶ್ರೀ ಸಿದ್ದಲಿಂಗೇಶ್ವರ ಭಜನಾ ಮಂಡಳಿ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ

Spread the love

ಹಕ್ಲಾಡಿ ಶ್ರೀ ಸಿದ್ದಲಿಂಗೇಶ್ವರ ಭಜನಾ ಮಂಡಳಿ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕುಂದಾಪುರ: ಹರ್‍ಘರ್ ತಿರಂಗ ಮೂಲಕ ಅಮೃತಮಹೋತ್ಸವ ಸ್ವಾತಂತ್ರ್ಯೋತ್ಸವದಲ್ಲಿ ಪ್ರತಿಯೊಬ್ಬರಿಗೂ ಧ್ವಜಾರೋಹಣ ಮಾಡುವ ಅವಕಾಶ ಸಿಕ್ಕಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಧ್ವಜಾರೋಹಣ, ಅವರೋಹಣ ಸಮಯದಲ್ಲಿ ಧ್ವಜ ಸಂಹಿತೆ ಪಾಲಿಸುವ ಮೂಲಕ ಸಿಕ್ಕಿರುವ ಅವಕಾಶ ಸದ್ಬಳಿಕೆ ಮಾಡಿಕೊಳ್ಳಬೇಕು ಎಂದು ಹಕ್ಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೇತನ್ ಮೊಗವೀರ ಹೇಳಿದರು.


ಹಕ್ಲಾಡಿ ಗ್ರಾಮ ಗುಡ್ಡೆ ಶ್ರೀ ಸಿದ್ದಲಿಂಗೇಶ್ವರ ಭಜನಾ ಮಂಡಳಿ ಆಶ್ರಯದಲ್ಲಿ ಶ್ರೀ ಸಿದ್ದಲಿಂಗೇಶ್ವರ ಭಜನಾ ಮಂದಿರ ವಠಾರದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಹಕ್ಲಾಡಿ ಹಿರಿಯ ಪ್ರಾಥಮಿಕ ಶಾಲೆ ನಿವೃತ್ತ ಮುಖ್ಯೋಪಾಧ್ಯಾಯ ವಸಂತ ಹೆಗ್ಡೆ ಹಾಗೂ ಪತ್ರಕರ್ತ ಶ್ರೀಪತಿ ಹೆಗಡೆ ಅಮೃತಮಹೋತ್ಸ ಸ್ವಾತಂತ್ರತ್ಯೋತ್ಸವ ಸಂದೇಶ ನೀಡಿದರು.

ಹಕ್ಲಾಡಿ ಗ್ರಾಮ ಪಂಚಾಯಿತಿ ಸದಸ್ಯ ಚೇತನ್ ಹೆಗ್ಡೆ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶರತ್ ಹಕ್ಲಾಡಿ, ಉದ್ಯಮಿಗಳಾ ರಾಜೀವ ಶೆಟ್ಟಿ, ಚಿತ್ತರಂಜನ್ ದೇವಾಡಿಗ, ಸಮಾಜಿಕ ಕಾರ್ಯಕರ್ತ ಸುರೇಂದ್ರ ಪೂಜಾರಿ ತೊಪ್ಲು, ಭಜನಾ ಸಮಿತಿ ಅಧ್ಯಕ್ಷ ಚಂದ್ರ ಹಕ್ಲಾಡಿ, ಭಜನಾ ಸಮಿತಿ ಪದಾಧಿಕಾರಿಗಳಾದ ಗಣಪತಿ ಹಕ್ಲಾಡಿ, ಉಮೇಶ್ ಹಕ್ಲಾಡಿ, ಸುರೇಶ್ ಹಕ್ಲಾಡಿ, ರಾಜು ಹಕ್ಲಾಡಿ, ಸತೀಶ್ ಹಕ್ಲಾಡಿ, ವಸಂತ ಹಕ್ಲಾಡಿ, ಗಣೇಶ್ ಹಕ್ಲಾಡಿ ಮುಂತಾದವರು ಇದ್ದರು.

ಅಶೋಕ್ ಹಕ್ಲಾಡಿ ಸ್ವಾಗತಿಸಿ, ನಿರೂಪಸಿದರು. ಅಮೃತಮಹೋತ್ಸವ ಸ್ವಾತಂತ್ರ್ಯೋತ್ಸವ ನಿಟ್ಟಿನಲ್ಲಿ ಎಲ್ಲರಿಗೂ ಸಹಿ ಹಂಚಲಾಯಿತು.


Spread the love