ಹತ್ರಾಸ್ ನಲ್ಲಿ ಬಂಧಿತರ ಬಿಡುಗಡೆಗೆ ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪ್ರತಿಭಟನೆ

Spread the love

ಹತ್ರಾಸ್ ನಲ್ಲಿ ಬಂಧಿತರ ಬಿಡುಗಡೆಗೆ ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪ್ರತಿಭಟನೆ

ಮಂಗಳೂರು: ವ್ಯವಸ್ಥಿತ ಪಿತೂರಿಯ ಮೂಲಕ ವರ್ಷದ ಹಿಂದೆ ನಾಲ್ವರು ವಿದ್ಯಾರ್ಥಿ ನಾಯಕರನ್ನು ಹತ್ರಾಸ್‌ನಲ್ಲಿ ಅಕ್ರಮವಾಗಿ ಬಂಧಿಸಿದ ಉತ್ತರ ಪ್ರದೇಶ ಸರಕಾರದ ಕೃತ್ಯವನ್ನು ಖಂಡಿಸಿ ಮತ್ತು ಎಲ್ಲರನ್ನೂ ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ನಗರದಲ್ಲಿ ರ್‍ಯಾಲಿ ನಡೆಸಿ ಪ್ರತಿಭಟಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಶ್ವಾನ್ ಸಾಧಿಕ್ ರಾಷ್ಟ್ರೀಯ ‌ಮಟ್ಟದಲ್ಲಿ‌ ಇಂದು ಕ್ಯಾಂಪಸ್ ಫ್ರಂಟ್ ನ ನಾಯಕರನ್ನು ಗುರಿಪಡಿಸಲಾಗುತ್ತಿದೆ. ಇದಕ್ಕೆ ಕಾರಣ ಎನ್‌ಆರ್‌ಸಿ, ಸಿಎಎ ಸಂಧರ್ಭದಲ್ಲಿ ಕ್ಯಾಂಪಸ್ ಫ್ರಂಟ್ ದೇಶದಾದ್ಯಂತ ವಿದ್ಯಾರ್ಥಿಗಳನ್ನು ಸೇರಿಸಿ ನಡೆಸಿದ ಹೋರಾಟವಾಗಿದೆ. ಖಂಡಿತವಾಗಿಯೂ ನಾವು ರೌಫ್, ಅತೀಕ್, ಮಸೂದ್ ರನ್ನು ಹೊರತರಲಿದ್ದೇವೆ‌ ಮತ್ತು ದೇಶದ ಬೀದಿ ಬೀದಿಗಳಲ್ಲಿ ಅವರ ತ್ಯಾಗ, ಹೋರಾಟವನ್ನು ಸಾರಲಿದ್ದೇವೆ. ಅಂದು ನಮ್ಮನ್ನು ತಡೆಯಲು ಯಾವ ಶಕ್ತಿಗೂ ಸಾಧ್ಯವಾಗದು. ಉತ್ತರ ಪ್ರದೇಶವು ಸಂಪೂರ್ಣವಾಗಿ ಸರ್ವಾಧಿಕಾರಿಯ ಆಡಳಿತದಲ್ಲಿದ್ದು, ಇವರ ಹಿಂದೂ ರಾಷ್ಟ್ರದ ‌ಅಜೆಂಡಾವನ್ನು ಕ್ಯಾಂಪಸ್ ಫ್ರಂಟ್ ತಡೆಯಲಿದೆ.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಧ್ಯಕ್ಷ ಮಾತನಾಡಿ ವಿಧ್ಯಾರ್ಥಿ ನಾಯಕರ ಬಂಧನದ ಮೂಲಕ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಹೋರಾಟವನ್ನು ಹತ್ತಿಕ್ಕಬಹುದು ಎಂದು ಸರಕಾರಗಳು ಬಯಸುತ್ತಿದೆ ಎಂದಾದರೆ ಅದು ನಿಮ್ಮ ಮೂರ್ಖತನದ ಪರಮಾವಧಿಯಾಗಿದೆ.

ನಿಮ್ಮ ಕೇಸು, ಜೈಲು ಹಾಗೂ ಲಾಠಿಗಳನ್ನು ನಿರೀಕ್ಷಿಸೆಯೆ ನಾವು ಈ ಚಳುವಳಿಯಲ್ಲಿ ಸೇರಿಕೊಂಡಿದ್ದೇವೆ. ಆದ್ದರಿಂದ ಜೈಲುಗಳಲ್ಲಿ ಬಂಧಿಸಿದರೆ ಹೇಡಿ ಸಾವರ್ಕರ್ ಹಾಗೆ ಕ್ಷಮಾಪಣೆ ನೀಡಿಕೊಂಡು ಎಂದೂ ನಿಮಗೆ ಶರಣಾಗುವವರಲ್ಲ, ಬದಲಾಗಿ ನೀವು ನಮ್ಮನ್ನು ಎಷ್ಟು ತಡೆಯುತ್ತೀರೋ ಅಷ್ಟೇ ವೇಗವಾಗಿ ನಾವು ಮುಂದುವರಿಲಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸಾಧಿಕ್ ಜಾರತ್ತಾರ್ , ದ.ಕ ಜಿಲ್ಲಾ ಮುಖಂಡರ ಹಸನ್ ಸಿರಾಜ್ , ಜಿಲ್ಲಾ ನಾಯಕಿ ಆಫ್ರಾ ಮಂಗಳೂರು ಮಾತನಾಡಿದರು.

ಮಂಗಳೂರು ಗ್ರಾಮಾಂತರ ಅಧ್ಯಕ್ಷ ಅಶ್ರಫ್ ಮತ್ತು ವಿಟ್ಲ ಅಧ್ಯಕ್ಷ ಫಯಾಝ್ ವಿಟ್ಲ ಉಪಸ್ತಿತರಿದ್ದರು.


Spread the love

Leave a Reply