
ಹಳೆ ಕೊಲೆ ತನಿಖೆಗೆ ಎಸ್‌ಐಟಿಗೆ ಒತ್ತಾಯ : ರಮಾನಾಥ ರೈ
ಕಾಂಗ್ರೆಸ್ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಎಂದು ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಪದೇ ಪದೇ ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಎಂದು ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಪದೇ ಪದೇ ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸರಕಾರ ಬಂದು 2 ತಿಂಗಳೂ ಪೂರ್ಣ ಆಗಿಲ್ಲ. ಅದಾಗಲೇ ಅವರು ಹತ್ಯೆಗಳ ಬಗ್ಗೆ ಮಾತನಾಡುತ್ತಾ ರಾಜಕಾರಣ ಶುರು ಮಾಡಿದ್ದಾರೆ. ಅವರು ಪ್ರತೀ ಬಾರಿ ಹತ್ಯೆಗಳೆಲ್ಲವೂ ಕಾಂಗ್ರೆಸ್ ಸರಕಾರ ಮಾತ್ರ ಇದ್ದಾಗ ನಡೆದಿವೆ ಎನ್ನುವಂತೆ ಭ್ರಮೆ ಮೂಡಿಸುವ ಯತ್ನ ಮಾಡುತ್ತಿದ್ದಾರೆ. ಇದನ್ನು ಮೊದಲು ಅವರು ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಹತ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಯಾರೂ ಭಾಗಿ ಆಗಿಲ್ಲ. ಮತೀಯ ಸಂಘಟನೆ, ಬಿಜೆಪಿಯ ಸಂಘಟನೆಯಲ್ಲಿ ಇರುವ ಹಲವು ಕಾರ್ಯಕರ್ತರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ಕತ್ತಿ, ತಲ್ವಾರ್ ಬಗ್ಗೆ ಪ್ರಚೋದನಕಾರಿ ಭಾಷಣ ಮಾಡುವವರು ಯಾರು ಎಂದರು
ಎಲ್ಲರೂ ಹಿಂದು ಸಂಘಟನೆ ನಾಯಕರೇ. ಕಾಂಗ್ರೆಸ್ ನಾಯಕರು ಯಾರೂ ಇಂತಹ ಭಾಷಣ ಮಾಡುವುದಿಲ್ಲ. ಸಿದ್ಧರಾಮಯ್ಯ ಎಂದಿಗೂ ಹೊಡಿ, ಬಡಿ, ಕಡಿ ಎಂದು ಯಾವತ್ತೂ ಹೇಳಿಲ್ಲ, ಹೇಳಲ್ಲ. ಆದರೆ ನಳಿನ್ ಕುಮಾರ್ ಕಟೀಲು ಸೇರಿದಂತೆ ಬಿಜೆಪಿಯ ಹಲವು ನಾಯಕರು ಇಂತಹ ಉಗ್ರ ಭಾಷಣ, ಕೋಮುಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದರು. ಬಂಟ್ವಾಳದಲ್ಲಿ ದಾರಿ ಹೋಕ ಹರೀಶ್ ಪೂಜಾರಿಯನ್ನು ಕೊಲೆ ಮಾಡಿಸಿದವರೇ ಶ್ರದ್ಧಾಂಜಲಿ ಸಭೆಯಲ್ಲಿ ಭಾಷಣ ಮಾಡಿದ್ದಾರೆ, ಇನ್ನೊಬ್ಬರ ತಲೆಗೆ ಕಟ್ಟುವ ಯತ್ನ ಮಾಡಿದ್ದಾರೆ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು. ವಿನಾಯಕ ಬಾಳಿಗ, ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ, ದೀಪಕ್ , ಫಾಝಿಲ್, ಝಲೀಲ್, ಕೊಲೆ ಕೃತ್ಯಗಳ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲು ಎಸ್‌ಐಟಿ ರಚನೆ ಆಗಬೇಕು ಎಂದು ಒತ್ತಾಯಿಸಿದರು. ಯಾರೇ ತಪ್ಪು ಮಾಡಿದರೂ ಕಾನೂನಿನ ಮೂಲಕ ಪಾಠ ಕಲಿಸಲು ಸರ್ಕಾರ ಸಿದ್ಧವಾಗಿದೆ. ಜಿಲ್ಲೆಯಲ್ಲಿ ನಡೆದ ಎಲ್ಲಾ ಹತ್ಯೆಗಳ ಹಿಂದಿನ ಶಕ್ತಿಯಾರು ಅಂತ ಪತ್ತೆ ಮಾಡಿದರೆ ಸಾಮಾಜಿಕ ಸಾಮರಸ್ಯ ನೆಲೆಸಲಿದೆ. ನಾವು ಸಿಎಂ ಅವರನ್ನು ಭೇಟಿ ಮಾಡಿ ಎಸ್ಐಟಿ ಮಾಡಲು ಮನವಿ ಮಾಡಲಿದ್ದೇವೆ ಎಂದರು.