ಹಾವಂಜೆ ಜಂಕ್ಷನ್ ಗೆ ವೇಗ ನಿಯಂತ್ರಕ ಅಳವಡಿಕೆ

Spread the love

ಹಾವಂಜೆ ಜಂಕ್ಷನ್ ಗೆ ವೇಗ ನಿಯಂತ್ರಕ ಅಳವಡಿಕೆ

ಬ್ರಹ್ಮಾವರ: ಇಲ್ಲಿಗೆ ಸಮೀಪದ ಹಾವಂಜೆ ಜಂಕ್ಷನ್ ಬಳಿ ಹೆಚ್ಚು ಅಪಘಾತ ಸಂಭವಿಸುತ್ತಿದ್ದು, ಈ ಜಂಕ್ಷನ್ ಗೆ ವೇಗ ನಿಯಂತ್ರಕಗಳನ್ನು ಅಳವಡಿಸ ಬೇಕೆಂದು ಯುವ ಮುಖಂಡ ಭರತ್ ಶೇರಿಗಾರ್ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು.

ಸಮಸ್ಯೆಯ ಗಂಭೀರತೆಯನ್ನು ಅರಿತ ಪೋಲಿಸ್ ಅಧಿಕಾರಿ ಅನಂತಪದ್ಮನಾಭ ಅವರು ಠಾಣಾಧಿಕಾರಿ ರಾಘವೇಂದ್ರ ಅವರ ಮೂಲಕ ತಾತ್ಕಾಲಿಕವಾಗಿ ಎರಡು ಪೋಲಿಸ್ ಬ್ಯಾರಿಕೇಡ್ ನ್ನು ಹಾಕಿದ್ದಾರೆ.

ಪೋಲಿಸರು ಬ್ಯಾರಿಕೇಡ್ ಅಳವಡಿಸುವ ವೇಳೆ ಅವರಿಗೆ ಸ್ಥಳೀಯ ಹಾವಂಜೆ ಫ್ರೆಂಡ್ಸ್ ನ ಸದಸ್ಯರು ಸಹಾಯಕರಾಗಿ ಕಾರ್ಯ ನಿರ್ವಹಿಸಿ ಶೀಘ್ರವಾಗಿ ಸ್ಪಂದಿಸಿದ ಪೋಲಿಸರಿಗೆ ಅಭಿನಂದನೆ ತಿಳಿಸಿದರು.

ಈ ಸಂದರ್ಭದಲ್ಲಿ ಯುವ ಮುಖಂಡ ಭರತ್ ಶೇರಿಗಾರ್, ಹಾವಂಜೆ ಫ್ರೆಂಡ್ಸ್ ನ ಸದಸ್ಯರಾದ ಆತೀಶ್ ಆಚಾರ್ಯ, ಸುಹಾಸ್ ಶೆಟ್ಟಿ, ಸತೀಶ್ ಶೆಟ್ಟಿ, ಸುಶಾನ್ ಶೆಟ್ಟಿ ಉಪಸ್ಥಿತರಿದ್ದರು.


Spread the love