ಹಾಸನದಲ್ಲಿ ಕೋಮು ಸಾಮರಸ್ಯಕ್ಕೆ ಸಾಕ್ಷಿಯಾದ ಗಣೇಶೋತ್ಸವ ಆಚರಣೆ

Spread the love

ಹಾಸನದಲ್ಲಿ ಕೋಮು ಸಾಮರಸ್ಯಕ್ಕೆ ಸಾಕ್ಷಿಯಾದ ಗಣೇಶೋತ್ಸವ ಆಚರಣೆ

ಹಾಸನ: ರಾಜ್ಯದೆಲ್ಲಡೆ ಧರ್ಮದಂಗಲ್ ನಡೆಯುತ್ತಿದ್ದರೆ ಹಾಸನಲ್ಲಿ ಹಿಂದೂ ಮತ್ತು ಮುಸ್ಲಿಂ ಭಾಂಧವರು ಜೊತೆಯಾಗಿ ಸೇರಿಕೊಂಡು ಗಣೇಶೋತ್ಸವ ಆಚರಣೆ ಮಾಡುವ ಮೂಲಕ ಸಾಮರಸ್ಯದ ಬದುಕಿಗೆ ಉತ್ತಮ ಉದಾಹರಣೆಯಾಗಿದ್ದಾರೆ.

ಪೂಜೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಭಾಂದವರು ಜೊತೆಯಾಗಿ ಸೇರಿಕೊಂಡು ಗಣಪತಿಯ ಪೂಜೆಯನ್ನು ಮಾಡುವ ಮೂಲಕ ಸೌಹರ್ದತೆಯನ್ನು ಮೆರೆದರು.

ಪೂಜೆಯಲ್ಲಿ ಭಾಗವಹಿಸಿದ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರು ಮಾತನಾಡಿ ಇಂತಹ ಸೌಹಾರ್ದತೆ ಹಾಸನ ಜನರ ಒಳ್ಳೆಯ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ ಎಂದರು.

ಹಾಸನದಲ್ಲಿ ವಿಜಯ್ ಕುಮಾರ್ ಮತ್ತು ತಂಡ, ಪಿಂಚಣಿ ಮೊಹಲ್ಲಾ ಬಾರ್ಲೈನ್ ಮಸೀದಿಯ ಶಾಕಿಬ್ ಮತ್ತು ತಂಡ, ಪತ್ರಿಕಾ ವರದಿಗಾರರು ಮತ್ತು ಪೊಲೀಸ್ ಇಲಾಖೆ ನೇತೃತ್ವದಲ್ಲಿ ಪಾಂಚಜನ್ಯ ಸಮಿತಿಯಿಂದ ಗಣೇಶೋತ್ಸವವನ್ನು ಆಯೋಜಿಸಲಾಗಿತ್ತು. ಕೋಮು ಸೌಹಾರ್ದತೆಗೆ ಹಾಸನ ಮಾದರಿಯಾಗಿದೆ ಅವರ ಕಾರ್ಯಕ್ರಮ ಸುಸೂತ್ರವಾಗಿ ನೆರವೇರಲು ಸಹಾಯ ಮಾಡಿದ್ದೇನೆ ಮತ್ತು ಗಣೇಶೋತ್ಸವವನ್ನು ಸುಸೂತ್ರವಾಗಿ ಆಯೋಜಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇನೆ. ಹಾಸನದ ಜನತೆ ಶಾಂತಿ ಪ್ರಿಯರಾಗಿದ್ದು, ಶಾಂತಿ ಸೌಹಾರ್ದತೆಯಿಂದ ಬಾಳಬೇಕೆಂದರು. ಅವರಿಗೆ ನಾನು ಶುಭ ಹಾರೈಸುತ್ತೇನೆ ಎಂದರು

ಇದೇ ವೇಳೆ ಮಾತನಾಡಿದ ಹಿಂದೂ ಮುಖಂಡರು ಇದೊಂದು ಒಳ‍್ಳೆಯ ಸಂದೇಶ ಸಮಾಜಕ್ಕೆ ನೀಡಿದತಂತಾಗುತ್ತದೆ ಎಂದರು.

ಹಾಸನದಲ್ಲಿ ಮುಸ್ಲಿಂ ಹಿಂದೂ ಭಾಂದವರು ಒಂದಾಗಿ ಒಟ್ಟಾಗಿ ಬಾಳುತ್ತಿದ್ದ ನಮ್ಮ ನಡುವೆ ಯಾವುದೇ ಭೇಧಭಾವ ಇಲ್ಲ ಎಲ್ಲರೂ ಅಣ್ಣತಮ್ಮಂದಿರಂತೆ ಬದುಕುತ್ತಿದ್ದೇವೆ.

ರಾಜ್ಯದ ವಿವಿಧೆಡೆ ನಡೆಯುತ್ತಿರುವ ಧರ್ಮಗಳ ನಡುವಿನ ಕಚ್ಚಾಟದ ಮಧ್ಯೆಯೂ ಕೂಡ ಹಾಸನದ ಜನರ ಕೋಮು ಸಾಮರಸ್ಯ ಎಲ್ಲರಿಗೂ ಮಾದರಿಯಾಗಿದ್ದು ಈ ಮೂಲಕ ಸುಸ್ತಿರ ಸಮಾಜ ನಿರ್ಮಾಣಕ್ಕೆ ಸಹಾಯಕವಾಗಲಿ


Spread the love

Leave a Reply

Please enter your comment!
Please enter your name here