Home Mangalorean News Kannada News ಹಿಂದೂ ಕಾರ್ಯಕರ್ತರ ಕೊಲೆಗಳಿಗೆ ಸಿದ್ದರಾಮಯ್ಯ ನೇರ ಬೆಂಬಲ: ಗೋಪಾಲ್ ಜೀ

ಹಿಂದೂ ಕಾರ್ಯಕರ್ತರ ಕೊಲೆಗಳಿಗೆ ಸಿದ್ದರಾಮಯ್ಯ ನೇರ ಬೆಂಬಲ: ಗೋಪಾಲ್ ಜೀ

Spread the love

ಹಿಂದೂ ಕಾರ್ಯಕರ್ತರ ಕೊಲೆಗಳಿಗೆ ಸಿದ್ದರಾಮಯ್ಯ ನೇರ ಬೆಂಬಲ: ಗೋಪಾಲ್ ಜೀ

ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂ ಕಾರ್ಯಕರ್ತ ಕೊಲೆಗಡುಕರನ್ನು ಬಂಧಿಸುವುದರ ಬದಲು ಅವರನ್ನು ಬೆಂಬಲಿಸುವ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಹಿಂದೂ ಸಂಘಟನೆಗಳನ್ನು ದಮನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜೀ ಆರೋಪಿಸಿದ್ದಾರೆ.

ಅವರು ನಗರದ ಒಶಿಯನ್ ಪರ್ಲ್ ಹೋಟೆಲಿನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಮಂಗಳೂರು ಕೋಮು ದಳ್ಳೂರಿಯಿಂದ ಉರಿಯುತ್ತಿದ್ದು, ಹಲವಾರ ಹಿಂದೂ ನಾಯಕರ ಕೊಲೆಗಳು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಡೆದಿದೆ. ಎಲ್ಲಾ ಹಿಂದೂ ಕಾರ್ಯಕರ್ತರ ಕೊಲೆಯಲ್ಲಿ ಪಿಎಫ್ ಐ ಮತ್ತು ಎಸ್ ಡಿ ಪಿಐ ಸಂಘಟನೆಗಳ ಕಾರ್ಯಕರ್ತರ ಕೈವಾಡವಿದ್ದು ಸರಕಾರ ಅಪರಾಧಿಗಳು ಯಾರು ಎನ್ನುವುದು ತಿಳಿದಿದ್ದರೂ ಕೂಡ ಅವರನ್ನು ಬಂಧಿಸುವ ಬದಲು ಹಿಂದೂಗಳ ಮೇಲೆಯೇ ಕೇಸು ಹಾಕುತ್ತಿರುವುದು ಖಂಡನೀಯ. ರಾಜ್ಯ ಮುಖ್ಯಮಂತ್ರಿಗಳು ತಾನೂ ಹಿಂದೂಗಳ ವಿರೋಧಿ ಎನ್ನುವುದು ಪ್ರತಿಯೊಂದು ಘಟನೆಯ ವೇಳೆಯಲ್ಲಿ ಕೂಡ ಸಾಬಿತಾಗಿದೆ. ಅವರು ಅಲ್ಪಸಂಖ್ಯಾತರ ಒಲೈಕೆಗಾಗಿ ಹಿಂದೂಗಳನ್ನು ದಮನಿಸುವ ಕೆಲಸ ಮಾಡುತ್ತಿದ್ದಾರೆ. ಹಿಂದೂ ಕಾರ್ಯಕರ್ತರ ಮೇಲೆ 307 ಕೇಸು ದಾಖಲಿಸಿರುವ ಪೋಲಿಸ್ ಇಲಾಖೆಯ ಕ್ರಮ ಖಂಡನೀಯವಾಗಿದೆ. ಇಲಾಖೆ ಹಿಂದೂ ನಾಯಕರಾದ ಸತ್ಯಜಿತ್ ಸುರತ್ಕಲ್, ಶರಣ್ ಪಂಪ್ ವೆಲ್ ಇವರುಗಳ ಮನೆಗೆ ರಾತ್ರಿ ಧಾಳಿ ನಡೆಸಿರುವುದು ಸರಿಯಾದ ಕ್ರಮವಲ್ಲ. ಸರಕಾರ ರಾಜ್ಯದಲ್ಲಿ ಒಂದು ರೀತಿಯ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ.

ರಾಜ್ಯದ ಗೃಹ ಸಚಿವರ ಸಲಹೇಗಾರ ಕೆಂಪಯ್ಯ ಅವರು ಪೋಲಿಸ್ ಅಧಿಕಾರಿಗಳ ಸಭೆ ನಡೆಸಲು ಸರಕಾರ ಅವಕಾಶ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಪೋಲಿಸ್ ಅಧಿಕಾರಿಗಳಿಗೆ ಯಾವುದೇ ರೀತಿಯ ಆದೇಶ ನೀಡಲು ಅವಕಾಶವಿಲ್ಲ ಅವರು ಕೇವಲ ಸರಕಾರದ ಒಬ್ಬ ಮಂತ್ರಿ ಅವರು ಸಲಹೆ ನೀಡಲು ಮಾತ್ರ ಅವರಿಗೆ ಅವಕಾಶ ವಿರುವುದು. ಇಲಾಖೆ ಹಾಗೂ ಸರಕಾರ ನಿದ್ದೆ ಬಿಟ್ಟು ಎಸ್ ಡಿ ಪಿ ಐ ಮತ್ತು ಪಿಎಫ್ ಐ ಸಂಘಟನೆಗಳ ನಾಯಕರನ್ನು ಠಾಣೆಗೆ ಕರೆದು ಬಾಯಿ ಬಿಡಿಸಿದರೆ ನಿಜವಾದ ಶರತ್ ಕೊಲೆಗಡುಕರು ಬಂಧನವಾಗುವುದರಲ್ಲಿ ಎರಡು ಮಾತಿಲ್ಲ ಆದರೆ ಒಂದು ಸಮುದಾಯದ ಪರವಾಗಿರುವ ಸರಕಾರ ಅಂತಹ ಕೆಲಸ ಮಾಡುವುದಿಲ್ಲ ಇದೇ ರೀತಿಯ ಪ್ರಯತ್ನ ಮುಂದುವರೆದಲ್ಲಿ ಹಿಂದೂ ಸಮುದಾಯ ಸುಮ್ಮನೆ ಕೂರುವುದಿಲ್ಲ ಬದಲಾಗಿ ಉಗ್ರವಾದ ಪ್ರತಿಭಟನೆ ಮಾಡಲಿದೆ ಸರಕಾರ ಇನ್ನಾದರೂ ಪೋಲಿಸರಿಗೆ ತನಿಖೆ ನಡೆಸಲು ಮುಕ್ತವಾದ ಅವಕಾಶ ನೀಡುವುದರೊಂದಿಗೆ ಜನರ ಭಾವನೆಗಳಿಗೆ ಬೆಲೆ ನೀಡುವ ಕೆಲಸ ಮಾಡಲಿ ಎಂದರು.

ಕಾಶ್ಮೀರದಲ್ಲಿ ಇತ್ತೀಚೆಗೆ ಅಮರನಾಥ ಯಾತ್ರಿಕರ ಮೇಲೆ ನಡೆದ ಉಗ್ರರ ಧಾಳಿಯನ್ನು ಖಂಡಿಸಿದ ಸಂತೋಷ್ ಜೀ ಅವರು ಧಾಳಿ ನಡೆದ ಮರು ದಿನವೇ ಮತ್ತೆ ಯಾತ್ರೆ ಮುಂದುವರೆದಿದ್ದು ಹಿಂದೂಗಳು ಯಾವುದೇ ಬೆದರಿಕೆಗಳಿಗೆ ಜಗ್ಗದೆ ಇರುವುದು ಇದಕ್ಕೆ ಸಾಕ್ಷಿಯಾಗಿದೆ. ಉಗ್ರವಾದಿಗಳನ್ನು ದಮನಿಸಲು ಮತ್ತು ಶಾಂತಿಯುತವಾಗಿ ಅಮರನಾಥ ಯಾತ್ರೆ ಕೈಗೊಳ್ಳಲು ಅಮರನಾಥ ಯಾತ್ರೆಯನ್ನು ಸೈನಿಕರಿಗೆ ಹಸ್ತಾಂತರಿಸಲು ಕೇಂದ್ರ ಸರಕಾರ ಚಿಂತನೆ ವಹಿಸಬೇಕಾಗಿದೆ ಎಂದರು.

ನವೇಂಬರ್ 24-25 ರ ತನಕ ವಿಶ್ವ ಹಿಂದೂ ಪರಿಷತ್ ಇದರ ಧರ್ಮ ಸಂಸತ್ತು ಉಡುಪಿಯಲ್ಲಿ ನಡೆಯಲಿದ್ದು ದೇಶದ ಸುಮಾರು 2000 ಕ್ಕೂ ಅಧಿಕ ಸಾಧು ಸಂತರು ಈ ಧರ್ಮ ಸಂಸತ್ತಿನಲ್ಲಿ ಭಾಗವಹಿಸಲಿದ್ದಾರೆ. ಹಿಂದೂ ನಾಯಕರಾದ ಮೋಹನ್ ಭಾಗವತ್, ಪ್ರವೀಣ್ ಭಾಯ್ ತೊಗಾಡಿಯಾ, ರವಿಶಂಕರ್ ಗುರೂಜಿ ಹಾಗೂ ಇತರ ಅನೇಕ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದರು.

ಕೃಷ್ಣ ಮಠದಲ್ಲಿ ಪೇಜಾವರ ಸ್ವಾಮೀಜಿಗಳು ಆಯೋಜಿಸಿದ ಇಫ್ತಾರ್ ಕೂಟದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಪೇಜಾವರ ಸ್ವಾಮೀಗಳು ಆಯೋಜಿಸಿದ ಇಫ್ತಾರ್ ಕೂಟಕ್ಕೆ ನನ್ನ ಸಮ್ಮತಿ ಇಲ್ಲ ಆದರೆ ಈ ವಿಚಾರದ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಸುದ್ದಿಗೋಷ್ಟಿಯಲ್ಲಿ ಉಡುಪಿ ವಿಶ್ವ ಹಿಂದೂ ಪರಿಷತ್ ಇದರ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್, ಬಜರಂಗದಳದ ಸುನೀಲ್ ಕೆ ಆರ್, ದಿನೇಶ್ ಪುತ್ರನ್ ಉಪಸ್ಥಿತರಿದ್ದರು.

 


Spread the love

1 Comment

Comments are closed.

Exit mobile version