
Spread the love
ಹಿಂದೂ ದೇವರ ಬಗ್ಗೆ ಆಶ್ಲೀಲವಾಗಿ ಬರೆದು ಕಮೆಂಟ್ ಮಾಡಿದ ಪ್ರಕರಣದ ಆರೋಪಿಯ ಬಂಧನ
ಮಂಗಳೂರು: ಸಾಮಾಜಿಕ ಜಾಲತಾಣ ಇನ್ ಸ್ಟ್ರಾ ಗ್ರಾಂ ನಲ್ಲಿ ಹಿಂದೂ ದೇವರ ಬಗ್ಗೆ ಅಶ್ಲೀಲವಾಗಿ ಬರೆದು ಕಮೆಂಟ್ ಮಾಡಿದ ಆರೋಪದ ಮೇಲೆ ಸೆನ್ ಪೊಲೀಸವರು ಒರ್ವನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕುಲಶೇಖರ ನಿವಾಸಿ ಮೊಹಮ್ಮದ್ ಸಲ್ಮಾನ್ (22) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಗರ ಪೊಲೀಸ್ ಆಯುಕ್ತ ಕುಲದೀಪ್ ಆರ್ ಜೈನ್ ಮಾರ್ಗದರ್ಶನದಂತೆ ಸೆನ್ ಪೊಲೀಸ್ ಠಾಣೇಯ ಸತೀಶ್ ಎಂ ಪಿ ನೇತೃತ್ವದಲ್ಲಿ ಅಧಿಕಾರಿ ಮತ್ತು ಸಿಬಂದಿಗಳು ಪಾಲ್ಗೋಂಡಿದ್ದರು.
Spread the love