ಹಿಂದೂ ದೇವಾಲಯಗಳ ಅನುದಾನ ಅನ್ಯ ಧಾರ್ಮಿಕ ಕೇಂದ್ರಗಳ ಬಳಕೆಗೆ ತಡೆ ಆದೇಶ: ಯಶ್ ಪಾಲ್ ಸುವರ್ಣ ಸ್ವಾಗತ

Spread the love

ಹಿಂದೂ ದೇವಾಲಯಗಳ ಅನುದಾನ ಅನ್ಯ ಧಾರ್ಮಿಕ ಕೇಂದ್ರಗಳ ಬಳಕೆಗೆ ತಡೆ ಆದೇಶ: ಯಶ್ ಪಾಲ್ ಸುವರ್ಣ ಸ್ವಾಗತ

ಹಿಂದೂ ದೇವಾಲಗಳ ಅನುದಾನ ಅನ್ಯ ಧಾರ್ಮಿಕ ಕೇಂದ್ರಗಳಿಗೆ ಬಳಸದಂತೆ ಆದೇಶ ಹೊರಡಿಸಿದ ಮುಜರಾಯಿ ಖಾತೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ನಿರ್ಧಾರವನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಸ್ವಾಗತಿಸಿದ್ದಾರೆ.

ನಾಡಿನ ಸಮಸ್ತ ಹಿಂದೂಗಳ ಭಾವನೆಗಳನ್ನು ಗೌರವಿಸಿ ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿ ಇಲಾಖೆಯ ವತಿಯಿಂದ ಸುಮಾರು 764 ಅನ್ಯ ಧರ್ಮೀಯ ಕೇಂದ್ರಗಳಿಗೆ ನೀಡುವ ತಸ್ತೀಕ್ ಅನುದಾನವನ್ನು ರದ್ದು ಪಡಿಸಿ ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಮೀಸಲಿಡುವ ಮೂಲಕ ದಿಟ್ಟ ಹೆಜ್ಜೆ ಇಟ್ಟ ಕೋಟ ಶ್ರೀನಿವಾಸ ಪೂಜಾರಿ ಯವರಿಗೆ ಅಭಿನಂದನೆಗಳು.

ಈ ಮಹತ್ವದ ನಿರ್ಧಾರಕ್ಕೆ ಬೆನ್ನೆಲುಬಾಗಿ ನಿಂತ ಮುಖ್ಯಮಂತ್ರಿ  ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹಾಗೂ ಪಕ್ಷದ ಎಲ್ಲಾ ಶಾಸಕರಿಗೆ ವಂದನೆಗಳನ್ನು ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love