ಹಿಂದೂ ದೇವಾಲಯಗಳ ಧ್ವಂಸ: ಸಚಿವ ಸುನೀಲ್‌ ಕುಮಾರ್‌ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಿ – ಯೋಗಿಶ್‌ ಇನ್ನಾ

Spread the love

ಹಿಂದೂ ದೇವಾಲಯಗಳ ಧ್ವಂಸ: ಸಚಿವ ಸುನೀಲ್‌ ಕುಮಾರ್‌ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಿ – ಯೋಗಿಶ್‌ ಇನ್ನಾ

ಕಾರ್ಕಳ: ಸಚಿವ ,ಶಾಸಕ ಸ್ಥಾನ ಬೇಕೋ ಹಿಂದುತ್ವ ಬೇಕೋ ಎಂದರೇ ನನ್ನ ಮೊದಲ ಆಯ್ಕೆ ಹಿಂದುತ್ವನೇ ಎಂದಿದ್ದ ಇಂಧನ ಸಚೀವ ಸುನಿಲ್ ಕುಮಾರ್ ರೇ ನೈತಿಕತೆ ಇದ್ದರೆ ರಾಜಿನಾಮೆ ಕೊಟ್ಟು ಮನೆಗೆ ಹೋಗುವಂತೆ ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ನೆಪದಲ್ಲಿ ದೇವಾಲಯಗಳ ಧ್ವಂಸಕ್ಕೆ ರಾಜ್ಯ ಬಿಜೆಪಿ ಸರ್ಕಾರವೇ ಕಾರಣ. ಒಂದು ಸರ್ಕಾರಕ್ಕಿಂತ ಜಿಲ್ಲಾಡಳಿತ ದೊಡ್ಡದಾಯಿತೇ? ಎಂದು ಪ್ರಶ್ನಿಸಿರುವ ಅವರು ಸರಕಾರ ಮನಸ್ಸು ಮಾಡಿದರೆ ತಕ್ಷಣವೇ ದೇಗುಲಗಳ ನೆಲಸಮ ನಿಲ್ಲಿಸಬಹುದಿತ್ತು ಆದರೆ ಸರಕಾರದ ಭಾಗವಾದ ನೀವು ಅದನ್ನು ಮಾಡುತ್ತಿಲ್ಲ.

ಹಿಂದುತ್ವದ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಮಾಡುವ ನೀವು ದೇವಾಲಯಗಳನ್ನೇಕೆ ನೆಲಸಮ ಮಾಡಲಾಗುತ್ತಿದೆ ಉತ್ತರ ಕೊಡಬೇಕು. ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು,

ಸರಕಾರಕ್ಕೆ ನಿಜಕ್ಕೂ ದೇಗುಲ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಸುಪ್ರೀಂ ಕೊರ್ಟ್ʼಗೆ ಮೇಲ್ಮನವಿ ಸಲ್ಲಿಸಲಿ. ಎಂದು ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Spread the love