ಹಿಂದೂ ಮಹಿಳೆಯರ ರಕ್ಷಣೆಗಾಗಿ ಮನೆಯಲ್ಲಿ ತಲ್ವಾರ್ ಇಟ್ಟುಕೊಳ್ಳಿ: ಮುತಾಲಿಕ್

Spread the love

ಹಿಂದೂ ಮಹಿಳೆಯರ ರಕ್ಷಣೆಗಾಗಿ ಮನೆಯಲ್ಲಿ ತಲ್ವಾರ್ ಇಟ್ಟುಕೊಳ್ಳಿ: ಮುತಾಲಿಕ್
 

ಕಲಬುರಗಿ: ‘ಹಿಂದೂ ಮಹಿಳೆಯರ ರಕ್ಷಣೆಗಾಗಿ ನಿಮ್ಮ ಮನೆಗಳಲ್ಲಿ ಎಲ್ಲರಿಗೂ ಕಾಣಿಸುವ ಸ್ಥಳದಲ್ಲಿ ತಲ್ವಾರ್ ಇಟ್ಟುಕೊಳ್ಳಿ’ ಎಂದು ಶ್ರೀರಾಮ ಸೇನೆ ಸಂಘಟನೆಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ ಮುತಾಲಿಕ್ ಸಲಹೆ ನೀಡಿದರು.

ಜಿಲ್ಲೆಯ ಯಡ್ರಾಮಿ ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಗುರುವಾರ ಶ್ರೀರಾಮಸೇನೆ ಸಂಘಟನೆ ವತಿಯಿಂದ ನಡೆದ ಸಂತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಒಂದು ತಲ್ವಾರ್ ಇಟ್ಟುಕೊಂಡರೆ ಪೊಲೀಸರು ಎಫ್‌ಐಆರ್ ಹಾಕಲ್ಲ. ತಲ್ವಾರ್‌ ಅನ್ನು ಸಹೋದರಿಯರ ರಕ್ಷಣೆಗೆ ಇಡಬೇಕೆ ಹೊರತು ಬೇರೆ ಯಾರನ್ನೋ ಹೊಡೆಯಲು ಅಲ್ಲ’ ಎಂದರು.

‘ಆಯುಧ ಪೂಜೆ ದಿನದಂದು ಪೆನ್, ಪುಸ್ತಕ, ಟ್ರ್ಯಾಕ್ಟರ್‌ಗೆ ಬದಲು ತಲ್ವಾರ್‌ಗೆ ಪೂಜಿಸಬೇಕು. ಆಯುಧವೆಂದರೆ ಖಡ್ಗ, ಭರ್ಚಿ, ತ್ರಿಶೂಲ, ಕೊಡಲಿ. ಆಯುಧ ಪೂಜೆಯ ದಿನದಂದು ಠಾಣೆಗಳಲ್ಲಿ ಪೊಲೀಸರು ಬಂದೂಕಿಗೆ ಪೂಜಿಸುತ್ತಾರೆ ಹೊರತು ಎಫ್‌ಐಆರ್‌ ಪ್ರತಿಗಳಿಗಲ್ಲ’ ಎಂದರು.


Spread the love

Leave a Reply

Please enter your comment!
Please enter your name here