ಹಿಂದೂ ಮುಸ್ಲಿಂ ಸೇರಿ ಗೌರಿಗಣೇಶೋತ್ಸವ ಆಚರಣೆ

Spread the love

ಹಿಂದೂ ಮುಸ್ಲಿಂ ಸೇರಿ ಗೌರಿಗಣೇಶೋತ್ಸವ ಆಚರಣೆ

ಮೈಸೂರು: ಮೈಸೂರಿನ ಸುಜೀವ್ ಫೌಂಡೇಶನ್ ವತಿಯಿಂದ ಹಿಂದೂ ಮುಸ್ಲಿಂ ಬಾಂಧವರು ಒಂದಾಗಿ ಗೌರಿಗಣೇಶ ಹಬ್ಬವನ್ನು ವಿಜಯನಗರದ ಎರಡನೇ ಹಂತದ ಸುಜೀವ್ ಫೌಂಡೇಶನ್ ಕಚೇರಿಯಲ್ಲಿ ಆಚರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ. ಇದೇ ವೇಳೆ ಪೌರಕಾರ್ಮಿಕರಿಗೆ ಬಾಗಿನ ವಿತರಿಸಿ, ಮುಸ್ಲಿಂ ಸಮುದಾಯದವರಿಗೆ ಸೀರೆ ವಿತರಿಸಲಾಯಿತು.

ಸುಜೀವ್ ಫೌಂಡೇಶನ್ ಅಧ್ಯಕ್ಷ ರಾಜರಾಂ ಮಾತನಾಡಿ, ಭಾರತ ದೇಶದಲ್ಲಿ ವರ್ಷದಲ್ಲಿ ಹಲವಾರು ಹಬ್ಬಗಳನ್ನು ಆಚರಣೆ ಮಾಡುವುದು ಹಿಂದೂ ಮತ್ತು ಮುಸಲ್ಮಾನ್ ಧರ್ಮ ಸಂಪ್ರದಾಯವಾಗಿದೆ. ಮೇಲಾಗಿ ಈ ಬಾರಿ ಗೌರಿ ಗಣೇಶ ಹಬ್ಬವನ್ನು ಉಭಯ ಸಮಾಜದ ಬಾಂಧವರು ಈ ಹಬ್ಬಗಳನ್ನು ಬಹಳ ಶಾಂತಿಯುತವಾಗಿ ಆಚರಣೆ ಮಾಡಿ ಸೌಹಾರ್ದತೆ ಯಿಂದ ಬಾಳ ಬೇಕಾಗಿದೆ. ಈ ನಾಡಿನಲ್ಲಿ ಇತಿಹಾಸದಲ್ಲಿ ಎರಡು ಸಮುದಾಯಗಳ ಹಬ್ಬಗಳು ಬಂದರೆ ಸೌಹಾರ್ದವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ. ಎರಡು ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷ್ಯ ವಹಿಸಿ ಹಬ್ಬಗಳನ್ನು ಆಚರಣೆ ಮಾಡಲು ಮುಂದಾಗಬೇಕು. ಈ ದಿನ ಈ ಯುವಕರು ಒಟ್ಟಾಗಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುತ್ತಾ ಬಂದಿರುವುದು ಬಹಳ ಸಂತಸದ ವಿಚಾರ. ಇದೇ ರೀತಿ ಸೌಹಾರ್ದತೆ ಆಚರಣೆ ಪ್ರತಿ ಜಿಲ್ಲೆಯಲ್ಲಿ ಆದರೆ ಬಹಳ ಉತ್ತಮ ಬೆಳವಣಿಗೆ ರಾಜ್ಯದಲ್ಲಿ ಕಾಣುತ್ತದೆ ಎಂದು ಹೇಳಿದರು.

ಬಾಲಿವುಡ್ ನಟಿ ಪೂಜಾ ಚೋಪ್ರಾ ಮಾತನಾಡಿ, ಇತ್ತೀಚೆಗೆ ನಮ್ಮನ್ನು ಅಗಲಿದ ಮೇರು ನಟ ಪುನೀತ್ ರಾಜ್ ಕುಮಾರ್ ನೆನೆದು ಭಾವುಕರಾಗಿದರು. ಆ ನಂತರ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ತಿಳಿಸಿದರು ಆನಂತರ ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿಸುವ ಆಸೆ ಇದೆ ಎಂದು ಹೇಳಿದರು. ಕನ್ನಡ ಅಂದರೆ ನನಗೆ ಅಚ್ಚುಮೆಚ್ಚು ಅದರಲ್ಲೂ ಮೈಸೂರು ಎಂದರೆ ತುಂಬಾನೇ ಇಷ್ಟ ಮೈಸೂರು ಅರಮನೆ ಸೇರಿದಂತೆ ಇನ್ನಿತರ ಸ್ಥಳಗಳ ಮೈಸೂರಿನಲ್ಲಿ ಬಹಳ ಜನಪ್ರಿಯವಾಗಿರುವುದು ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಕರ್ನಾಟಕದಲ್ಲಿ ಅದು ಮೈಸೂರಿನಲ್ಲೇ ಇರಲು ಆಸೆ ಪಡುತ್ತೇನೆ ಎಂದು ಹೇಳಿದರು. ರಾಜ್ಯಾದ್ಯಂತ ನಾನು ಮುಖ್ಯ ಪಾತ್ರದಲ್ಲಿ ನಟಿಸಿರುವ ಚಿತ್ರ ಜಾನ್ ಚಾರ್ ಯಾರ್ ಎಂಬ ಹಿಂದಿ ಚಿತ್ರ ಬಿಡುಗಡೆಯಾಗಲಿದೆ ಮಹಿಳೆಯರು ಧೈರ್ಯವಾಗಿ ಜೀವನ ನಡೆಸುವುದು ಮತ್ತು ಸಬಲೀಕರಣ ಬಗ್ಗೆ ಮಾಹಿತಿಯುಳ್ಳ ಚಿತ್ರವಾಗಿದ್ದು ದಯಮಾಡಿ ಪ್ರತಿಯೊಬ್ಬರು ವೀಕ್ಷಿಸಬೇಕೆಂದು ಮನವಿ ಮಾಡಿದರು

ಮುಸಲ್ಮಾನ್ ಧರ್ಮಗುರು ಮೊಹಮ್ಮದ್ ಯೂಸಫ್, ಸುಜೀವ್ ಕಾಂಗ್ರೆಸ್ ಮುಖಂಡರಾದ ಎನ್.ಎಂ.ನವೀನ್ ಕುಮಾರ್, ವಿನಯ್ ಕಣಗಾಲ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ವಿನಯ್ ಕಣಗಾಲ್, ರಾಜೇಶ್, ಸುನಿಲ್ ನಾರಾಯಣ್ ಇನ್ನಿತರರು ಹಾಜರಿದ್ದರು.


Spread the love