ಹಿಂದೂ ಸಂಘಟನೆಯ ನಾಯಕರ ವಿರುದ್ದ ಅವಮಾನಕರ ಪೋಸ್ಟ್ – ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಕೆ

Spread the love

ಹಿಂದೂ ಸಂಘಟನೆಯ ನಾಯಕರ ವಿರುದ್ದ ಅವಮಾನಕರ ಪೋಸ್ಟ್ – ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಕೆ

ಮಂಗಳೂರು: ಬಜರಂಗದಳ ಸಂಘಟನೆಯ ಮೇಲೆ ಮತ್ತು ಅದರ ನಾಯಕರಾದ ಶರಣ್ ಪಂಪುವೆಲ್ ರವರ ಮೇಲೆ ಅವಮಾನಕರ ಪೋಸ್ಟ್ / ವಿಡಿಯೋ ಹಾಕಿರುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು

ಬಜರಂಗದಳ ಸಂಘಟನೆ ಸಮಾಜದಲ್ಲಿ ನಿರಂತರವಾಗಿ ಸೇವಾಕಾರ್ಯಗಳನ್ನು ಮಾಡುತ್ತಾ ಅಶಕ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಿಕೊಂಡು ಬರುತಿದ್ದು, ಜೊತೆಗೆ ಸಮಾಜದಲ್ಲಿ ಯುವಕರಿಗೆ ಸಂಸ್ಕಾರ ನೀಡುವ ಕೆಲಸ ಮಾಡುತ್ತಿದೆ ಅಂತಹ ಆಂಜನೇಯ ದೇವರ ಹೆಸರಿನ ಸಂಘಟನೆಯನ್ನು “KARAVALI RASHEED ” ಎಂಬ ಟ್ರೊಲ್ ಪೇಜ್ ಮತ್ತು Nafeez ahmed Nafeez ಎಂಬ ಪೇಜ್ ಸಾಮಾಜಿಕ ಜಾಲತಾಣದಲ್ಲಿ ಸಂಘಟನೆಯನ್ನು ಅಶ್ಲೀಲವಾಗಿ ಮತ್ತು ಮಾನಹಾನಿಕಾರಕ ಸುಳ್ಳು ಸುದ್ದಿಯ ವಿಡಿಯೋವನ್ನು ಹಂಚಿದ್ದು ಅಲ್ಲದೆ ನಮ್ಮ ನಾಯಕರರಾದ ನಮ್ಮ ಪ್ರಾಂತ ಸಹ ಕಾರ್ಯದರ್ಶಿಯವರಾದ ಶರಣ್ ಪಂಪುವೆಲ್ ರವರ ಮೇಲೆ ಅಶ್ಲೀಲವಾಗಿ ಎಡಿಟ್ ಮಾಡಿ ಹಂಚಿ ಅವರ ಮಾನಹಾನಿ ಮಾಡಿರುವುದು ಅಲ್ಲದೆ ಇಡೀ ಸಂಘಟನೆಯನ್ನು ಅವಮಾನ ಮಾಡುತ್ತಿದ್ದಾರೆ.

ಇದರಿಂದಾಗಿ ಸಮಾಜದ ಸ್ವಾಸ್ಥ್ಯ್ಸ ಕೆಡುವಂತಹ ಭಯ ನಮಗಿದೆ .ನಮ್ಮ ಸಂಘಟನೆಯ ಬಗ್ಗೆಯೂ ದ್ವೇಷ ಪೂರಿತವಾದ ಸಂದೇಶವನ್ನು ನಿರಂತರವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದಾರೆ. ಇದೊಂದು ವ್ಯವಸ್ಥಿತ ಷಡ್ಯಂತ್ರವಾಗಿದ್ದು. ಹಿಂದು -ಮುಸ್ಲಿಂ ಮದ್ಯೆ ದ್ವೇಷ ಬಿತ್ತುವ ಉದ್ದೇಶದಿಂದ ಕಳುಹಿಸುತ್ತಿದ್ದಾರೆ. ಹಿಂದು ಸಂಘಟನೆ ಬಜರಂಗದಳದ ಬಗ್ಗೆ ಮತ್ತು ನಮ್ಮ ನಾಯಕರ ಚಾರಿತ್ರ್ಯದ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಿ ಹಿಂದು – ಮುಸಲ್ಮಾನರ ನಡುವೆ ಸಂಘರ್ಷ ಸೃಷ್ಟಿಸುತ್ತಿದ್ದಾರೆ.

ಹೀಗಾಗಿ ಇಂತಹ ಹೀನ ಕೃತ್ಯ ನಡೆಸುವ “KARAVALI RASHEED ” / Nafeez ahmed Nafeez ಪೇಜ್ ಅಡ್ಮಿನ್ ಗಳು ಹಾಗೂ ಇದನ್ನು ಹಂಚುತ್ತಿರುವ Shivanna S/ Sathish Shetty / Suri Poojary / Razaak Razaak /Sayyad Mohammed sahabab / Jafer Mangalore / Kiran Suvarna Kiran suvarna / Francis D’souza / Ajith Salian / Ganesh N Madaga / Faizal K Mangalore ಇವರುಗಳ ಮೇಲೆ ಈಗಾಗಲೇ ತಮಗೆ ದೂರನ್ನು ನೀಡಿದ್ದು, ಈ ವ್ಯವಸ್ಥಿತ ಕೃತ್ಯದ ಹಿಂದಿರುವವರ ಹಾಗು ಈ ವಿಡಿಯೋ ವನ್ನು ಹಂಚುವವರ ಮೇಲೆ ಸೂಕ್ತ ಕಾನೂನುಕ್ರಮ ಕೈಗೊಂಡು ನ್ಯಾಯ ಒದಗಿಸಬೇಕಾಗಿ ಆಗ್ರಹಿಸಿದ್ದಾರೆ.


Spread the love