ಹಿಂದೂ ಸಮಾಜ ಆಕ್ಷನ್ ಗೆ ರಿಯಾಕ್ಷನ್ಸ್ ತೋರಿಸುವ ಅಗತ್ಯ ಇದೆ – ಕಲ್ಲಡ್ಕ ಪ್ರಭಾಕರ ಭಟ್‌

Spread the love

 ಹಿಂದೂ ಸಮಾಜ ಆಕ್ಷನ್ ಗೆ ರಿಯಾಕ್ಷನ್ಸ್ ತೋರಿಸುವ ಅಗತ್ಯ ಇದೆ – ಕಲ್ಲಡ್ಕ ಪ್ರಭಾಕರ ಭಟ್‌

ಉಡುಪಿ: ಹಿಂದೂ ಸಮಾಜ ಆಕ್ಷನ್ ಗೆ ರಿಯಾಕ್ಷನ್ಸ್ ತೋರಿಸುವ ಅಗತ್ಯ ಇದೆ ನಾವು ರಿಯಾಕ್ಷನ್ ತೋರಿಸಿದ್ದರಿಂದ ವಿವಾದ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಯಿತು ಎಂದು ಆರ್‌ ಎಸ್‌ ಎಸ್‌ ನಾಯಕ ಕಲ್ಕಡ್ಕ ಪ್ರಭಾಕರ ಭಟ್‌ ಹೇಳಿದರು.

ಅವರು ಉಡುಪಿಯ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಧಾರ್ಮಿಕ  ಕಾರ್ಯಕ್ರಮದಲ್ಲಿ ಮಾತನಾಡಿ ನಿಯಮಕ್ಕೆ ವಿರುದ್ಧವಾದ ಹಿಜಾಬ್‌ ಹಾಕಿದ್ದು ತಪ್ಪಾಗಲಿಲ್ಲ ಆದರೆ ನಮ್ಮ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿದ್ದೇ ತಪ್ಪಾಯ್ತಾ? ಇಂದು ಕೇಸರಿ ಅಂದ ಕೂಡ ಕೆಲವರಿಗೆ ಮೈಯಲ್ಲಿ ತುರಿಕೆ ಬರುತ್ತಿದೆ ಎಂದು ಭಟ್‌ ಹೇಳಿದರು.

ಇಂದು ಆಕ್ಷನ್ ಗೆ ರಿಯಾಕ್ಷನ್ ತೋರಿಸದೆ ಹಿಂದೂ ಸಮಾಜ ಸೋತಿದ್ದು, ಹೊಡೆದರೂ ಬಡಿದರೂ ಹಿಂದೂಗಳು ಸುಮ್ಮನಿರಬೇಕಂತೆ ಆದರೆ ಇನ್ನು ಹಿಂದೂಗಳು ಸುಮ್ಮನೆ ಕುಳಿತುಕೊಳ್ಳಬೇಕು ಸಾಧ್ಯವಿಲ್ಲ. ಹಿಜಾಬ್ ಒಂದು ಕೇವಲ ಬಟ್ಟೆ ಹೋರಾಟ ಅಲ್ಲ ಇ ಹೋರಾಟದ ಹಿಂದ ಇನ್ನೊಂದು ದೇಶವಿಭಜನೆಯ ಹುನ್ನಾರ ಇದೆ ಎಂದರು.

ಜಗತ್ತಿನ ಸರ್ವಶ್ರೇಷ್ಠ ಜೀವನಪದ್ಧತಿ ಇರುವುದು ಹಿಂದೂಧರ್ಮದಲ್ಲಿ ಮಾತ್ರ ಇದ್ದು ಸರ್ವಧರ್ಮ ಸಮ್ಮೇಳನ ಎಂಬ ಶಬ್ದವೇ ಸರಿಯಲ್ಲ. ಮುಸಲ್ಮಾನರು, ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳೋದು ನಾಚಿಗೇಡು ಒಂದು ದೇವರನ್ನು ಪೂಜೆ ಮಾಡಿ ಅಂತ ಹೇಳುವುದು ಧರ್ಮವಾಗಲು ಸಾಧ್ಯವಿಲ್ಲ. ಒಂದೇ ದೇವರು ಎನ್ನುವ ಕ್ರೈಸ್ತ ಮತ್ತು ಇಸ್ಲಾಂ  ಧರ್ಮವಾಗಲು ಸಾಧ್ಯವಿಲ್ಲ. ನಿಯಮ ಪಾಲಿಸದವರನ್ನು ಕತ್ತರಿಸುವ ಮತ ಧರ್ಮವಾಗಲು ಸಾಧ್ಯವಿಲ್ಲ ಒಪ್ಪಿಕೋ.. ಮತಾಂತರ ಆಗು ಇಲ್ಲದಿದ್ದರೆ ಓಡಿಹೋಗು ಈ ನಿಯಮ ಇರುವ ಧರ್ಮ ಧರ್ಮವೇ ಅಲ್ಲ ಎಂದರು.


Spread the love