ಹಿಜಾಬ್‌ ಕುರಿತು ಹೇಳಿಕೆ ನೀಡಿದ ದಕ ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಅಕ್ಷಿತ್‌ ಸುವರ್ಣರಿಗೆ ಕೊಲೆ ಬೆದರಿಕೆ – ದೂರು ದಾಖಲು

Spread the love

ಹಿಜಾಬ್‌ ಕುರಿತು ಹೇಳಿಕೆ ನೀಡಿದ ದಕ ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಅಕ್ಷಿತ್‌ ಸುವರ್ಣರಿಗೆ ಕೊಲೆ ಬೆದರಿಕೆ – ದೂರು ದಾಖಲು

ಮಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್‌ ವಿವಾದದ ಕುರಿತು ಮಾಧ್ಯಮ ಹೇಳಿಕೆ ನೀಡಿದ ದಕ ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಅಕ್ಷಿತ್‌ ಸುವರ್ಣ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಕೊಲೆ ಬೆದರಿಕೆ ಹಾಕಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಬುಧವಾರ ದೂರು ನೀಡಲಾಯಿತು.

ಇತ್ತೀಚೆಗೆ ಹಿಜಾಬ್‌ ವಿಚಾರವಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಿಡಿಗೇಡಿಗಳು ಕೆಟ್ಟಪದಗಳನ್ನು ಬಳಸಿ ನಿಂದಿಸಿದ್ದು, ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ಜೆಡಿಎಸ್ ರಾಜ್ಯ ಯುವ ನಾಯಕರಾದ ಫೈಝಲ್ ರೆಹಮಾನ್, ಜಿಲ್ಲಾ ನಾಯಕರುಗಳಾದ ಸತ್ತಾರ್ ಬಂದರ್, ಮೊಹಮ್ಮದ್ ಫೈಝಲ್, ಶ್ರೀನಾಥ್, ಯಶು, ಸಿನಾನ್ ಉಪಸ್ಥಿತರಿದ್ದರು.


Spread the love