ಹಿಜಾಬ್‌ ವಿಚಾರ ಬಿಜೆಪಿಗರ ವ್ಯವಸ್ಥಿತ ಹುನ್ನಾರ – ಕಾಪು ಯುವ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ ಸಾಲ್ಯಾನ್‌ ಆಕ್ರೋಶ

Spread the love

ಹಿಜಾಬ್‌ ವಿಚಾರ ಬಿಜೆಪಿಗರ ವ್ಯವಸ್ಥಿತ ಹುನ್ನಾರ – ಕಾಪು ಯುವ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ ಸಾಲ್ಯಾನ್‌ ಆಕ್ರೋಶ

ಉಡುಪಿ: ಹಿಜಾಬ್‌ ವಿಚಾರ ಬಿಜೆಪಿಗರ ವ್ಯವಸ್ಥಿತ ಹುನ್ನಾರವಾಗಿದೆ ಎಂದು ಕಾಪು ಯುವ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ ಸಾಲ್ಯಾನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯೋಜನೆಗಳು ಸಂಪೂರ್ಣ ವಿಫಲವಾದ ಜನರ ಮನಸ್ಸನ್ನು ಬೇರೆ ಕಡೆ ಕೇಂದ್ರಿಕರಿಸಲು ಬಿಜೆಪಿಯವರು ಮಾಡುವ ಷಡ್ಯಂತ್ರಗಳ ಹಲವಾರು ಆಗಿದ್ದು ಹಿಜಾಬ್‌ ಕೂಡ ಅದೇ ಪುಸ್ತಕದ ಒಂದು ಕಥೆಯಾಗಿದೆ. ಇತ್ತೀಚೆಗೆ ನಾರಾಯಣ ಗುರುಗಳ ಟ್ಯಾಬ್ಲೋ ವಿಚಾರವನ್ನು ಮರೆಮಾಚಲು ಹಿಜಾಬ್‌ ವಿಚಾರ ಮುಂದಿಟ್ಟು ಅವರ ರಾಜಕೀಯದ ದಾಳವಾಗಿ ಉಪಯೋಗಿಸುವುದು ನಿಜಕ್ಕೂ ಖಂಡನೀಯ. ವಿದ್ಯಾರ್ಥಿಗಳ ಜೀವನದಲ್ಲಿ ಓದಿನ ಬದಲು ಧರ್ಮದ ಅಮಲನ್ನು ಏರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ವ್ಯವಸ್ಥಿತ ಅಜೇಂಡಾ ಆಗಿದೆ. ಅಲ್ಲದೆ ವಿನಾಕಾರಣ ಕಾಂಗ್ರೆಸ್‌ ನಾಯಕರ ಮೇಲೆ ಆರೋಪ ಮಾಡುವ ಬಿಜೆಪಿಗರ ವರ್ತನೆ ಖಂಡನೀಯವಾಗಿದೆ.

ಕೇಂದ್ರ ಸರಕಾರದ ವಿಫಲ ಬಜೆಟ್‌ ನ ಮರೆಮಾಚಲು ಕೂಡ ಹಿಜಾಬ್‌ ವಿಚಾರವನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತದೆ. ಸದಾ ಯುವಜನರ ಕುರಿತು ಮಾತನಾಡುವ ಮೋದಿಯವರ ಯುವ ಜನರ ಕಾಳಜಿ ಬಜೆಟ್‌ ಎಲ್ಲಿಯೂ ಕಾಣಿಸುತ್ತಿಲ್ಲ ಭಾಷಣಗಳಿಗೆ ಸೀಮಿತವಾಗಿರುವ ಮೋದಿಯವರ ಮಾತು ಬಿಜೆಪಿಗರು ಮನಸ್ಸನ್ನು ಬೇರೆ ಕಡೆ ವಿಕೇಂದ್ರಿಕರಿಸಲು ಹಿಜಾಬ್‌ ನಂತಹ ಅನಗತ್ಯ ವಿಷಯಗಳನ್ನು ಹುಟ್ಟು ಹಾಕಿ ಎತ್ತಿ ಹಿಡಿಯೋದು ಸರ್ವೆ ಸಾಮಾನ್ಯವಾಗಿದೆ. ಬಿಜೆಪಿಗರ ಇಂತಹ ಸಮಯಾನುಸಾರದ ಕಥೆಗಳನ್ನು ನಂಬಲು ಜನ ಇಲ್ಲಿ ಯಾರೂ ಮೂರ್ಖರಿಲ್ಲ. ವಿದ್ಯಾರ್ಥಿಗಳನ್ನು ಮುಂದೆ ಇಟ್ಟು ರಾಜಕೀಯವನ್ನು ಮಾಡುವುದನ್ನು ಬಿಟ್ಟು ನೀವೆ ಹುಟ್ಟಿಸಿದ ಹಿಜಾಬ್‌ ವಿಚಾರವನ್ನು ಸರಿಪಡಿಸಿ ಇಲ್ಲ ನಿಮ್ಮ ಸರಕಾರ ಕೊಟ್ಟಿರೋ ಆಶ್ವಾಸನೆಗೆಳನ್ನು ಈಡೇರಿಸಲಾಗದೆ ಬಿಜೆಪಿ ನಾಯಕರೂ ಕೂಡ ಹಿಜಾಬ್‌ ಹಾಕಿಕೊಂಡು ಓಡಾಡುವ ಸನ್ನಿವೇಶ ಬಂದೀತು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love